• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲಮಟ್ಟಿ ಆನಂದ: ಈ ಜಲಾಶಯಕ್ಕೆ ಬೆಂಗಳೂರಿಗರು ಹೇಗೆ ಹೋಗುವುದು?

|
Google Oneindia Kannada News

ವಿಜಯಪುರ, ಆಗಸ್ಟ್ 20: ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆರಾಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾನೆ. ಉತ್ತರ ಕರ್ನಾಟಕದಲ್ಲೂ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಜಲಾಶಯಗಳು ಭರ್ತಿ ಆಗುತ್ತಿವೆ. ಧುಮ್ಮಿಕ್ಕುವ ಜಲಾಶಯಗಳ ಸೌಂದರ್ಯ ಸವಿಯುವುದಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳ ಪಟ್ಟಿಯಲ್ಲಿ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಜಲವಿದ್ಯುತ್ ಯೋಜನೆಗೆ ನಿರ್ಮಿಸಿರುವ ಡ್ಯಾಂ ಈಗ ಸೌಂದರ್ಯ ಸಾಗರವಾಗಿ ಕಂಗೊಳಿಸುತ್ತಿದೆ. ಸುಂದರ ಪರಿಸರದ ನಡುವೆ ಹಸಿರಿನ ಮಧ್ಯೆ ಹರಿಯುವ ನೀರು ಪ್ರವಾಸಿಗರ ಕಣ್ಣಿಗೆ ಭೂಸ್ವರ್ಗದ ಭಾವನೆ ಅನ್ನು ಹುಟ್ಟು ಹಾಕುತ್ತಿದೆ.

ವಾಣಿವಿಲಾಸ ವೈಭೋಗ: ಬೆಂಗಳೂರಿಗರು ಈ ಡ್ಯಾಂ ತಲುಪುವುದು ಹೇಗೆ?ವಾಣಿವಿಲಾಸ ವೈಭೋಗ: ಬೆಂಗಳೂರಿಗರು ಈ ಡ್ಯಾಂ ತಲುಪುವುದು ಹೇಗೆ?

ಬೆಂಗಳೂರಿಗರು ಅಥವಾ ರಾಜ್ಯದ ಯಾವುದೇ ಜಿಲ್ಲೆಯ ಜನರು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಮ್ಮೆ ವಿಸಿಟ್ ಕೊಡಬೇಕು. ಪ್ರವಾಸಿಪ್ರಿಯರು ಇಲ್ಲಿಗೆ ಏಕೆ ಹೋಗಬೇಕು ಎನ್ನುವುದಕ್ಕೂ ಪೂರ್ವದಲ್ಲಿ ಈ ಸ್ಥಳದ ಮಹತ್ವ ಹಾಗೂ ಇತಿಹಾಸವನ್ನು ತಿಳಿದುಕೊಳ್ಳಿ. ಒಂದು ಬಾರಿ ಆಲಮಟ್ಟಿಗೆ ಹೋಗಿ ಬನ್ನಿ.

ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎಲ್ಲಿದೆ?

ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎಲ್ಲಿದೆ?

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಈ ಆಲಮಟ್ಟಿ ಜಲಾಶಯವನ್ನು ನಿರ್ಮಿಸಲಾಗಿದೆ. ಆಲಮಟ್ಟಿಯಿಂದ ಎರಡು ಕಿಲೋ ಮೀಟರ್ ದೂರದಲ್ಲಿಯೇ ಈ ಜಲಾಶಯ ಇದೆ. ಆಲಮಟ್ಟಿಯ ಜಲಾಶಯಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಎಂದು ನಾಮಕರಣ ಮಾಡಲಾಗಿದ್ದು, 2010ರಲ್ಲಿ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಉದ್ಘಾಟನೆ ಮಾಡಿದ್ದರು. 2005ರ ಜುಲೈ ತಿಂಗಳಿನಲ್ಲಿ ಪೂರ್ಣಗೊಂಡಿರುವ ಉತ್ತರ ಕರ್ನಾಟಕದ ಕೃಷ್ಣ ನದಿಯ ಮೇಲಿನ ಈ ಆಲಮಟ್ಟಿ ಅಣೆಕಟ್ಟು ಒಂದು ಜಲವಿದ್ಯುತ್ ಯೋಜನೆಯಾಗಿದೆ.

ವಾರ್ಷಿಕ ವಿದ್ಯುತ್ ಉತ್ಪಾದನೆ ಪ್ರಮಾಣವೆಷ್ಟು?

ವಾರ್ಷಿಕ ವಿದ್ಯುತ್ ಉತ್ಪಾದನೆ ಪ್ರಮಾಣವೆಷ್ಟು?

ಆಲಮಟ್ಟಿ ಜಲಾಶಯದ ಅಣೆಕಟ್ಟಿನಲ್ಲಿ ವಾರ್ಷಿಕ ವಿದ್ಯುತ್ ಉತ್ಪಾದನೆಯು 560 MU (ಅಥವಾ GWh) ಆಗಿದೆ. 290 ಮೆವ್ಯಾ ವಿದ್ಯುತ್ ಕೇಂದ್ರವು ಆಲಮಟ್ಟಿ ಅಣೆಕಟ್ಟಿನ ಬಲಭಾಗದಲ್ಲಿದೆ. ಈ ಸೌಲಭ್ಯವು ಲಂಬವಾದ ಕಾಪ್ಲಾನ್ ಟರ್ಬೈನ್ ಗಳನ್ನು ಬಳಸುತ್ತದೆ. ಐದು 55 MW ಜನರೇಟರ್ ಮತ್ತು ಒಂದು 15 MMW ಜನರೇಟರ್ ಆಗಿದೆ. ಕೆಳಮಟ್ಟದ ನೀರಾವರಿ ಅಗತ್ಯಗಳನ್ನು ಪೂರೈಸಲು ವಿದ್ಯುತ್ ಉತ್ಪಾದನೆಗೆ ಬಳಸಿದ ನಂತರ ನೀರನ್ನು ನಾರಾಯಣಪುರ ಜಲಾಶಯಕ್ಕೆ ಬಿಡುಗಡೆ ಮಾಡಲಾಗುತ್ತದೆ.

ಆಲಮಟ್ಟಿ ಜಲಾಶಯ ನಿರ್ಮಾಣದ ವೆಚ್ಚ ಎಷ್ಟು?

ಆಲಮಟ್ಟಿ ಜಲಾಶಯ ನಿರ್ಮಾಣದ ವೆಚ್ಚ ಎಷ್ಟು?

ಈ ಯೋಜನೆಯ ಆರಂಭಿಕ ಹಂತಗಳಲ್ಲಿ, ಅಂದಾಜು ವೆಚ್ಚವನ್ನು 1470 ಕೋಟಿ ರೂಪಾಯಿ ಎಂದು ಯೋಜಿಸಲಾಗಿತ್ತು. ಆದರೆ ಯೋಜನಾ ನಿರ್ವಹಣೆಯ ವರ್ಗಾವಣೆಯನ್ನು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್)ಗೆ ವಹಿಸಿದ ನಂತರ ಅಂದಾಜು ವೆಚ್ಚವನ್ನು ಶೇ.50ರಷ್ಟು ಕಡಿತಗೊಳಿಸಲಾಯಿತು. 674 ಕೋಟಿ ರೂಪಾಯಿ ಆಗಿದ್ದು, ಅಂತಿಮವಾಗಿ ಕೆಪಿಸಿಎಲ್ ಈ ಯೋಜನೆಗೆ ರೂ. 520 ಕೋಟಿ ವೆಚ್ಚ ಮಾಡಿತು. 40 ತಿಂಗಳುಗಳಲ್ಲಿ ಸಂಪೂರ್ಣ ಅಣೆಕಟ್ಟು ಪೂರ್ಣಗೊಂಡಿದ್ದು, ಜುಲೈ 2005ರಲ್ಲಿ ನಿರ್ಮಾಣವು ಕೊನೆಗೊಂಡಿತು.

ಈ ಅಣೆಕಟ್ಟು ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಅಂಚಿನಲ್ಲಿದೆ. ಭೌಗೋಳಿಕವಾಗಿ, ಇದು ಬಿಜಾಪುರ ಜಿಲ್ಲೆಯಲ್ಲಿದೆ, ಆದರೆ ಜಲಾಶಯವನ್ನು ಭರ್ತಿ ಮಾಡುವ ಕಾರಣ ಬಾಗಲಕೋಟೆ ಜಿಲ್ಲೆಯ ದೊಡ್ಡ ಪ್ರದೇಶಗಳನ್ನು ಮುಳುಗಿಸಲಾಗಿದೆ. ಈ ಅಣೆಕಟ್ಟು ಒಟ್ಟು ನೀರಿನ ಶೇಖರಣಾ ಸಾಮರ್ಥ್ಯವನ್ನು 123.08 ಟಿಎಂಸಿ 519 ಮೀಟರ್ ಎಂಎಸ್ಎಲ್ ನಲ್ಲಿ ಹೊಂದಿದೆ

ಆಲಮಟ್ಟಿ ಡ್ಯಾಂ ಅಂಗಳದಲ್ಲಿ ಏನೆಲ್ಲಾ ಇದೆ ಗೊತ್ತಾ?

ಆಲಮಟ್ಟಿ ಡ್ಯಾಂ ಅಂಗಳದಲ್ಲಿ ಏನೆಲ್ಲಾ ಇದೆ ಗೊತ್ತಾ?

ಪ್ರವಾಸಿಗರ ಪಾಲಿಗೆ ಆಲಮಟ್ಟಿ ಡ್ಯಾಂ ಕೇವಲ ಒಂದು ಜಲಾಶಯವಾಗಿ ಮನಸ್ಸು ಗೆದ್ದಿರುವುದಲ್ಲ. ಅದರ ಬದಲಿಗೆ ಇದೇ ಆಲಮಟ್ಟಿ ಡ್ಯಾಂ ಅಂಗಳದಲ್ಲಿ ಹಲವು ವೈಶಿಷ್ಚ್ಯಗಳು ಜನರ ಮನಸ್ಸು ಗೆದ್ದಿವೆ. ಇದೇ ಆಲಮಟ್ಟಿ ನೆಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

* ಆಲಮಟ್ಟಿ ಜಲಾಶಯ

* ಮೊಗಲ್ ಗಾರ್ಡನ್

* ರಾಕ್ ಗಾರ್ಡನ್

* ಜಪಾನೀಸ್ ಗಾರ್ಡನ್ ಮತ್ತು ದೋಣಿ ಚಾಲನೆ

* ಸಂಗೀತ ಕಾರಂಜಿ

ಆಲಮಟ್ಟಿ ತಲುಪುವುದು ಹೇಗೆ ಬೆಂಗಳೂರು ಮಂದಿ?

ಆಲಮಟ್ಟಿ ತಲುಪುವುದು ಹೇಗೆ ಬೆಂಗಳೂರು ಮಂದಿ?

ಗೋವಾ, ಪುಣೆ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳು ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. ಬೆಳಗಾವಿ ಮತ್ತು ಹುಬ್ಬಳ್ಳಿಯು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಹುಬ್ಬಳ್ಳಿಯಿಂದ ಬಾಗಲಕೋಟೆಗೆ ರಸ್ತೆ ಮಾರ್ಗದ ಮೂಲಕ ತಲುಪಲು 122.6 ಕಿ.ಮೀ. ಆಗುತ್ತದೆ. ಅಲ್ಲಿಂದ ನಿಡಗುಂದಿ ತಾಲೂಕಿನ ಈ ಆಲಮಟ್ಟಿ ಡ್ಯಾಂ ತಲುಪುವುದಕ್ಕೆ 56 ಕಿಲೋ ಮೀಟರ್ ಆಗುತ್ತದೆ. ಬಾಗಲಕೋಟೆಯಿಂದೆ ಆಲಮಟ್ಟಿ ಡ್ಯಾಂಗೆ ಒಂದು 45 ರಿಂದ 1 ಗಂಟೆ ಪ್ರಯಾಣವಾಗುತ್ತದೆ. ವಿಜಯಪುರದಿಂದ ಬಾಗಲಕೋಟೆಗೆ 83.8 ಕಿ.ಮೀ. ಆಗುತ್ತದೆ ಬೆಂಗಳೂರಿನಿಂದ ಬಾಗಲಕೋಟೆಗೆ 529 ಕಿಲೋ ಮೀಟರ್ ದೂರವಾಗುತ್ತದೆ.

ರೈಲ್ವೆ ಮಾರ್ಗದ ಮೂಲಕ ಹೋಗಲು ಬಯಸುವ ಪ್ರಯಾಣಿಕರು ಬಾಗಲಕೋಟೆವರೆಗೆ ರೈಲ್ವೆಗೆ ಹೋಗಲು ಅವಕಾಶವಿದೆ. ಬೆಂಗಳೂರಿನಿಂದ ಬಾಗಲಕೋಟೆಗೆ ಪ್ರತಿನಿತ್ಯ ಮೂರು ರೈಲುಗಳು ಸಂಚರಿಸುತ್ತವೆ. ಸಂಜೆ 4.50 ಬಸವ ಎಕ್ಸ್ ಪ್ರೆಸ್ 17307 ರೈಲು, ಸಂಜೆ 6.55ಕ್ಕೆ ಗೋಲಗುಂಬಜ್ ಎಕ್ಸ್ ಪ್ರೆಸ್ 16535 ರೈಲು ಹಾಗೂ ರಾತ್ರಿ 11.45ಕ್ಕೆ ವಿಜಯಪುರ ಎಕ್ಸ್ ಪ್ರೆಸ್ 06545 ರೈಲು ಸಂಚರಿಸಲಿವೆ. ಬಾಗಲಕೋಟೆಯಿಂದ ಈ ಆಲಮಟ್ಟಿ ಜಲಾಶಯಕ್ಕೆ 56 ಕಿಲೋ ಮೀಟರ್ ಆಗುತ್ತದೆ.

Recommended Video

   UAE ನಲ್ಲಿ ಅನುಭವವಿಲ್ಲದ ಭಾರತ ಪಾಕಿಸ್ತಾನದ‌ ಮುಂದೆ ಸೋಲೋದು‌ ಗ್ಯಾರೆಂಟಿ ಅಂತೆ!! | Oneindia Kannada
   English summary
   The Lal Bahadur Shastri Dam is also known as Almatti Dam is a hydroelectric project on the Krishna River in North Karnataka. Know attractions, Sightseeing and How to Reach from Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X