ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗಲ್ಲ ಈ ರೈಲುಗಳು, ಪಟ್ಟಿ
ಬೆಂಗಳೂರು, ಜೂನ್ 01: ಬೆಂಗಳೂರು ನಗರದ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಯಶವಂತಪುರ ರೈಲು ನಿಲ್ದಾಣವನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ಈಗ ಯಶವಂತಪುರ ನಿಲ್ದಾಣದ ಮೇಲೆಯೂ ಒತ್ತಡ ಹೆಚ್ಚಾಗಿದೆ.
ನೈಋತ್ಯ ರೈಲ್ವೆ ಕೆಲವು ರೈಲುಗಳು ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗದೇ ಯಶವಂತಪುರ ಬೈಪಾಸ್ ಮೂಲಕ ಸಂಚಾರ ನಡೆಸಲಿದೆ. ರೈಲುಗಳ ಪಟ್ಟಿಯನ್ನು ನೀಡಲಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ಇಲ್ಲಿದೆ.

ಒಟ್ಟು ಮೂರು ಜೋಡಿ ರೈಲುಗಳು ಯಶವಂತಪುರ ಬೈಪಾಸ್ ಮೂಲಕ ಸಂಚಾರ ನಡೆಸುತ್ತವೆ. ರೈಲು ಪ್ರಯಾಣಿಕರು ಈ ರೈಲುಗಳ ವೇಳಾಪಟ್ಟಿ, ನಿಲ್ದಾಣಗಳನ್ನು ನೋಡಿಕೊಂಡು ಸಂಚಾರ ನಡೆಸಬೇಕು ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಾವ-ಯಾವ ರೈಲುಗಳು
* ರೈಲು ನಂಬರ್ 11021 ದಾದರ್-ತಿರುನಲ್ವೇಲಿ. ಯಶವಂತಪುರ, ಬಾಣಸವಾಡಿ, ಹೊಸೂರು, ಧರ್ಮಪುರಿ, ಓಮಲೂರು ಮೂಲಕ ಸಂಚಾರ ನಡೆಸುತ್ತಿತ್ತು. ಈ ರೈಲನ್ನು ಚಿಕ್ಕಬಣಾವರ, ಯಶವಂತಪುರ ಬೈಪಾಸ್, ಲೊಟ್ಟೆಗೊಲ್ಲಹಳ್ಳಿ, ಬೈಯಪ್ಪನಹಳ್ಳಿ ಮೂಲಕ ಸಂಚಾರ ನಡೆಸಲಿದೆ. ಹೆಚ್ಚುವರಿಯಾಗಿ ಚಿಕ್ಕಬಾಣಾವರ, ಸರ್. ಎಂ. ವಿಶ್ವೇಶ್ವರಯ್ಯ ನಿಲ್ದಾಣಗಳು ಇರಲಿವೆ.
* ರೈಲು ನಂಬರ್ 11022. ತಿರುನಲ್ವೇಲಿ-ದಾದರ್. ಓಮಲೂರು, ಧರ್ಮಪುರಿ, ಬಾಣಸವಾಡಿ, ಯಶವಂತಪುರ ಮೂಲಕ ಸಂಚಾರ ನಡೆಸುತ್ತಿತ್ತು. ಈಗ ಬೈಯಪ್ಪನಹಳ್ಳಿ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಬೈಪಾಸ್ & ಚಿಕ್ಕಬಣಾವರ ಮೂಲಕ ಸಂಚಾರ ನಡೆಸಲಿದೆ. ಹೆಚ್ಚುವರಿಯಾಗಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ & ಚಿಕ್ಕಬಣಾವರ ಹೆಚ್ಚುವರಿ ನಿಲ್ದಾಣ ನಿಲುಗಡೆಗೊಳ್ಳಲಿದೆ.
* ರೈಲು ನಂಬರ್ 11005. ದಾದರ್-ಪುದುಚೇರಿ. ಯಶವಂತಪುರ, ಬಾಣಸವಾಡಿ, ಕೆ. ಆರ್. ಪುರ, ಬಂಗಾರಪೇಟೆ, ಜೋಲಾರಪಟ್ಟಿ ಮೂಲಕ ಸಂಚಾರ ನಡೆಸುತ್ತದೆ. ಪರಿಷ್ಕೃತ ಆದೇಶದಂತೆ ಚಿಕ್ಕಬಣಾವರ, ಯಶವಂತಪುರ ಬೈಪಾಸ್, ಲೊಟ್ಟೆಗೊಲ್ಲಹಳ್ಳಿ, ಬಂಗಾರಪೇಟೆ ಮೂಲಕ ಸಂಚಾರ ನಡೆಸಲಿದೆ. ಹೆಚ್ಚುವರಿಯಾಗಿ ಚಿಕ್ಕಬಣಾವರ, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ವೈಟ್‌ಫೀಲ್ಡ್ ನಿಲ್ದಾಣ ಸಿಗಲಿದೆ.
* ರೈಲು ನಂಬರ್ 11006 ಪುದುಚೇರಿ-ದಾದರ್. ಮೊದಲು ರೈಲು ಜೋಲಾರಪಟ್ಟಿ, ಬಂಗಾರಪೇಟೆ, ಕೆ. ಆರ್. ಪುರ, ಬಾಣಸವಾಡಿ, ಯಶವಂತಪುರ ಮೂಲಕ ಸಂಚಾರ ನಡೆಸುತ್ತಿದೆ. ಪರಿಷ್ಕೃತ ಆದೇಶದಂತೆ ಬಂಗಾರಪೇಟೆ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಬೈಪಾಸ್ & ಚಿಕ್ಕಬಣಾವರ ಮೂಲಕ ಸಂಚಾರ ನಡೆಸಲಿದೆ. ಹೆಚ್ಚುವರಿಯಾಗಿ ವೈಟ್‌ಫೀಲ್ಡ್, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಚಿಕ್ಕಬಣಾವರ ನಿಲ್ದಾಣ ಸಿಗಲಿದೆ.
* 17312 ಎಸ್‌ಎಸ್‌ಎಸ್ ಹುಬ್ಬಳ್ಳಿ- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್. ರೈಲು ಯಶವಂತಪುರ, ಬಾಣಸವಾಡಿ, ಕೆಆರ್ ಪುರಂ, ಬಂಗಾರಪೇಟೆ, ಜೋಲಾರ್‌ಪಟ್ಟಿ ಮೂಲಕ ಸಾಗುತ್ತದೆ. ಆದರೆ ಈಗ ಚಿಕ್ಕಬಣಾವರ, ಯಶವಂತಪುರ ಬೈಪಾಸ್, ಲೊಟ್ಟೆಗೊಲ್ಲಹಳ್ಳಿ, ಬಂಗಾರಪೇಟೆ ಮೂಲಕ ಸಾಗಲಿದೆ. ಹೆಚ್ಚುವರಿಯಾಗಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ & ವೈಟ್‌ಫೀಲ್ಡ್ ನಿಲ್ದಾಣ ಸಿಗಲಿದೆ.
* 17311 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಎಸ್ಎಸ್‌ಎಸ್ ಹುಬ್ಬಳ್ಳಿ. ಈ ರೈಲು ಜೋಲಾರಪಟ್ಟಿ, ಬಂಗಾರಪೇಟೆ, ಕೆ. ಆರ್. ಪುರ, ಬಾಣಸವಾಡಿ, ಯಶವಂತಪುರ ಮೂಲಕ ಸಂಚಾರ ನಡೆಸುತ್ತಿದೆ. ಈಗ ಬಂಗಾರಪೇಟೆ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಬೈಪಾಸ್, ಚಿಕ್ಕಬಣಾವರ ಮೂಲಕ ಸಂಚಾರ ನಡೆಸಲಿದೆ. ಹೆಚ್ಚುವರಿಯಾಗಿ ವೈಟ್‌ಫೀಲ್ಡ್, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳು ಸಿಗಲಿವೆ.












Click it and Unblock the Notifications