Bengaluru-ladak travel: ಬೆಂಗಳೂರಿನಿಂದ ಲಡಾಖ್‌ಗೆ ಪ್ರವಾಸ ಕೈಗೊಳ್ಳಬೇಕೆ?- ಇಲ್ಲಿದೆ ಮಾಹಿತಿ
Bengaluru to ladakh travel guide: ಸಾಮಾನ್ಯವಾಗಿ ಬೇಸಿಗೆ ರಜೆ ಬಂತೆಂದರೆ ಸಾಕು ಬೆಂಗಳೂರಿನ ತುಂಬಾ ಜನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಜನೆಗಳನ್ನು ರೂಪಿಸಿರುತ್ತಾರೆ. ಹಾಗಾದರೆ ಈ ವೇಳೆ ನೀವು ಪ್ರವಾಸ ಮಾಡಲೇಬೇಕೆಂದು ಬಯಸಿದರೆ ಸೂಕ್ತ ಹಾಗೂ ಸುಂದರ ಪ್ರವಾಸಿ ತಾಣಗಳಲ್ಲೊಂದಾದ ಲಡಾಖ್‌ಗೆ ಭೇಟಿ ನೀಡಬಹುದಾಗಿದೆ. ಹಾಗಾದರೆ ಬೆಂಗಳೂರಿನಿಂದ ಇಲ್ಲಿಗೆ ಪ್ರವಾಸ ಕೈಗೊಳ್ಳಲು ಯಾವ ಸಾರಿಗೆ ಸೂಕ್ತ ಹಾಗೂ ಯಾವ್ಯಾವ ಸಾರಿಗೆಯಲ್ಲಿ ಪ್ರಯಾಣ ಮಾಡಿದ್ರೆ ಎಷ್ಟು ದೂರ ಆಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಯಾವ್ಯಾವ ಸಾರಿಗೆಯಲ್ಲಿ ಎಷ್ಟು ಅವಧಿ?
* ವಿಮಾನ - ಅಂದಾಜು 2 ತಾಸು (ಲೇಹ್)
* ರೈಲು - 54 ತಾಸು (ಶ್ರೀನಗರ)
* ರಸ್ತೆ ಸಾರಿಗೆ (ಬೈಕ್, ಬಸ್, ಕಾರು) - 65 ತಾಸು
* ಇನ್ನು ಬೆಂಗಳೂರಿನಿಂದ ಲಡಾಕ್‌ಗೆ ರಸ್ತೆ ಮಾರ್ಗವಾಗಿ 3,135.7 ಕಿಲೋ ಮೀಟರ್ ದೂರ ಆಗಲಿದ್ದು, ಕಾರು, ಬಾಕ್ ಮೂಲಕ 60-65 ಗಂಟೆಗಳು ಬೇಕಾಗುತ್ತದೆ.

ಇದೀಗ ಬೇಸಿಗೆ ಆದ್ದರಿಂದ ಬಹುತೇಕ ಪ್ರಯಾಣಿಕರು ರೈಲು, ವಿಮಾನದಲ್ಲಿ ಪ್ರಯಾಣ ಮಾಡುವವರಾಗಿರುತ್ತಾರೆ. ಇನ್ನು ಕೆಲವೇ ಮಂದಿ ಮಾತ್ರ ಅಂದರೆ, ಟ್ರಾವೆಲರ್ಸ್ ಬೈಕ್, ಕಾರ್‌ನಲ್ಲಿಯೇ ಪ್ರಯಾಣ ಮಾಡಲು ಬಯಸುತ್ತಾರೆ.
ಲಡಾಖ್‌ನ ಭೂದೃಶ್ಯಗಳು ಪ್ರತಿ ಋತುವಿನಲ್ಲಿಯೂ ಒಂದೊಂದು ರೀತಿಯ ಅನುಭವವನ್ನು ನೀಡುತ್ತವೆ. ಲಡಾಕ್‌ಖ್‌ಗೆ ಭೇಟಿ ನೀಡಿದಾಗ ಅಲ್ಲಿ ಲೇಹ್ ಅನ್ನು ಅನ್ವೇಷಣೆ ಮಾಡಬಹುದಾಗಿದೆ. ಈ ವೇಳೆ ಹಿಮ ಚಿರತೆಗಳನ್ನು ಕೂಡ ಕಾಣಬಹುದಾಗಿದೆ.
ಇನ್ನು ಪ್ರವಾಸದ ವೇಳೆ ಕಣಿವೆಗಳ ಮೂಲಕ ಚಾರಣ ಮಾಡಿದರೆ, ಅಲ್ಲಿ ಬಿಡುವ ಹೂವುಗಳು ಎಂಥಹವರ ಮನಸ್ಸನ್ನು ತನ್ನತ್ತ ಸೆಳೆದುಬಿಡುತ್ತವೆ. ನೀವು ಲಡಾಖ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಬೇಸಿಗೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
ವಿಮಾನ ಪ್ರಯಾಣ: ಶ್ರೀನಗರ-ಲೇಹ್ ಹೆದ್ದಾರಿಯು ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತವೆ. ಒಂದು ವೇಳೆ ನೀವು ಏಪ್ರಿಲ್ ಮತ್ತು ಜೂನ್ ನಡುವೆ ಭೇಟಿ ನೀಡಲು ಬಯಸಿದರೆ, ಈ ಸಮಯದಲ್ಲಿ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ತೆರೆದಿರುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ವಿಮಾನ ಪ್ರಯಾಣ ಉತ್ತಮ.
ರಸ್ತೆ ಪ್ರಯಾಣ: ನೀವು ಒಂದು ವೇಳೆ ರಸ್ತೆ (ಬೈಕ್, ಕಾರ್) ಮೂಲಕ ಲಡಾಖ್‌ಗೆ ಭೇಟಿ ನೀಡಲು ಯೋಜನೆ ರೂಪಿಸಿದ್ದರೆ ಜೂನ್‌ನಿಂದ ಸೆಪ್ಟೆಂಬರ್ ಉತ್ತಮ ಸಮಯ. ಈ ವೇಳೆ ಎಲ್ಲಾ ರಸ್ತೆಗಳು ತೆರೆದಿರುತ್ತದೆ ಆದ್ದರಿಂದ. ಇನ್ನು ಚಳಿಗಾಲದಲ್ಲಿ ಲಡಾಖ್‌ನಲ್ಲಿರುವ ಸರೋವರಗಳು ಹೆಪ್ಪುಗಟ್ಟುತ್ತವೆ.
ಲಡಾಖ್‌ನಲ್ಲಿ ತಾಪಮಾನದ ವಿವರ
* ಬೇಸಿಗೆ (ಏಪ್ರಿಲ್-ಜುಲೈ): 3°C-25°C
* ಮಳೆಗಾಲ (ಜುಲೈ-ಸೆಪ್ಟೆಂಬರ್): 3°C-17°C
* ಚಳಿಗಾಲ (ಅಕ್ಟೋಬರ್- ಮಾರ್ಚ್): -11°C-15°C
ಲಡಾಖ್‌ನಲ್ಲಿ ಸಾಮಾನ್ಯವಾಗಿ ಹಿಮಪಾತವು ಅಕ್ಟೋಬರ್‌ನಲ್ಲಿ ಪ್ರಾರಂಭವಾಗುತ್ತದೆ. ಏಕೆಂದರೆ ತಾಪಮಾನವು ಇಳಿಯಲಿದ್ದು, ಚಳಿಗಾಲ ಆರಂಭವಾಗುತ್ತದೆ. ಈ ವಾತಾವರಣ ಮಾರ್ಚ್ ಅಂತ್ಯದವರೆಗೆ ಮುಂದುವರೆಯುತ್ತದೆ.
ಲಡಾಖ್‌ನಲ್ಲಿ ನೀವು ನೋಡಬಹುದಾದ ಪ್ರಮುಖ ತಾಣಗಳು
* ಪ್ಯಾಂಗೊಂಗ್ ತ್ಸೋ ಸರೋವರ
* ನುಬ್ರಾ ಕಣಿವೆ
* ಲೇಹ್ ಅರಮನೆ
* ಖರ್ದುಂಗ್ ಲಾ ಪಾಸ್
* ಹೆಮಿಸ್ ಮೊನಾಸ್ಟರಿ
* ಅಲ್ಚಿ ಮಠ
* ತ್ಸೋ ಮೊರಿರಿ ಸರೋವರ












Click it and Unblock the Notifications