Bengaluru-Tokyo: ಬೆಂಗಳೂರು-ಟೊಕಿಯೋ ವಿಮಾನ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಬೆಂಗಳೂರು, ಆಗಸ್ಟ್ 22: ಜಪಾನ್‌ ಏರ್‌ಲೈನ್ಸ್‌ (ಜೆಎಎಲ್‌) ಬೆಂಗಳೂರು ನಗರಕ್ಕೆ ಕೊಡುಗೆಯೊಂದನ್ನು ನೀಡಿದೆ. ಬೆಂಗಳೂರು-ಟೊಕಿಯೋ ಮಾರ್ಗದ ವಿಮಾನಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 2020ರಲ್ಲಿ ಬೆಂಗಳೂರು-ಟೊಕಿಯೋ ನಡುವೆ ನೇರ ವಿಮಾನ ಸೇವೆಯನ್ನು ಜೆಎಎಲ್ ಆರಂಭಿಸಿತ್ತು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ನಿರ್ವಹಣೆ ಮಾಡುವ ಬಿಎಲ್‌ಆರ್ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಜಪಾನ್‌ ಏರ್‌ಲೈನ್ಸ್‌ (ಜೆಎಎಲ್‌) ಗ್ರೂಪ್‌ನ ಸೇವೆಯ ವಿಸ್ತರಣೆ ಕುರಿತು ಮಾಹಿತಿ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಹೇಳಿದೆ.

Bengaluru Tokyo 5 Flights Per Week From October 2024

ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಪಾನ್‌ ಏರ್‌ಲೈನ್ಸ್‌ ಬೆಂಗಳೂರು-ಟೊಕಿಯೋ ಮಾರ್ಗದಲ್ಲಿ ವಾರದಲ್ಲಿ 5 ವಿಮಾನಗಳನ್ನು ಹಾರಾಟ ನಡೆಸಲಿದೆ. ಪ್ರಸ್ತುತ ಈ ಮಾರ್ಗದಲ್ಲಿ 3 ವಿಮಾನಗಳು ಸಂಚಾರ ನಡೆಸುತ್ತಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಅತ್ಯಧಿಕ ಪ್ರಯಾಣಿಕರು: ಬೆಂಗಳೂರು-ಟೊಕಿಯೋ ನಡುವೆ ವಾರದಲ್ಲಿ 5 ವಿಮಾನಗಳ ಹಾರಾಟ ಅಕ್ಟೋಬರ್ 2024ರಿಂದ ಆರಂಭವಾಗಲಿದೆ. ಈ ಘೋಷಣೆಯಿಂದ ದಕ್ಷಿಣ ಮತ್ತು ಮಧ್ಯ ಭಾರತದ ಹೆಬ್ಬಾಗಿಲು ಆಗಿರುವ ಬೆಂಗಳೂರು ನಗರಕ್ಕೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ದಕ್ಷಿಣ ಭಾರತದಲ್ಲಿಯೇ ಜಪಾನ್‌ಗೆ ನೇರ ವಿಮಾನ ಸೇವೆ ಹೊಂದಿರುವ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಹೊಂದಿದೆ. ಜಪಾನ್‌ ಏರ್‌ಲೈನ್ಸ್‌ ಎರಡು ನಗರದ ನಡುವೆ ವಿಮಾನ ಸೇವೆಯನ್ನು ನೀಡುತ್ತಿದೆ. ಜೆಎಎಲ್‌ ಈ ಮಾರ್ಗದಲ್ಲಿ ಬೋಯಿಂಗ್ ಬಿ787-8 ವಿಮಾನದ ಸಂಚಾರ ನಡೆಸುತ್ತಿದೆ. ಈ ವಿಮಾನದಲ್ಲಿ 186 ಪ್ರಯಾಣಿಕರು ಸಂಚಾರವನ್ನು ನಡೆಸಬಹುದು.

ಬೆಂಗಳೂರು ವಿಮಾನ ನಿಲ್ದಾಣದ ಸಿಒಒ ಸತ್ಯಕಿ ರಘುನಾಥ್ ಮಾತನಾಡಿ, "ಜೆಎಎಲ್‌ ಬೆಂಗಳೂರು ವಿಮಾನ ನಿಲ್ದಾಣದ ಸೇವೆ ವಿಸ್ತರಣೆ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ದಕ್ಷಿಣ/ ಮಧ್ಯ ಭಾರತದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಬೆಂಗಳೂರಿನ ಹೆಗ್ಗಳಿಗೆ ಇನ್ನೂ ಹೆಚ್ಚಾಗಿದೆ" ಎಂದರು.

"ಬೆಂಗಳೂರು-ಟೊಕಿಯೋ ನಡುವೆ ಹೆಚ್ಚಿನ ವಿಮಾನಗಳು ಹಾರಾಟ ನಡೆಸುವುದರಿಂದ ಕೇವಲ ಪ್ರಯಾಣಿಕರಿಗೆ ಅನುಕೂಲವಾಗುವುದಿಲ್ಲ. ಇದು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಅಲ್ಲದೆ ಬೆಂಗಳೂರು ನಗರವನ್ನು ವಿವಿಧ ನಗರದೊಂದಿಗೆ ಸಂಪರ್ಕಿಸುವ ನಮ್ಮ ಉದ್ದೇಶಕ್ಕೂ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.

ಜಪಾನ್‌ ಏರ್‌ಲೈನ್ಸ್‌ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12, ಏಪ್ರಿಲ್ 2020ರಲ್ಲಿ ಸಂಚಾರವನ್ನು ಆರಂಭಿಸಿತು. ಬೆಂಗಳೂರು-ಜಪಾನ್ ನಡುವೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. 2022ರಲ್ಲಿ 23,532 ಪ್ರಯಾಣಿಕರು ಸಂಚಾರವನ್ನು ನಡೆಸಿದ್ದರು. 2023ರಲ್ಲಿ ಇದು 62,959 ಜನರು ಸಂಚಾರ ನಡೆಸಿದರು. ದಕ್ಷಿಣ ಭಾರತದ ಪ್ರವಾಸೋದ್ಯಮ, ಆರ್ಥಿಕ ಬೆಳವಣಿಗೆ ನೋಡಿಕೊಂಡು ಈಗ ವಿಮಾನ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ಇತರ ನಗರಗಳ ವಿಮಾನ ನಿಲ್ಧಾಣಗಳಿಗಿಂತ ಬೆಂಗಳೂರು ವಾತಾವರಣ ಜನಪ್ರಿಯವಾಗಿದೆ. ಐಟಿ-ಬಿಟಿ, ಆಟೋಮೊಬೈಲ್, ಸ್ಟಾರ್ಟ್ ಅಪ್ ಹಬ್ ಆಗಿರುವ ಬೆಂಗಳೂರು ನಗರಕ್ಕೆ ಪ್ರತಿನಿತ್ಯ ವಿದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ವಿಶ್ವದ ವಿವಿಧ ದೇಶಗಳಿಂದ ಬೆಂಗಳೂರು ನಗರಕ್ಕೆ ನೇರ ವಿಮಾನ ಸೌಕರ್ಯವಿದೆ. ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವಲ್ಲಿಯೂ ಸಹ ಬೆಂಗಳೂರು ವಿಮಾನ ನಿಲ್ದಾಣ ಮೊದಲ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+