ತಾಂಬರಂ-ಮಂಗಳೂರು ಜಂಕ್ಷನ್ ಎಸಿ ವಿಶೇಷ ರೈಲು: ವೇಳಾಪಟ್ಟಿ, ನಿಲ್ದಾಣ
ಮಂಗಳೂರು, ಜೂನ್ 05: ದಕ್ಷಿಣ ರೈಲ್ವೆ ತಮಿಳುನಾಡಿನ ತಾಂಬರಂ ಮತ್ತು ಕರ್ನಾಟಕ ಕರಾವಳಿಯ ಮಂಗಳೂರು ನಡುವೆ ವಿಶೇಷ ಹವಾನಿಯಂತ್ರಿತ ರೈಲನ್ನು ಓಡಿಸುತ್ತಿದೆ. ಪ್ರಯಾಣಿಕರ ಬೇಡಿಕೆಯಂತೆ ಹೊಸ ರೈಲು ಓಡಿಸುತ್ತಿದ್ದು, ಜನರು ಹೊಸ ರೈಲು ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ತಾಂಬರಂ- ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆ ಎರಡು ಬಾರಿ ಎಸಿ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ದಕ್ಷಿಣ ರೈಲ್ವೆ ಪ್ರಕಟಿಸಿದೆ. ಉಭಯ ನಗರಗಳ ನಡುವಿನ ಪ್ರಯಾಣಿಕರ ದಟ್ಟಣೆ ಗಮನಿಸಿ, ವಿಶೇಷ ರೈಲು ಓಡಿಸಲಾಗುತ್ತಿದೆ.

ರೈಲಿನ ವೇಳಾಪಟ್ಟಿ, ನಿಲ್ದಾಣ: ರೈಲು ನಂಬರ್ 06047 ತಾಂಬರಂ-ಮಂಗಳೂರು ಜಂಕ್ಷನ್ ವಾರಕ್ಕೆರಡು ಬಾರಿ ಸಂಚಾರ ನಡೆಸುವ ರೈಲು ತಾಂಬರಂ ನಿಲ್ದಾಣವನ್ನು 13:55ಕ್ಕೆ 7, 9, 14, 16, 21, 23, 28 ಮತ್ತು 30 ಜೂನ್‌ರಂದು (ಶುಕ್ರವಾರ ಮತ್ತು ಭಾನುವಾರ) ಹೊರಡಲಿದ್ದು, ಮಂಗಳೂರು ಜಂಕ್ಷನ್‌ಗೆ ಮರುದಿನ 06:55ಕ್ಕೆ ಆಗಮಿಸಲಿದೆ. ಒಟ್ಟು 8 ಟ್ರಿಪ್ ಈ ರೈಲು ಸಂಚಾರ ನಡೆಸಲಿದೆ.
ರೈಲು ನಂಬರ್ 06048 ಮಂಗಳೂರು ಜಂಕ್ಷನ್-ತಾಂಬರಂ ವಾರಕ್ಕೆರಡು ಬಾರಿ ಸಂಚಾರ ನಡೆಸುವ ರೈಲು ಮಂಗಳೂರು ಜಂಕ್ಷನ್‌ನಿಂದ 12:00 ಗಂಟೆಗೆ 8, 10, 15, 16, 22, 24, 29 ಜೂನ್ ಮತ್ತು ಜುಲೈ 1ಕ್ಕೆ (ಶನಿವಾರ & ಸೋಮವಾರ) ಹೊರಟು ತಾಂಬರಂ ನಿಲ್ದಾಣವನ್ನು 04:45ಕ್ಕೆ ತಲುಪಲಿದೆ. (ಒಟ್ಟು 8 ಟ್ರಿಪ್).
ರೈಲುಗಳ ಮಾರ್ಗ ಬದಲಾವಣೆ/ ಮರು ವೇಳಾಪಟ್ಟಿ: ಸೇಲಂ ವಿಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವುದರಿಂದ ಕೆಲವು ರೈಲುಗಳ ಮಾರ್ಗ ಬಾದಲಾವಣೆ ಮಾಡಲು ದಕ್ಷಿಣ ರೈಲ್ವೆ ಸೂಚಿಸಿದೆ.
ಜೂನ್ 5, 6 ಮತ್ತು 13ರಂದು ಎರ್ನಾಕುಲಂನಿಂದ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಆದ್ದರಿಂದ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಮತ್ತು ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ.
ಜೂನ್ 5, 6 ಮತ್ತು 13ರಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12677 ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಆದ್ದರಿಂದ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಮತ್ತು ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ
ನಿಲುಗಡೆಯಾಗಲಿದೆ.
ಜೂನ್ 5, 12 ಮತ್ತು 19ರಂದು ಎಸ್‌ಎಂಐಟಿ ಬೆಂಗಳೂರಿನಿಂದ ಸಂಚರಿಸುವ ರೈಲು ಸಂಖ್ಯೆ 06084 ಎಸ್‌ಎಂವಿಟಿ ಬೆಂಗಳೂರು-ಕೊಚುವೇಲಿ ಎಕ್ಸ್‌ಪ್ರೆಸ್ ರೈಲು ಮಾರ್ಗ ಮದ್ಯದಲ್ಲಿ 20 ನಿಮಿಷ ನಿಯಂತ್ರಿಸಲಾಗುವುದು.
ಕನ ಸೊಲಿಮ್ - ಮಜೊರ್ಡಾ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ - ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಜೂನ್ 10ರಂದು ವಾಸ್ಕೋ-ಡ-ಗಾಮಾದಿಂದ ಹೊರಡಲಿದ್ದು, 120 ನಿಮಿಷ ತಡವಾಗಿ ಹೊರಡಲಿದೆ.
ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ - ಹೌಸ್‌ನಗರ ಎಕ್ಸ್‌ಪ್ರೆಸ್ ಜೂನ್ 9ರಂದು ವಾಸ್ಕೋ-ಡ- ಗಾಮಾದಿಂದ ಹೊರಡುವ ರೈಲು ವಾಸ್ಕೋ-ಡ-ಗಾಮಾದಲ್ಲಿ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗದಲ್ಲಿ 105 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.











Click it and Unblock the Notifications