ಯಶವಂತಪುರ-ಬೀದರ್‌, ಯಲಹಂಕ-ಬೀದರ್ ದಸರಾ ವಿಶೇಷ ರೈಲು, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 19: ವಾರಾಂತ್ಯದ ರಜೆ, ದಸರಾ ಹಬ್ಬದ ಹಿನ್ನೆಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹಲವು ಮಾರ್ಗದಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಘೋಷಣೆ ಮಾಡಿದೆ. ಬೆಂಗಳೂರು-ಬೀದರ್ ನಡುವೆ ಸಹ ವಿಶೇಷ ರೈಲು ಓಡಿಸಲಾಗುತ್ತಿದೆ.

ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬೆಂಗಳೂರಿನ ಎರಡು ನಿಲ್ದಾಣಗಳಿಂದ ಬೀದರ್‌ಗೆ ವಿಶೇಷ ರೈಲುಗಳು ಓಡಲಿವೆ. ಯಶವಂತಪುರ- ಬೀದರ್ ಮತ್ತು ಯಲಹಂಕ-ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿದೆ.

Dasara Special Train Between Yelahanka Bidar And Yeshwanthpur Bidar Schedule

ಯಶವಂತಪುರ-ಬೀದರ್, ಯಲಹಂಕ-ಬೀದರ್ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ರೈಲುಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ರೈಲುಗಳ ವೇಳಾಪಟ್ಟಿ

* ರೈಲು ಸಂಖ್ಯೆ 06521/06522 ಯಶವಂತಪುರ-ಬೀದರ್ ನಿಲ್ದಾಣಗಳ ನಡುವೆ ಒಂದು ಟ್ರಿಪ್‌ ಸಂಚಾರ. ರೈಲು ಸಂಖ್ಯೆ 06521 ಯಶವಂತಪುರದಿಂದ ಅಕ್ಟೋಬರ್ 20 ರಂದು ರಾತ್ರಿ 11:15 ಗಂಟೆಗೆ ಹೊರಟು ಮರುದಿನ ಮಧ್ಯಾಹ್ನ 12:15 ಕ್ಕೆ ಬೀದರ್ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06522 ಅಕ್ಟೋಬರ್ 21ರಂದು ಮಧ್ಯಾಹ್ನ 02:30 ಗಂಟೆಗೆ ಬೀದರ್ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ವಿಶೇಷ ರೈಲು ಎಸಿ ಪ್ರಥಮ ದರ್ಜೆ (1), ಎಸಿ ದ್ವಿತೀಯ ದರ್ಜೆ (2), ಎಸಿ ತೃತೀಯ ದರ್ಜೆ (7), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ಎರಡನೇ ದರ್ಜೆ (2) ಮತ್ತು ಎಸ್.ಎಲ್.ಆರ್.ಡಿ (2) ಸೇರಿದಂತೆ ಒಟ್ಟು 22 ಬೋಗಿ ಒಳಗೊಂಡಿರುತ್ತವೆ.

* ರೈಲು ಸಂಖ್ಯೆ 06523/ 06524 ಯಶವಂತಪುರ-ಬೀದರ್ ನಿಲ್ದಾಣಗಳ ನಡುವೆ ಒಂದು ಟ್ರಿಪ್‌ ಸಂಚಾರ. ರೈಲು ಸಂಖ್ಯೆ 06523 ಅಕ್ಟೋಬರ್ 21 ರಂದು ರಾತ್ರಿ 11:15 ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಮಧ್ಯಾಹ್ನ 01:30ಕ್ಕೆ ಬೀದರ್ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06524 ಅಕ್ಟೋಬರ್ 22ರಂದು ಮಧ್ಯಾಹ್ನ 02:30 ಗಂಟೆಗೆ ಬೀದರ್ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.

ವಿಶೇಷ ರೈಲು ಎಸಿ ದ್ವಿತೀಯ ದರ್ಜೆ (1), ಎಸಿ ತೃತೀಯ ದರ್ಜೆ (2), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ (4), ಜನರೇಟರ್ ಕಾರ್ ಕಂ ಲಗೇಜ್ ಮತ್ತು ಬ್ರೇಕ್‌ ವ್ಯಾನ್ (1) ಮತ್ತು ಎಸ್.ಎಲ್.ಆರ್.ಡಿ (1) ಸೇರಿದಂತೆ ಒಟ್ಟು 16 ಬೋಗಿ ಒಳಗೊಂಡಿರುತ್ತವೆ.

* ರೈಲು ಸಂಖ್ಯೆ 06505/06506 ಯಲಹಂಕ-ಬೀದರ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಸಂಚಾರ. ರೈಲು ಸಂಖ್ಯೆ 06505 ಅಕ್ಟೋಬರ್ 23ರಂದು ರಾತ್ರಿ 11:30 ಗಂಟೆಗೆ ಯಲಹಂಕದಿಂದ ಹೊರಟು ಮರುದಿನ ಮಧ್ಯಾಹ್ನ 12:15ಕ್ಕೆ ಬೀದರ್ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 06506 ಅಕ್ಟೋಬರ್ 24 ರಂದು ಮಧ್ಯಾಹ್ನ 02:30 ಗಂಟೆಗೆ ಬೀದರ್ ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 4 ಗಂಟೆಗೆ ಯಲಹಂಕವನ್ನು ತಲುಪಲಿದೆ.

ವಿಶೇಷ ರೈಲು ಎಸಿ ಪ್ರಥಮ ದರ್ಜೆ (1), ಎಸಿ ದ್ವಿತೀಯ ದರ್ಜೆ (2), ಎಸಿ ತೃತೀಯ ದರ್ಜೆ (7), ಸ್ಲೀಪರ್ ಕ್ಲಾಸ್ (8), ಸಾಮಾನ್ಯ ಎರಡನೇ ದರ್ಜೆ (2) ಮತ್ತು ಎಸ್.ಎಲ್.ಆರ್.ಡಿ (2) ಸೇರಿದಂತೆ ಒಟ್ಟು 22 ಬೋಗಿ ಒಳಗೊಂಡಿರುತ್ತವೆ.

ಈ ರೈಲುಗಳು ಯಲಹಂಕ, ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯಂ ರೋಡ್, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಕಮಲಾಪುರ ಮತ್ತು ಹುಮನಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಪ್ರಯಾಣಿಕರು ಮಾಹಿತಿಗಾಗಿ https://enguiry.indianrail.gov.in ವೆಬ್‌ಸೈಟ್‌ ಅನ್ನು ಪರಿಶೀಲಿಸಿ ಅಥವಾ 139ಕ್ಕೆ ಡಯಲ್ ಮಾಡಿ ಅಥವಾ ತಮ್ಮ ಹತ್ತಿರದ ರೈಲ್ವೆ ನಿಲ್ದಾಣವನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+