ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರೇ ಎಚ್ಚರ; ಗೋವಾ ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆಗಳು

|
Google Oneindia Kannada News

ಪಣಜಿ, ನ.13: ಕೊರೊನಾ ಸಾಂಕ್ರಾಮಿಕದ ನಂತರ ಗೋವಾದಲ್ಲಿ ಪ್ರವಾಸೋದ್ಯಮ ಸೀಸನ್ ಉತ್ತುಂಗಕ್ಕೇರಿದೆ. ಹೆಚ್ಚುತ್ತಿರುವ ಒತ್ತಡದಲ್ಲಿಯೂ ಸರ್ಕಾರವು ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಸ್ವಾಗತಿಸಲು ಸಜ್ಜಾಗಿದೆ.

ಇದರ ನಡುವೆಯೇ ಜನಜಂಗುಳಿಯಿಂದ ಕೂಡಿರುವ ಜನಪ್ರಿಯ ತಾಣಗಳು ಮತ್ತು ಕಡಲತೀರಗಳಲ್ಲಿ ಕಸವನ್ನು ಎಸೆಯುವುದು, ಬೀಚ್‌ನಲ್ಲಿ ಮದ್ಯಪಾನ ಮಾಡುವುದು, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಮತ್ತು ಬೀದಿಗಳಲ್ಲಿ ಅಡುಗೆ ಮಾಡುವುದು ಸೇರಿದಂತೆ ಹಲವು ಕೃತ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ಧರಾಗಿದ್ದಾರೆ.

ಗೋವಾದ ಪ್ರಸಿದ್ಧ ಬೀಚ್‌ಗಳಲ್ಲಿ ಮದ್ಯ, ಆಹಾರ ಸೇವನೆ ನಿಷೇಧಗೋವಾದ ಪ್ರಸಿದ್ಧ ಬೀಚ್‌ಗಳಲ್ಲಿ ಮದ್ಯ, ಆಹಾರ ಸೇವನೆ ನಿಷೇಧ

ಪ್ರವಾಸೋದ್ಯಮವು ರಾಜ್ಯದ ಆದಾಯದ ಪ್ರಾಥಮಿಕ ಮೂಲಗಳಲ್ಲಿ ಒಂದಾಗಿದ್ದರೂ, ಕೂಡ ಈ ಬಾರಿ ಜನಸಂದಣಿಯನ್ನು ನಿಯಂತ್ರಣದಲ್ಲಿಡಲು ಅಕ್ರಮಗಳನ್ನು ತಡೆಯಲು ದಂಡ ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ.

ಜನಪ್ರಿಯ ಸ್ಥಳಗಳು ಮತ್ತು ಕಡಲತೀರಗಳಲ್ಲಿ ಅವ್ಯವಸ್ಥೆಯನ್ನು ಮಾಡುವವರ ವಿರುದ್ಧ ಕಾನೂನಿನ ಪ್ರಕಾರ ದಂಡ ವಿಧಿಸುವ ನಿಯಮಗಳನ್ನು ಜಾರಿಗೆ ತರಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಮಾಹಿತಿ ನೀಡಿದ್ದಾರೆ.

ಬೀಚ್‌ಗಳಲ್ಲಿ ಅವ್ಯವಸ್ಥೆ ಮಾಡುವವರ ವಿರುದ್ಧ ಕಾನೂನು ಕ್ರಮ

ಬೀಚ್‌ಗಳಲ್ಲಿ ಅವ್ಯವಸ್ಥೆ ಮಾಡುವವರ ವಿರುದ್ಧ ಕಾನೂನು ಕ್ರಮ

"ನಾವು ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರವಾಸೋದ್ಯಮವನ್ನು ನಂಬುತ್ತೇವೆ. ಆದರೆ ಈಗ ಕೆಲವು ಹೊಸ ಅಭ್ಯಾಸಗಳು ಜನರಿಗೆ ಅಂಟಿಕೊಂಡಿವೆ. ಜನರು ಬೀಚ್‌ಗಳಿಗೆ ಬರುತ್ತಾರೆ ಅಲ್ಲಿಯೇ ಬಿಯರ್ ಬಾಟಲಿಗಳನ್ನು ಒಡೆಯುತ್ತಾರೆ. ಕೆಲವರು ಖಾಲಿ ಬಿಯರ್ ಬಾಟಲಿಗಳನ್ನು ಅಲ್ಲಿಯೇ ಬಿಟ್ಟು ಬಿಡುತ್ತಾರೆ. ಈ ಬಗ್ಗೆ ಇಲ್ಲಿಯವರೆಗೆ ಕಾನೂನು ಸ್ಪಷ್ಟವಾಗಿಲ್ಲ. ಆದ್ದರಿಂದ ನಾವು ಈ ಕೃತ್ಯಗಳ ಬಗ್ಗೆ ನಿರ್ದಿಷ್ಟಪಡಿಸುವ ಅಧಿಸೂಚನೆಯನ್ನು ಹೊರಡಿಸಿದ್ದೇವೆ. ಈ ಕೆಲಸಗಳನ್ನು ತಕ್ಷಣವೇ ನಿಲ್ಲಿಸುವುದು ಮುಖ್ಯವಾಗಿದೆ. ಹೀಗಾಗಿ ನಾವು ಸಾಕಷ್ಟು ದಂಡ ವಿಧಿಸಿದ್ದೇವೆ'' ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಹೇಳಿದ್ದಾರೆ.

ಪ್ರವಾಸಿಗರಿಂದ ಬಸವಳಿದ ಪಣಜಿಯ ಜನರು!

ಪ್ರವಾಸಿಗರಿಂದ ಬಸವಳಿದ ಪಣಜಿಯ ಜನರು!

ಪ್ರವಾಸಿಗರು ರಸ್ತೆಗಳು ಮತ್ತು ಫುಟ್‌ಪಾತ್‌ಗಳನ್ನು ಹಾಳುಮಾಡುವ ಮತ್ತು ಟ್ರಾಫಿಕ್ ಜಾಮ್ ಮಾಡುವ ಬಗ್ಗೆ ಪ್ರಮುಖವಾಗಿ ರಾಜಧಾನಿ ಪಣಜಿಯ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

''ತಮ್ಮ ವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್, ಟ್ರಾಫಿಕ್ ಜಾಮ್, ಪ್ರವಾಸಿಗರ ಫೋಟೋ ಶೂಟ್‌ಗಳು, ಹಾಳಾದ ಫುಟ್‌ಪಾತ್‌ಗಳು, ಗುಂಡಿ ಬಿದ್ದ ರಸ್ತೆಗಳು ಮುಂತಾದ ವಿವಿಧ ಅಂಶಗಳಿಂದಾಗಿ ಪಣಜಿಯ ಜನರು ಕೋಪಗೊಂಡಿದ್ದಾರೆ, ಹತಾಶರಾಗಿದ್ದಾರೆ ಮತ್ತು ಒತ್ತಡದಲ್ಲಿದ್ದಾರೆ. ನಮ್ಮ ನಗರವು ಆರೋಗ್ಯಕರವಾಗಿಲ್ಲ. ದಿನದಿಂದ ದಿನಕ್ಕೆ ಅನಾರೋಗ್ಯಕ್ಕೆ ಒಳಗಾಗುತ್ತಿದೆ'' ಎಂದು ಪಣಜಿ ನಗರದ ಕಾರ್ಪೊರೇಷನ್‌ನ ಮಾಜಿ ಕೌನ್ಸಿಲರ್ ಪೆಟ್ರೀಷಿಯಾ ಪಿಂಟೋ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಆದ್ಯತೆ, ಸ್ಥಳೀಯರ ಕಡೆಗಣನೆ

ಪ್ರವಾಸಿಗರಿಗೆ ಆದ್ಯತೆ, ಸ್ಥಳೀಯರ ಕಡೆಗಣನೆ

ಸರ್ಕಾರದ ಸಂಪೂರ್ಣ ಗಮನವು ಜೂಜು, ಮನರಂಜನೆ ಮತ್ತು ಆದಾಯದ ಮೇಲೆ ನಿಂತಿದೆ. ಸ್ಥಳೀಯರ ಹಣದಲ್ಲಿ ನಿರ್ಮಾಣವಾಗುವ ಪಾರ್ಕ್‌ಗಳಿಗೆ ಅವರ ಮಕ್ಕಳಿಗೆ ಆಟವಾಡಲು ಬಿಡುವುದಿಲ್ಲ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿವೆ.

''ಪಣಜಿ ಒಂದು ವಿಶಿಷ್ಟ ಸಾಂಸ್ಕೃತಿಕ ಮತ್ತು ಪಾರಂಪರಿಕ ನಗರ ಎಂಬುದನ್ನು ಕಡೆಗಣಿಸಲಾಗಿದೆ. ಬದಲಾಗಿ, ಸಂಪೂರ್ಣ ಗಮನವು ಜೂಜು, ವಿನೋದ ಮತ್ತು ಮನರಂಜನೆಯ ಮೇಲೆ ಕೇಂದ್ರೀಕೃತವಾಗಿದೆ. ನಗರದ ನಾಗರಿಕರಿಗೆ ಟ್ರಾಫಿಕ್‌ನಿಂದ ಅವ್ಯವಸ್ಥೆ ಸಂಕಷ್ಟ ನೀಡುತ್ತಿದೆ. ನಮ್ಮ ಊರು ಪಾರಂಪರಿಕ ನಗರದಿಂದ ಕ್ಯಾಸಿನೊ ನಗರವಾಗಿ ಬದಲಾಗಿದೆ'' ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗೋವಾ ಜಿಡಿಪಿಗೆ 16.43% ಕೊಡುಗೆ ನೀಡುವ ಪ್ರವಾಸೋದ್ಯಮ

ಗೋವಾ ಜಿಡಿಪಿಗೆ 16.43% ಕೊಡುಗೆ ನೀಡುವ ಪ್ರವಾಸೋದ್ಯಮ

ಗೋವಾದ ಪ್ರವಾಸೋದ್ಯಮ ಕ್ಷೇತ್ರವು ರಾಜ್ಯಕ್ಕೆ ದೊಡ್ಡ ಆದಾಯದ ಮೂಲವಾಗಿದೆ. ಗೋವಾದ ಪ್ರವಾಸೋದ್ಯಮವು ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ನೇರವಾಗಿ 16.43% ಕೊಡುಗೆ ನೀಡುತ್ತದೆ. ಅಧಿಕೃತ ಅಂದಾಜಿನ ಪ್ರಕಾರ ಈ ವಲಯದ ಮೇಲೆ ಅವಲಂಬಿತವಾಗಿರುವ ರಾಜ್ಯದ ಜನಸಂಖ್ಯೆಯ ಸುಮಾರು 35% ರಷ್ಟು ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.

English summary
Goa tourism welcome tourists around the world, But it planning on strengthening law on littering, drinking on the beach and abandoning the bottles etc. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X