ಅಕ್ಟೋಬರ್ 27ರಿಂದ ಬೆಂಗಳೂರು-ಲಂಡನ್ ನಡುವೆ ಏರ್‌ ಇಂಡಿಯಾ ವಿಮಾನ ಸೇವೆ

ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಲಂಡನ್ ನಡುವೆ ತಡೆ ರಹಿತ ವಿಮಾನ ಸೇವೆ ಅಕ್ಟೋಬರ್ 27ರಂದು ಆರಂಭವಾಗಲಿದೆ. ಏರ್ ಇಂಡಿಯಾ ಎರಡು ನಗರಗಳ ನಡುವೆ ವಿಮಾನ ಸೇವೆ ಆರಂಭಿಸುವುದಾಗಿ ಘೋಷಣೆ ಮಾಡಿದೆ. ವೆಬ್‌ಸೈಟ್‌ನಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ. ಈ ಮೂಲಕ ದೇಶದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣವಾಗಿರುವ ಬೆಂಗಳೂರು ಈಗ ಮತ್ತೊಂದು ವಿಮಾನ ಸೇವೆಗೆ ತಯಾರಾಗುತ್ತಿದೆ.

ಏರ್ ಇಂಡಿಯಾ ಬೆಂಗಳೂರು-ಲಂಡನ್‌ನ ಹೀಥ್ರೂ ನಡುವೆ ಅಕ್ಟೋಬರ್ 27ರಿಂದ ವಿಮಾನ ಸೇವೆಯನ್ನು ಆರಂಭಿಸಲಿದೆ. ಅಲ್ಲದೇ ಬೆಂಗಳೂರು ಲಂಡನ್ ನಡುವೆ ಪ್ರತಿದಿನ ವಾರಕ್ಕೆ 5 ಬಾರಿ ಸಂಚಾರ ನಡೆಸುತ್ತಿದ್ದ ವಿಮಾನ ಸೇವೆಯನ್ನು 7ದಿನಗಳಿಗೆ ವಿಸ್ತರಣೆ ಮಾಡಲಾಗಿದೆ.

Air India Non Stop Flight Between Bengaluru And London From October 27

ಸದ್ಯ ಏರ್ ಇಂಡಿಯಾದ ವಿಮಾನ ಬೆಂಗಳೂರು-ಲಂಡನ್‌ನ ಗಾಟ್ವಿಕ್‌ ಏರ್‌ಪೋರ್ಟ್‌ ನಡುವೆ ಸಂಚಾರ ನಡೆಸುತ್ತಿದೆ. ಇದನ್ನು ಬದಲಾವಣೆ ಮಾಡಿದ್ದು, ಬೆಂಗಳೂರು-ಲಂಡನ್‌ನ ಹೀಥ್ರೂ ನಡುವೆ ವಾರಕ್ಕೆ ಏಳು ದಿನಗಳ ಕಾಲ ಪ್ರತಿದಿನ ತಡೆ ರಹಿತ ವಿಮಾನ ಸಂಚಾರ ಆರಂಭಿಸಲಾಗುತ್ತದೆ ಎಂದು ಏರ್ ಇಂಡಿಯಾ ಹೇಳಿದೆ.

ಯಾವ ಮಾದರಿ ವಿಮಾನ: ಬೆಂಗಳೂರು-ಲಂಡನ್‌ನ ಹೀಥ್ರೂ ನಡುವೆ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನವನ್ನು ಓಡಿಸಲಿದೆ. ಬ್ಯುಸಿನೆಸ್ ಕ್ಲಾಸ್‌ನಲ್ಲಿ 18 ಬೆಡ್‌ಗಳು, 238 ಎಕಾನಮಿ ಕ್ಲಾಸ್ ಸೀಟುಗಳನ್ನು ವಿಮಾನ ಹೊಂದಿರಲಿದೆ. ಈ ಮೂಲಕ ಬೆಂಗಳೂರು-ಲಂಡನ್‌ನ ಹೀಥ್ರೂ ನಡುವಿನ ವಿಮಾನ ವಾರಕ್ಕೆ 3,584 ಸೀಟುಗಳನ್ನು ಹೆಚ್ಚುವರಿಯಾಗಿ ಪಡೆಯಲಿದೆ.

ಸದ್ಯ ಏರ್ ಇಂಡಿಯಾ ಲಂಡನ್‌ನ ಹೀಥ್ರೂನಿಂದ ದೆಹಲಿ ಮತ್ತು ಮುಂಬೈಗೆ ವಾರಕ್ಕೆ 31 ವಿಮಾನಗಳನ್ನು ಓಡಿಸುತ್ತಿದೆ. ಈಗ ಬೆಂಗಳೂರು-ಲಂಡನ್‌ನ ಹೀಥ್ರೂ ವಿಮಾನ ಸಂಚಾರದೊಂದಿಗೆ ಏರ್‌ ಇಂಡಿಯಾದ ಮೂರು ಹೆಡ್ ಕ್ವಾಟರ್ಸ್‌ಗಳಿಗೆ ಲಂಡನ್‌ನ ಹೀಥ್ರೂ ಸಂಪರ್ಕ ಕಲ್ಪಿಸಲಿದೆ. ಎಐ133 ವಿಮಾನ ಬೆಂಗಳೂರು-ಲಂಡನ್‌ನ ಹೀಥ್ರೂ ನಡುವೆ ಸಂಪರ್ಕ ಕಲ್ಪಿಸಲಿದೆ. ವಿಮಾನ 1420ಕ್ಕೆ ಹೊರಟು, 1930ಕ್ಕೆ ತಲುಪಲಿದೆ. ಲಂಡನ್‌ನ ಹೀಥ್ರೂ-ಬೆಂಗಳೂರು ನಡುವೆ ಎಐ132 ವಿಮಾನ ಸಂಚಾರ ನಡೆಸಲಿದೆ. 2105ಕ್ಕೆ ಹೊರಡುವ ವಿಮಾನ, 1220 +1ಆಗಮಿಸಲಿದೆ.

ಏರ್ ಇಂಡಿಯಾ ಲಂಡನ್‌ನ ಗಾಟ್ವಿಕ್‌ಗೆ ವಾರಕ್ಕೆ 12 ವಿಮಾನಗಳನ್ನು ಸಂಚಾರ ನಡೆಸುತ್ತಿದೆ. ಅಹಮದಾಬಾದ್, ಅಮೃತ್‌ಸರ್, ಗೋವಾ ಮತ್ತು ಕೊಚ್ಚಿಯಿಂದ ಲಂಡನ್‌ನ ಗಾಟ್ವಿಕ್‌ಗೆ ವಿಮಾನ ಸೇವೆ ಇದೆ. ಈಗಾಗಲೇ ಏರ್ ಇಂಡಿಯಾದ ಬೆಂಗಳೂರು-ಲಂಡನ್‌ನ ಹೀಥ್ರೂ ವಿಮಾನ ಸೇವೆಯ ಬುಕ್ಕಿಂಗ್ ಎಲ್ಲಾ ವೆಬ್‌ಸೈಟ್‌ಗಳಲ್ಲಿ ಆರಂಭವಾಗಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಈ ವಾರ ಹೊಸ ಸಾಧನೆ ಮಾಡಿದೆ. ಮಂಗಳವಾರ ವಿಮಾನ ನಿಲ್ದಾಣಕ್ಕೆ 782 ವಿಮಾನಗಳು ಆಗಮಿಸಿ/ ನಿರ್ಗಮಿಸಿವೆ. ನಗರದ ವಿಮಾನ ನಿಲ್ದಾಣದಲ್ಲಿ ತಿಂಗಳಿನಿಂದ ತಿಂಗಳಿಗೆ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಮೇ 24, 2008ರಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿತು. ಅಕ್ಟೋಬರ್ 17ರಂದು ಅತಿ ಹೆಚ್ಚು ಎಂದರೆ 782 ಏರ್ ಟ್ರಾಫಿಕ್ ಮೂಮೆಂಟ್ಸ್ ದಾಖಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಅಕ್ಟೋಬರ್ 11ರಂದು 770 ವಿಮಾನಗಳು ಆಗಮಿಸಿ/ ನಿರ್ಗಮಿಸಿದ್ದವು. ಕೋವಿಡ್ ಪರಿಸ್ಥಿತಿಗೂ ಮೊದಲು ಅಂದರೆ 2019 ಜನವರಿ 11ರಂದು ವಿಮಾನ ನಿಲ್ದಾಣದಲ್ಲಿ 750 ಏರ್ ಟ್ರಾಫಿಕ್ ಮೂಮೆಂಟ್ಸ್ ದಾಖಲಾಗಿತ್ತು. ಎರಡು ರನ್‌ವೇ ಮತ್ತು ಟರ್ಮಿನಲ್ ಹೊಂದಿರುವ ವಿಮಾನ ನಿಲ್ದಾಣಕ್ಕೆ ಈ ಆರ್ಥಿಕ ವರ್ಷದ ಅಂತ್ಯಕ್ಕೆ 40 ಮಿಲಿಯನ್ ಪ್ರಯಾಣಿಕರು ಭೇಟಿ ನೀಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+