ಹುಬ್ಬಳ್ಳಿ-ಮೈಸೂರು ವಯಾ ದಾವಣಗೆರೆ ಇಂಟರ್‌ಸಿಟಿ ರೈಲು ಓಡಿಸಿ

ದಾವಣಗೆರೆ, ಜುಲೈ 19; ಉತ್ತರ ಕರ್ನಾಟಕ ಮತ್ತು ಸಾಂಸ್ಕೃತಿಕ ನಗರಿ ಮೈಸೂರು ಸಂಪರ್ಕಿಸಲು ಇಂಟರ್‌ಸಿಟಿ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಪ್ರತಿದಿನ ನೂರಾರು ಜನರು ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಾರೆ, ರೈಲು ಸಂಚಾರದಿಂದ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಗಿದೆ.

ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘದ ಪ್ರಧಾನ ಕಾರ್ಯದರ್ಶಿ ರೋಹಿತ್ ಎಸ್. ಜೈನ್ ರೈಲ್ವೆ ಇಲಾಖೆಯನ್ನು ಹುಬ್ಬಳ್ಳಿ-ಮೈಸೂರು ವಯಾ ದಾವಣಗೆರೆ ಇಂಟರ್‌ಸಿಟಿ ರೈಲು ಓಡಿಸಬೇಕು ಎಂದು ಆಗ್ರಹಿಸಿದ್ದಾರೆ.

Demand For Intercity Train

ಹುಬ್ಬಳ್ಳಿ, ದಾವಣಗೆರೆ ಭಾಗದಿಂದ ಪ್ರತಿದಿನ ನೂರಾರು ಪ್ರಯಾಣಿಕರು, ಪ್ರವಾಸಿಗರು, ಉದ್ಯೋಗಿಗಳು, ವಿದ್ಯಾರ್ಥಿಗಳು ಮೈಸೂರು ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ, ಹುಬ್ಬಳ್ಳಿಯಿಂದ ಮೈಸೂರಿಗೆ ದಾವಣಗೆರೆ ಮಾರ್ಗವಾಗಿ ಸಂಚಾರ ನಡೆಸುವ ರೈಲುಗಳು ಸಂಖ್ಯೆ ತುಂಬಾ ಕಡಿಮೆ ಇದೆ ಎಂದು ಗಮನ ಸೆಳೆಯಲಾಗಿದೆ.

ಯಾವ ಮಾರ್ಗದಲ್ಲಿ ಪ್ರಯಾಣ?; ಹುಬ್ಬಳ್ಳಿ-ಮೈಸೂರು ವಯಾ ದಾವಣಗೆರೆ ಇಂಟರ್‌ಸಿಟಿ ರೈಲು ದಾವಣಗೆರೆ, ಬೀರೂರು, ಅರಸೀಕೆರೆ ಮಾರ್ಗವಾಗಿ ಸಂಚಾರ ನಡೆಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ವಿವರಣೆ ನೀಡಲಾಗಿದೆ.

ಅರಸೀಕೆರೆ, ಬೀರೂರು ಮಾರ್ಗವಾಗಿ ರೈಲು ಸಂಚಾರ ನಡೆಸಿದರೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಪ್ರಯಾಣಿಕರಿಗೆ ಸಹ ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಮತ್ತು ಸಾಂಸ್ಕೃತಿಕ ನಗರಿ ಬೆಸೆಯಲು ವಿಶೇಷ ರೈಲು ಓಡಿಸಬೇಕು ಎಂದು ಮನವಿ ಮಾಡಲಾಗಿದೆ. ಆದರೆ ರೈಲ್ವೆ ಇಲಾಖೆ ಹೊಸ ಇಂಟರ್‌ಸಿಟಿ ರೈಲುಗಳನ್ನು ಓಡಿಸುವ ಕುರಿತು ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.

ಮೈಸೂರು ಮತ್ತು ಹುಬ್ಬಳ್ಳಿ ನಡುವೆ ವಿಶ್ವಮಾನವ ರೈಲು ಸಂಚಾರ ನಡೆಸುತ್ತಿದೆ. ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಬೆಂಗಳೂರು, ಮೈಸೂರು ಸೇರುತ್ತದೆ ಹುಬ್ಬಳ್ಳಿಯಲ್ಲಿ ವಲಯದ ಪ್ರಧಾನ ಕಚೇರಿ ಇದ್ದು, ದಾವಣಗೆರೆ ಮೂಲಕ ಮೈಸೂರಿಗೆ ಇಂಟರ್‌ಸಿಟಿ ರೈಲು ಆರಭಿಸಬೇಕು ಎಂಬುದು ಈಗಿನ ಬೇಡಿಕೆಯಾಗಿದೆ.

ಜುಲೈ 20, 21ರಂದು ರೈಲು ಮಾರ್ಗ ಬದಲಾವಣೆ; ಮಹಾರಾಷ್ಟ್ರದ ದೌಂಡ್‌-ಮನ್ಮಾಡ್‌ ವಿಭಾಗ ವ್ಯಾಪ್ತಿಯ ಬೇಲಾಪುರ-ಪಧೆಗಾಂವ್ ನಿಲ್ದಾಣಗಳಲ್ಲಿ ಜೋಡಿ ಮಾರ್ಗದ ಕಾಮಗಾರಿಯ ಕಾರಣ ಕರ್ನಾಟಕ ಮತ್ತು ದೆಹಲಿ ನಡುವೆ ಸಂಚಾರ ನಡೆಸುವ ಕೆಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಕೆಎಸ್ಆರ್ ಬೆಂಗಳೂರು-ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್, ನಿಜಾಮುದ್ಧೀನ್-ವಾಸ್ಕೋ-ಡಾಗಾಮ ಎಕ್ಸ್‌ಪ್ರೆಸ್, ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಹಜರತ್ ನಿಜಾಮುದ್ಧೀನ್ ರೈಲಿನ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೇಳಿದೆ.

ಈ ರೈಲುಗಳಿಗೆ ಶಾಶ್ವತ ಬೋಗಿಗಳ ಜೋಡಣೆ; ನೈಋತ್ಯ ರೈಲ್ವೆ ಈ ರೈಲುಗಳಿಗೆ ಶಾಶ್ವತ ಬೋಗಿಗಳನ್ನು ಜೋಡಣೆ ಮಾಡಿ ಆದೇಶ ಹೊರಡಿಸಿದೆ. ರೈಲುಗಳ ಸಂಖ್ಯೆ 07339/ 07340 ಎಸ್.ಎಸ್.ಎಸ್ ಹುಬ್ಬಳ್ಳಿ - ಕೆ. ಎಸ್. ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲುಗಳಿಗೆ 4 ದ್ವಿತೀಯ ದರ್ಜೆಯ ಸ್ಲಿಪರ್ ಬೋಗಿಗಳನ್ನು ಜುಲೈ 16 ರಿಂದ ಹುಬ್ಬಳ್ಳಿ ಮತ್ತು ಜುಲೈ 17 ರಿಂದ ಬೆಂಗಳೂರು ನಿಲ್ದಾಣಗಳಿಂದ ಶಾಶ್ವತವಾಗಿ ಜೋಡಿಸಲಾಗುತ್ತಿದೆ.

ರೈಲುಗಳ ಸಂಖ್ಯೆ 06223/06224 ಶಿವಮೊಗ್ಗ ಟೌನ್-ಎಂ.ಜಿ.ಆರ್ ಚೆನ್ನೈ ಸೆಂಟ್ರಲ್-ಶಿವಮೊಗ್ಗ ಟೌನ್‌ ಎಕ್ಸ್‌ಪ್ರೆಸ್ ರೈಲುಗಳಿಗೆ 2 ಎಸಿ ತ್ರಿ ಟೈಯರ್ ಬೋಗಿಗಳು ಮತ್ತು 2 ದ್ವಿತೀಯ ದರ್ಜೆಯ ಸ್ಲಿಪ‌ರ್ ಬೋಗಿಗಳನ್ನು ಜುಲೈ 16 ರಿಂದ ಶಿವಮೊಗ್ಗ ಟೌನ್ ಮತ್ತು ಜುಲೈ 17 ರಿಂದ ಚೆನ್ನೈ, ಸೆಂಟ್ರಲ್ ನಿಲ್ದಾಣಗಳಿಂದ ಶಾಶ್ವತ ಬೋಗಿಗಳನ್ನು ಜೋಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+