ಕರ್ನಾಟಕಕ್ಕೆ ಬರಲಿದೆ 5 ಅಮೃತ್ ಭಾರತ್ ರೈಲು?, ಮಾರ್ಗದ ವಿವರ

ಬೆಂಗಳೂರು, ಮೇ 30: ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಂತೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಸಹ ಭಾರೀ ಬೇಡಿಕೆ ಇದೆ. ಕರ್ನಾಟಕದಲ್ಲಿ 5 ಹೊಸ ಮಾರ್ಗದಲ್ಲಿ ಈ ಮಾದರಿಯ ರೈಲುಗಳನ್ನು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.

ಸದ್ಯ ಕರ್ನಾಟಕದಲ್ಲಿ ಒಂದು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. 2023ರ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರ್ಮಾಲ್ಡಾ ಟೌನ್-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದರು.

Demand For Five Amrit Bharat Express Train From Karnataka

ಈಗ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕಕ್ಕೆ ಹೆಚ್ಚು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು ಎಂದು ಬೇಡಿಕೆ ಇಡಲಾಗಿದೆ. ಯಾವ-ಯಾವ ಮಾರ್ಗದಲ್ಲಿ ರೈಲು ಓಡಿಸಬೇಕು ಎಂದು ಸಹ ಪಟ್ಟಿ ಮಾಡಲಾಗಿದೆ. ಲೋಕಸಭೆ ಚುನಾವಣೆ 2024ರ ಫಲಿತಾಂಶ ಬಂದು ಅಧಿಕಾರಕ್ಕೆ ಬರುವ ಹೊಸ ಸರ್ಕಾರ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ರಾಜ್ಯಕ್ಕೆ ನೀಡಲಿದೆಯೇ? ಕಾದು ನೋಡಬೇಕಿದೆ.

ಯಾವ-ಯಾವ ಮಾರ್ಗಗಳು

* ಮೈಸೂರು-ಬೆಂಗಳೂರು-ಮುಂಬೈ
* ಮೈಸೂರು-ಅಮಹದಾಬಾದ್-ದ್ವಾರಕಾ
* ಮಂಗಳೂರು-ವೈಷ್ಣೋದೇವಿ-ಕಾತ್ರಾ
* ಬೆಳಗಾವಿ-ತಿರುಪತಿ-ಚೆನ್ನೈ
* ಬೆಳಗಾವಿ-ಹೊಸಪೇಟೆ-ಹೌರಾ

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತೀಯ ರೈಲ್ವೆಯ ಸೂಪರ್‌ ಫಾಸ್ಟ್ ಪ್ಯಾಸೆಂಜರ್ ರೈಲುಗಳಾಗಿವೆ. ಈ ರೈಲು ಹವಾನಿಯಂತ್ರಿತವಲ್ಲದ ಕೋಚ್‌ಗಳನ್ನು ಹೊಂದಿರುವ ಎಲ್‌ಎಚ್‌ಬಿ ಪುಶ್-ಪುಲ್ ರೈಲು ಆಗಿದೆ. ವೇಗವರ್ಧನೆಗಾಗಿ ಎರಡೂ ತುದಿಗಳಲ್ಲಿ ಲೋಕೋಗಳನ್ನು ಹೊಂದಿದೆ.

ಈ ರೈಲುಗಳು ಸುಂದರವಾದ ಮತ್ತು ಆಕರ್ಷಕ ವಿನ್ಯಾಸದ ಆಸನಗಳನ್ನು ಹೊಂದಿವೆ. ಉತ್ತಮ ಲಗೇಜ್ ರಾಕ್, ಸೂಕ್ತವಾದ ಮೊಬೈಲ್ ಹೋಲ್ಡರ್ ಹೊಂದಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಲ್‌ಇಡಿ ದೀಪಗಳು, ಸಿಸಿಟಿವಿ, ಮಾಹಿತಿ ನೀಡುವ ವ್ಯವಸ್ಥೆ ಮುಂತಾದ ಸುಧಾರಿತ ಸೌಲಭ್ಯವಿದೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 22 ಬೋಗಿಯನ್ನು ಹೊಂದಿವೆ. ಗಂಟೆಗೆ ಈ ರೈಲುಗಳು ಸುಮಾರು 130 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುತ್ತವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ದರಗಳು ಹೆಚ್ಚು ಎಂದು ಆರೋಪ ಮಾಡುವ ಪ್ರಯಾಣಿಕರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸಂಚಾರವನ್ನು ನಡೆಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2 ಹೊಸ ಅಮೃತ್ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದರು. ಈ ರೈಲು ದರ್ಭಾಂಗ-ಅಯೋಧ್ಯೆ-ಆನಂದ್ ವಿಹಾರ್ ಟರ್ಮಿನಲ್, ರ್ಮಾಲ್ಡಾ ಟೌನ್-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಸಂಚಾರ ನಡೆಸುತ್ತಿವೆ.

ಅಂತರರಾಜ್ಯಗಳ ನಡುವಿನ ಸಂಚಾರಕ್ಕೆ ಭಾರತೀಯ ರೈಲ್ವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಬಳಕೆ ಮಾಡುತ್ತಿದೆ. ಈ ರೈಲುಗಳಿಗೆ ಹೋಲಿಕೆ ಮಾಡಿದರೆ ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲುಗಳು ಐಷಾರಾಮಿಯಾಗಿದ್ದು, ದರಗಳು ಹೆಚ್ಚಿವೆ. ಆದರೆ ಈ ಮಾದರಿ ರೈಲುಗಳ ದರ ಕಡಿಮೆ ಇದ್ದು, ಸಮಾನ್ಯ ಜನರ ಸಂಚಾರಕ್ಕೆ ಅನುಕೂಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+