ಬೆಂಗಳೂರಿಗೆ ಶೀಘ್ರವೇ ಮತ್ತೊಂದು ಅಮೃತ್ ಭಾರತ್ ರೈಲು?

ಬೆಂಗಳೂರು, ಜೂನ್ 03: ಕರ್ನಾಟಕದಲ್ಲಿ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಇದೆ. ರಾಜ್ಯದ ಐದು ಹೊಸ ಮಾರ್ಗದಲ್ಲಿ ಈ ಮಾದರಿಯ ರೈಲುಗಳನ್ನು ಓಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.

ಸದ್ಯ ಭಾರತೀಯ ರೈಲ್ವೆ ಬೆಂಗಳೂರು ನಗರಕ್ಕೆ ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಕೊಡುಗೆಯಾಗಿ ನೀಡಲಿದೆ. ಪ್ರಸ್ತುತ ರ್ಮಾಲ್ಡಾ ಟೌನ್-ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಡುವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲು ಓಡುತ್ತಿದೆ.

Bhopal Bengaluru Amrit Bharat Express Train Soon

2023ರ ಡಿಸೆಂಬರ್‌ನಲ್ಲಿ ಭಾರತೀಯ ರೈಲ್ವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಆರಂಭಿಸಿತು. ಈಗ ಜುಲೈನಲ್ಲಿ ಮತ್ತೆ ಹೊಸ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಆರಂಭಿಸಲು ತಯಾರಿ ನಡೆದಿದೆ. ಬೆಂಗಳೂರಿಗೆ ಆಗಮಿಸುವ ಹೊಸ ರೈಲು ಬೆಂಗಳೂರು-ಭೋಪಾಲ್‌ ನಡುವೆ ಸಂಚಾರ ನಡೆಸಲಿದೆ.

ಯಾವ ಮಾರ್ಗದಲ್ಲಿ ಸಂಚಾರ?; ಭೋಪಾಲ್‌-ಬೆಂಗಳೂರು ನಡುವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಆದ್ದರಿಂದ ಭಾರತೀಯ ರೈಲ್ವೆ ಭೋಪಾಲ್-ಪುಣೆ-ಬೆಂಗಳೂರು ಮಾರ್ಗದಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸಲಿದೆ.

ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ. ಜುಲೈ ತಿಂಗಳಿನಲ್ಲಿ ಹಮ್‌ ಸಫರ್‌ ಎಕ್ಸ್‌ಪ್ರೆಸ್ ರೈಲು ಬದಲು ಭೋಪಾಲ್-ಬೆಂಗಳೂರು ನಡುವೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುನ್ನು ಪರಿಚಯಿಸಲಾಗುತ್ತದೆ.

ಜೂನ್ ಅಂತ್ಯದಲ್ಲಿ ಈ ಮಾರ್ಗದಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾಯೋಗಿಕ ಸಂಚಾರವನ್ನು ಆರಂಭಿಸಲಾಗುತ್ತದೆ. ಬಳಿಕ ಜುಲೈನಲ್ಲಿ ರೈಲುಗಳ ವಾಣಿಜ್ಯ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ದರ ಎಷ್ಟಿರುತ್ತದೆ? ಎಂಬ ಬಗ್ಗೆ ರೈಲ್ವೆ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಕರ್ನಾಟಕದ 5 ಮಾರ್ಗದಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂದು ಚರ್ಚೆಗಳು ನಡೆಯುತ್ತಿವೆ. ಇವುಗಳಲ್ಲಿ ಮೈಸೂರು-ಬೆಂಗಳೂರು-ಮುಂಬೈ, ಮೈಸೂರು-ಅಮಹದಾಬಾದ್-ದ್ವಾರಕಾ, ಮಂಗಳೂರು-ವೈಷ್ಣೋದೇವಿ-ಕಾತ್ರಾ, ಬೆಳಗಾವಿ-ತಿರುಪತಿ-ಚೆನ್ನೈ, ಬೆಳಗಾವಿ-ಹೊಸಪೇಟೆ-ಹೌರಾ ಮಾರ್ಗಗಳಿವೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಐಷಾರಾಮಿ ರೈಲು ಸೇವೆಯಾಗಿದೆ. ಆದರೆ ಅಮೃತ್ ಭಾರತ್ ರೈಲು ಸೂಪರ್ ಫಾಸ್ಟ್ ಪ್ಯಾಸೆಂಜರ್ ರೈಲು ಸೇವೆ. ಈ ರೈಲುಗಳು ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಒಳಗೊಂಡಿದೆ. ಎಲ್‌ಎಚ್‌ಬಿ ಪುಶ್-ಪುಲ್ ರೈಲು ಆಗಿದೆ. ಗಂಟೆಗೆ ಸುಮಾರು 130 ಕಿ. ಮೀ. ವೇಗದಲ್ಲಿ ರೈಲು ಸಾಗುವಂತೆ ವಿನ್ಯಾಸಗೊಳಿಸಲಾಗಿದೆ. ರೈಲಿನ ಎರಡೂ ತುದಿಗಳಲ್ಲಿ ಲೋಕೋಗಳನ್ನು ಈ ರೈಲು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+