Bengaluru To Mahabalipuram: ಮಹಾಬಲಿಪುರಂಗೆ ನಿಮ್ಮ ಸಂಗಾತಿಯೊಂದಿಗೆ ಟ್ರಿಪ್ ಹೋಗ್ಬೇಕಾ?-ಇಲ್ಲಿವೆ ಸೂಕ್ತ ಟಿಪ್ಸ್
ಚಳಿಗಾಲದ ವೇಳೆ ವಾರಾಂತ್ಯ ಅಥವಾ ಸಾಲು ರಜೆಗಳು ಇದ್ದರೆ ಸಾಕು ಬೆಂಗಳೂರಿನ ಮಂದಿ ಸಮಯ ಕಳೆಯಲು ಟ್ರಿಪ್ ಪ್ಲಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ನೀವು ಒಂದು ವೇಳೆ ಬೆಂಗಳೂರಿನಿಂದ ಮಹಾಬಲಿಪುರಂ ಕಡೆ ಪ್ರಯಾಣ ಮಾಡಲು ಬಯಸಿದರೆ ಇಲ್ಲಿ ನೀವು ಏನೆಲ್ಲ ವೀಕ್ಷಣೆ ಮಾಡಬಹುದು ಹಾಗೂ ಯಾವ ಮಾರ್ಗಗಳು ಸೂಕ್ತ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೆಂಗಳೂರಿನಿಂದ ಮಹಾಬಲಿಪುರಂ ರಸ್ತೆಯ ಮೂಲಕ ಸುಮಾರು 335.5 ಕಿ.ಮೀಟರ್ ಆಗಲಿದೆ. ಇದು ಬೆಂಗಳೂರಿನಿಂದ ವಾರಾಂತ್ಯದ ವಿಹಾರಕ್ಕೆ ಹೇಳಿ ಮಾಡಿಸಿದ ಸೂಕ್ತ ತಾಣವಾಗಿದೆ. ನೀವು ಇಲ್ಲಿನ ಶ್ರೀಮಂತ ಪರಂಪರೆಯನ್ನು ಹೊಂದಿರುವ ದೇವಾಲಯದ ಪಟ್ಟಣವಾದ ಕಾಂಚೀಪುರಂ ಮೂಲಕ ಚಾಲನೆ ಮಾಡಬೇಕಾಗುತ್ತದೆ.

ಇನ್ನು ಮಹಾಬಲಿಪುರಂನಿಂದ ದಕ್ಷಿಣಕ್ಕೆ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ ಪಾಂಡಿಚೇರಿಗೂ ಕೂಡ ಭೇಟಿ ನೀಡಬಹುದಾಗಿದೆ. ನಂತರ ಬೆಂಗಳೂರಿಗೆ ಹಿಂತಿರುಗಿ ವೃತ್ತಾಕಾರದ ಪ್ರವಾಸವಾಗಿ ಮಾಡುವ ಸಾಧ್ಯತೆಯೂ ಇದೆ. ನೀವು ಬೆಂಗಳೂರಿನಿಂದ ಮಹಾಬಲಿಪುರಂ ಕಡೆಗೆ ಹೋಗುವ ಎರಡು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಮೊದಲನೆಯದು ಆಂಧ್ರಪ್ರದೇಶದ ಚಿತ್ತೂರಿನ ಮೂಲಕ (NH4 ಅನ್ನು ತೆಗೆದುಕೊಳ್ಳಿ) ಮತ್ತು ಎರಡನೆಯದು ಕೃಷ್ಣಗಿರಿ ಮೂಲಕ (NH7 ಮತ್ತು NH46 ಅನ್ನು ತೆಗೆದುಕೊಳ್ಳಬಹುದಾಗಿದೆ).
ಮಾರ್ಗ ಎ (ಬೆಂಗಳೂರಿನಿಂದ ಚಿತ್ತೂರು ಮೂಲಕ ಮಹಾಬಲಿಪುರಂ): ಬೆಂಗಳೂರು, ಕೋಲಾರ, ಚಿತ್ತೂರು, ವಾಲಾಜಾ, ಕಾಂಚೀಪುರಂ, ಚೆಂಗಲ್ಪಟ್ಟು ತಿರುಕ್ಕಾಝುಕುಂಡ್ರಂ, ಮಹಾಬಲಿಪುರಂ.
ಮಾರ್ಗ ಬಿ (ಬೆಂಗಳೂರಿನಿಂದ ಕೃಷ್ಣಗಿರಿ ಮೂಲಕ ಮಹಾಬಲಿಪುರಂ): ಬೆಂಗಳೂರು, ಹೊಸೂರು, ಕೃಷ್ಣಗಿರಿ, ವಾಲಾಜಾ, ಕಾಂಚೀಪುರಂ, ಚೆಂಗಲ್ಪಟ್ಟು, ತಿರುಕ್ಕಝುಕುಂದ್ರಂ, ಮಹಾಬಲಿಪುರಂ.
ಬೆಂಗಳೂರಿನಿಂದ ಚೆನ್ನೈಗೆ ರೈಲುಗಳು, ಬಸ್ಸುಗಳು ಅಥವಾ ವಿಮಾನದ ಮೂಲಕ ಪ್ರಯಾಣಿಸಬಹುದಾಗುದೆ. ಚೆನ್ನೈನಿಂದ ಮಹಾಬಲಿಪುರಂ ಸುಮಾರು 50 ಕಿಲೋ ಮೀಟರ್ ಕೋಯಂಬೇಡು ಬಸ್ ನಿಲ್ದಾಣದಿಂದ ಮಹಾಬಲಿಪುರಂಗೆ ಆಗಾಗ ಬಸ್ ಸೇವೆಗಳಿವೆ. ಇಲ್ಲದಿದ್ದರೆ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡುವುದಾದರೆ, ಸುಮಾರು 1700 ರೂಪಾಯಿ ವೆಚ್ಚ ಆಗಲಿದೆ.
ಪ್ರಮುಖ ಪ್ರವಾಸಿ ತಾಣಗಳು: ಮಹಾಬಲಿಪುರಂ ಬೀಚ್, ಪಂಚ ರಥಗಳು, ಅರ್ಜುನನ ತಪಸ್ಸು ಸ್ಥಳ, ಹುಲಿ ಗುಹೆಗಳು, ಕೋವ್ಲಾಂಗ್ ಬೀಚ್, ಇಂಡಿಯನ್ ಸೀಶೆಲ್ ಮ್ಯೂಸಿಯಂ, ಗಣೇಶ ರಥ ದೇವಾಲಯ, ಮಹಿಷಾಸುರಮರ್ದಿನಿ ಗುಹೆ, ವರಾಹ ಗುಹೆ ದೇವಾಲಯ, ಕೃಷ್ಣ ಗುಹೆ ದೇವಾಲಯ ಸೇರಿದಂತೆ ಇನ್ನಿತರ ಅದ್ಭುತ ಪಾರಂಪರಿಕ ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ.
ಮಹಾಬಲಿಪುರಂ ಬಗ್ಗೆ ಪುರಾಣಗಳು ಮತ್ತು ಕಥೆಗಳನ್ನು ನೀವು ಉಪನಿಷತ್ತುಗಳಲ್ಲಿ ಮತ್ತು ಪುಸ್ತಕಗಳಲ್ಲಿ ಓದಿರಬಹುದು. ಇಲ್ಲಿನ ಸುಂದರವಾದ ಸೂರ್ಯಾಸ್ತದ ಕಾರಣದಿಂದಾಗಿ ಸಂದರ್ಶಕರು ಮತ್ತು ಯಾತ್ರಿಕರಿಗೆ ಜನಪ್ರಿಯ ತಾಣವಾಗಿದೆ. ಮಹಾಬಲಿಪುರಂನಲ್ಲಿರುವ ಈ ಆಕರ್ಷಣೆಗಳು ಸಾವಿರಾರು ವರ್ಷಗಳ ಹಿಂದಿನ ಕಥೆಯನ್ನು ನೆನಪಿಸುತ್ತವೆ.
ನೀವು ತಮಿಳುನಾಡಿಗೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದನ್ನು ಮಿಸ್ ಮಾಡಬೇಡಿ. ತಮಿಳುನಾಡಿನ ಈ ಪುಟ್ಟ ಪಟ್ಟಣದಲ್ಲಿ ನೀವು ಕಳೆಯುವ ಪ್ರತಿ ಕ್ಷಣಕ್ಕೂ ಕೂಡ ಅದ್ಭುತವಾಗಿರುತ್ತದೆ. ಇಲ್ಲಿ ಕಂಡುಬರುವ ವೈಭವ, ಕಲಾಕೃತಿ ಮತ್ತು ಸಂಪ್ರದಾಯವನ್ನು ಆನಂದಿಸಬಹುದಾಗಿದೆ. ಈ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲು ನೀವು ಈ ಕೆಳಗಿನ ಯಾವುದೇ ಮಾರ್ಗಗಳಲ್ಲಿ ಪ್ರಯಾಣಿಸಲು ಆಯ್ಕೆ ಮಾಡಬಹುದಾಗಿದೆ
* ವಿಮಾನದ ಮೂಲಕ: ಮಹಾಬಲಿಪುರಂಗೆ ಮತ್ತು ಅಲ್ಲಿಂದ ಪ್ರಯಾಣಿಸಲು ಅತ್ಯಂತ ಅನುಕೂಲಕರವಾದ ವಿಮಾನ ನಿಲ್ದಾಣವು ಚೆನ್ನೈನಲ್ಲಿದೆ. ವಿಮಾನ ನಿಲ್ದಾಣ ಮತ್ತು ದೇವಸ್ಥಾನದ ನಡುವಿನ ಅಂತರವು ಸುಮಾರು 58 ಕಿಲೋಮೀಟರ್‌ಗಳಾಗಿದೆ.
* ರೈಲಿನ ಮೂಲಕ: ಚೆಂಗಲ್ಪಟ್ಟು ಜಂಕ್ಷನ್ ಮಹಾಬಲಿಪುರಂಗೆ ಸಮೀಪದಲ್ಲಿರುವ ರೈಲು ನಿಲ್ದಾಣವಾಗಿದೆ. ಒಬ್ಬರು ನಿಲ್ದಾಣಕ್ಕೆ ಬಂದಾಗ, ಅವರು ಸುಮಾರು 29 ಕಿಲೋಮೀಟರ್ ಪ್ರಯಾಣವನ್ನು ಮಾಡಲು ಟ್ಯಾಕ್ಸಿಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.
* ರಸ್ತೆಯ ಮೂಲಕ: ತಮಿಳುನಾಡು ರಾಜ್ಯ ಸರ್ಕಾರವು ಒದಗಿಸುವ ಬಸ್ ಸೇವೆಗಳು ಮಹಾಬಲಿಪುರಂ ಅನ್ನು ಚೆನ್ನೈ ಸೇರಿದಂತೆ ಪ್ರದೇಶದ ವಿವಿಧ ಪಟ್ಟಣಗಳಿಗೆ ಸಂಪರ್ಕಿಸುತ್ತದೆ. ಸಾರ್ವಜನಿಕ ಬಸ್‌ಗಳ ಜೊತೆಗೆ, ಮಹಾಬಲಿಪುರಂನಿಂದ ಚೆನ್ನೈ ಸೆಂಟ್ರಲ್‌ಗೆ ಪ್ರಯಾಣಿಸುವ ಕೆಲವು ಖಾಸಗಿ ಪ್ರಯಾಣಿಕ ಬಸ್ ಸೇವೆಗಳೂ ಕೂಡ ಲಭ್ಯ ಇವೆ.












Click it and Unblock the Notifications