ಬೇಸಿಗೆಯಲ್ಲಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಬೇಕಾ? ಈ ಗಿರಿಧಾಮಗಳನ್ನು ನೋಡಿ

ಬೇಸಿಗೆಯ ತಾಪಮಾನ ದೇಶಾದ್ಯಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರು ಈಗ ಹೆಚ್ಚು ತಂಪಾಗಿರುವ ಮತ್ತು ಕಡಿಮೆ ಜನಸಂದಣಿ ಇರುವ ಗಿರಿಧಾಮಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಅನುಭವ ನೀಡುವ ಬಿನ್ನವಾದ ಸ್ಥಳಗಳ ಮೇಲಿನ ಆಸಕ್ತಿ ಹೆಚ್ಚುತ್ತಿದೆ. ಪ್ರವಾಸ ತಜ್ಞರ ಪ್ರಕಾರ, ಇಂದಿನ ಪ್ರಯಾಣಿಕರು ಶಾಂತ ವಾತಾವರಣ, ಪ್ರಕೃತಿ ಸೌಂದರ್ಯ ಮತ್ತು ಕಡಿಮೆ ಖರ್ಚು ಹೊಂದಿರುವ ತಾಣಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ.

ಇಲ್ಲಿ ಬೇಸಿಗೆಯಲ್ಲಿ ಭೇಟಿ ನೀಡಬಹುದಾದ ಕೆಲವು ಕಡಿಮೆ ವೆಚ್ಚದ, ಕಡಿಮೆ ಜನಸಂದಣಿ ಇರುವ ಸುಂದರ ಹಿಲ್‌ ಸ್ಟೇಷನ್‌ಗಳ ವಿವರ:

1. ಶಾಂಘರ್, ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶದ ಸೈಂಜ್ ಕಣಿವೆಯಲ್ಲಿ ನೆಲೆಗೊಂಡಿರುವ ಶಾಂಘರ್ ಒಂದು ಸುಂದರವಾದ ಮತ್ತು ಪ್ರಶಾಂತವಾದ ಗ್ರಾಮವಾಗಿದೆ. ಹಸಿರು ಮೈದಾನಗಳು, ಅರಣ್ಯ ಪ್ರದೇಶಗಳು ಮತ್ತು ಸಮೀಪದಲ್ಲಿರುವ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್‌ ಪ್ರದೇಶದಲ್ಲಿರುವ ಈ ತಾಣ ಟ್ರೆಕ್ಕಿಂಗ್ ಮತ್ತು ಪ್ರಕೃತಿ ವೀಕ್ಷಣೆಗೆ ಸೂಕ್ತ. ಇಲ್ಲಿ 3 ರಿಂದ 4 ದಿನಗಳ ಪ್ರವಾಸವನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದು.

ಅಂದಾಜು ಖರ್ಚು: 3 ರಿಂದ 4 ದಿನಗಳಿಗೆ 6,000 ರಿಂದ 8,000 (ಪ್ರಯಾಣ + ವಾಸತಿ + ಆಹಾರ) ಆಗಬಹುದು.

Budget Hill Stations in India

2. ತವಾಂಗ್, ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶದ ಹಿಮಾಲಯದ ತಪ್ಪಲಿನಲ್ಲಿನಲ್ಲಿರುವ ಗಿರಿಧಾಮ ಆಗಿದೆ. ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ತವಾಂಗ್ ಉತ್ತಮ ತಾಣ. ಇಲ್ಲಿ ಪ್ರಸಿದ್ಧ ಮಠಗಳು, ಸರೋವರಗಳು ಮತ್ತು ನುರಾನಾಂಗ್ ಜಲಪಾತಗಳು ಗಮನಸೆಳೆಯುತ್ತವೆ. ಸೆಲಾ ಪಾಸ್ ಮೂಲಕ ಪ್ರಯಾಣವೇ ವಿಶೇಷ ಅನುಭವ. ಮಾರ್ಚ್ ರಿಂದ ಮೇ ಅಥವಾ ಅಕ್ಟೋಬರ್ ರಿಂದ ನವೆಂಬರ್‌ವರೆಗೆ ಭೇಟಿ ನೀಡಲು ಉತ್ತಮ ಸಮಯ. ವಿಶ್ವದ ಎರಡನೇ ಅತಿದೊಡ್ಡ ಬೌದ್ಧ ಮಠಕ್ಕೆ (ತವಾಂಗ್ ಮೊನಾಸ್ಟರಿ) ಪ್ರಸಿದ್ಧವಾಗಿದೆ.

ಅಂದಾಜು ಖರ್ಚು: 4 ರಿಂದ 5 ದಿನಗಳಿಗೆ 10,000 ರಿಂದ 15,000 (ಪ್ರಯಾಣ ಹೆಚ್ಚು ಇರುವುದರಿಂದ ಖರ್ಚು ಸ್ವಲ್ಪ ಹೆಚ್ಚಾಗುತ್ತದೆ)

ಬೇಸಿಗೆ ಪ್ರವಾಸಕ್ಕೆ ಸೂಕ್ತವಾದ ಭಾರತದ 8 ಪ್ರಸಿದ್ಧ ದೇವಾಲಯಗಳು
ಬೇಸಿಗೆ ಪ್ರವಾಸಕ್ಕೆ ಸೂಕ್ತವಾದ ಭಾರತದ 8 ಪ್ರಸಿದ್ಧ ದೇವಾಲಯಗಳು

3. ಯುಸ್ಮಾರ್ಗ, ಜಮ್ಮು ಮತ್ತು ಕಾಶ್ಮೀರ

ಶ್ರೀನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬುದ್ಗಾಮ ಜಿಲ್ಲೆಯಲ್ಲಿರುವ ಯುಸ್ಮಾರ್ಗ್ ಒಂದು ಅದ್ಬುತವಾದ ಮತ್ತು ಕಡಿಮೆ ಜನಸಂದಣಿಯ ಇರುವ ಪ್ರವಾಸಿ ತಾಣವಾಗಿದೆ. ಹಸಿರು ಮೇವುಗಾವಲು, ಪೈನ್ ಅರಣ್ಯ ಮತ್ತು ದೂಧಗಂಗಾ ನದಿಯಿಂದ ಪ್ರಸಿದ್ಧವಾಗಿದೆ. ಇದು ಗದ್ದಲವಿಲ್ಲದೆ ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಬಯಸುವವರಿಗೆ ಒಂದು ಪರಿಪೂರ್ಣ ಸ್ಥಳವಾಗಿದೆ. ಸಣ್ಣ ಟ್ರೆಕ್‌ಗಳಿಗೆ ಹೋಗಬಹುದು. ಕಡಿಮೆ ವೆಚ್ಚದ ಹೋಂಸ್ಟೇಗಳು ಲಭ್ಯವಿದ್ದು, ಬೇಸಿಗೆಯಲ್ಲಿ ಭೇಟಿ ನೀಡಲು ಸೂಕ್ತ.

ಅಂದಾಜು ಖರ್ಚು: 2 ರಿಂದ 3 ದಿನಗಳಿಗೆ 4,000 ರಿಂದ 7,000 (ಹೋಂಸ್ಟೇ + ಸ್ಥಳೀಯ ಪ್ರಯಾಣ)

Budget Hill Stations in India

4. ಹಾಫ್ಲಾಂಗ್, ಅಸ್ಸಾಂ

ಹಾಫ್ಲಾಂಗ್, ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಗಿರಿಧಾಮವಾಗಿದೆ. ಹಾಫ್ಲಾಂಗ್ ತನ್ನ ಮಂಜಿನ ಬೆಟ್ಟಗಳು ಮತ್ತು ಸುಂದರ ಸರೋವರಗಳಿಂದ ಪ್ರಸಿದ್ಧವಾಗಿದೆ. ಪ್ರಕೃತಿ ಸುತ್ತಾಟ, ದೋಣಿ ಸವಾರಿ ಮತ್ತು ಸ್ಥಳೀಯ ಸಂಸ್ಕೃತಿ ಅನುಭವಿಸಲು ಇದು ಉತ್ತಮ ತಾಣವಾಗಿದೆ. ಕಡಿಮೆ ವೆಚ್ಚದಲ್ಲಿ ಸುಖಕರ ಪ್ರವಾಸ ಮಾಡಬಹುದು.

ಅಂದಾಜು ಖರ್ಚು: 3 ರಿಂದ 4 ದಿನಗಳಿಗೆ 5,000 ರಿಂದ 8,000 (ಟ್ರೈನ್ + ಹೋಂಸ್ಟೇ)

ಮೋಡಗಳ ಮೇಲೆ ನಡೆಯುವ ಅನುಭವ! ಬೇಸಿಗೆಯಲ್ಲಿ ಭೇಟಿ ನೀಡಲೇಬೇಕಾದ ಈ 5 ಗಿರಿಧಾಮಗಳು
ಮೋಡಗಳ ಮೇಲೆ ನಡೆಯುವ ಅನುಭವ! ಬೇಸಿಗೆಯಲ್ಲಿ ಭೇಟಿ ನೀಡಲೇಬೇಕಾದ ಈ 5 ಗಿರಿಧಾಮಗಳು

5. ಮುನ್ಸಿಯಾರಿ, ಉತ್ತರಾಖಂಡ

ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿರುವ ಮುನ್ಸಿಯಾರಿ ಹಿಮಾಲಯದ ಅಡಗಿದ ರತ್ನವೆಂದೇ ಪ್ರಸಿದ್ಧ. ಇದನ್ನು "ಜೋಹರ್ ಕಣಿವೆಯ ಹೆಬ್ಬಾಗಿಲು" ಮತ್ತು "ಲಿಟಲ್ ಕಾಶ್ಮೀರ" ಎಂದೂ ಕರೆಯುತ್ತಾರೆ. ಪಂಚಚುಲಿ ಶಿಖರಗಳ ಅದ್ಭುತ ದೃಶ್ಯ, ಟ್ರೆಕ್ಕಿಂಗ್ ಮತ್ತು ನಕ್ಷತ್ರ ವೀಕ್ಷಣೆಗೆ ಇದು ಸೂಕ್ತವಾಗಿದೆ. ಸ್ವಲ್ಪ ದೂರ ಪ್ರಯಾಣ ಆದರೂ, ಕಡಿಮೆ ಬಜೆಟ್‌ನಲ್ಲಿ ಉತ್ತಮ ಅನುಭವ ನೀಡುವ ತಾಣ.

ಅಂದಾಜು ಖರ್ಚು: 5ರಿಂದ 6 ದಿನಗಳಿಗೆ 8,000 ರಿಂದ 10,000

ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು ಹೆಚ್ಚು ಖರ್ಚು ಮಾಡದೇ ತಂಪಿನ ಅನುಭವ ಪಡೆಯಲು ಈ ಆಫ್‌ಬೀಟ್ ಹಿಲ್‌ ಸ್ಟೇಷನ್‌ಗಳು ಉತ್ತಮ ಆಯ್ಕೆ. ಇವುಗಳು ಜನಸಂದಣಿ ಕಡಿಮೆ ಇರುವುದರಿಂದ ಶಾಂತಿಯುತ ವಾತಾವರಣ ಒದಗಿಸುವುದರ ಜೊತೆಗೆ, ಪರಿಸರ ಸ್ನೇಹಿ ಪ್ರವಾಸಕ್ಕೂ ಸಹಕಾರಿಯಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+