2024ರ ಈ ತಿಂಗಳ ವೇಳೆಗೆ ಭಾರತದಲ್ಲಿ 200 ವಿಮಾನ ಹಾರಾಟ ಸಾಧ್ಯತೆ
ನವದೆಹಲಿ, ನವೆಂಬರ್, 28: ಮುಂದಿನ ವರ್ಷ ಅಂದರೆ 2024ರ ಮಾರ್ಚ್ ವೇಳೆಗೆ ದೇಶದಲ್ಲಿ 200 ವಿಮಾನಗಳ ಹಾರಾಟ ನೆಲಕಚ್ಚುವ ಸಾಧ್ಯತೆಯಿದೆ ಎಂದು ವಾಯುಯಾನ ಸಲಹಾ ಸಂಸ್ಥೆ ಕ್ಯಾಪಾ ಇಂಡಿಯಾ ತಿಳಿಸಿದೆ. ಅವುಗಳಲ್ಲಿ 90ಕ್ಕೂ ಹೆಚ್ಚು ದೇಶದ ಅತಿದೊಡ್ಡ ವಾಹಕ ಇಂಡಿಗೊ ಆಗಿರುತ್ತವೆ ಎಂದು ತಿಳಿಸಿದೆ.
ಏರ್ ಇಂಡಿಯಾ 25-30 ವಿಮಾನಗಳನ್ನು ಹೊಂದುವ ನಿರೀಕ್ಷೆ ಇದ್ದರೆ, ಸ್ಪೈಸ್ ಜೆಟ್‌ನ ನೆಲದ ವಿಮಾನಗಳ ಸಂಖ್ಯೆ ಸುಮಾರು 27 ಆಗಿರುತ್ತದೆ ಎಂದು ಕಾಪಾ ತನ್ನ ವರದಿಯಲ್ಲಿ ತಿಳಿಸಿದೆ. ಇದೀಗ ಇಂಡಿಗೊ, ಏರ್ ಇಂಡಿಯಾ, ಗೋ ಫಸ್ಟ್ ಮತ್ತು ಸ್ಪೈಸ್ ಜೆಟ್‌ನ 161-166 ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ವಾಯುಯಾನ ಕ್ಷೇತ್ರವು ಮಾರ್ಚ್ 2024ರ ವೇಳೆಗೆ 790 ವಿಮಾನಗಳು ಹೊಂದುವ ಸಾಧ್ಯತೆಯಿದೆ, ಅದರಲ್ಲಿ 588 ವಿಮಾನಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ವಾಯುಯಾನ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ. ಭಾರತದ ಅತ್ಯಂತ ಕಿರಿಯ ವಿಮಾನಯಾನ ಸಂಸ್ಥೆ ಅಕಾಸಾ ಏರ್‌ಗೆ ವಿಮಾನ ವಿತರಣೆಯಲ್ಲಿ ವಿಳಂಬ ಆಗಲಿದೆ ಎಂದು ಸಿಎಪಿಎ ಇಂಡಿಯಾ ತಿಳಿಸಿದೆ.
ನವೆಂಬರ್ ತಿಂಗಳ ಆರಂಭದಿಂದ ಇಂಡಿಗೊ ತನ್ನ ಪ್ರಾಟ್ & ವಿಟ್ನಿ (ಪಿ ಮತ್ತು ಡಬ್ಲ್ಯೂ) ಚಾಲಿತ ಫ್ಲೀಟ್‌ನಲ್ಲಿ ಪೌಡರ್ ಮೆಟಲ್ ಸಮಸ್ಯೆಯಿಂದಾಗಿ ಸುಮಾರು 35 ವಿಮಾನಗಳನ್ನು ಹಾರಟ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ತನ್ನ 334 ವಿಮಾನಗಳಲ್ಲಿ, ಪಿಡಬ್ಲ್ಯೂ ಚಾಲಿತ ವಿಮಾನಗಳ ಸಂಖ್ಯೆ ಈಗ 40ಕ್ಕಿಂತ ಹೆಚ್ಚಾಗಿದೆ ಎಂದು ಏರ್‌ಲೈನ್ಸ್ ಈ ಹಿಂದೆ ಮಾಹಿತಿ ನೀಡಿತ್ತು.
ಕ್ಯಾಪಾ ಇಂಡಿಯಾ ತನ್ನ ವರದಿಯಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಗೆ ಸಂಬಂಧಿಸಿದಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆ ಕ್ರಮವಾಗಿ 155 ಮಿಲಿಯನ್ ಮತ್ತು 70 ಮಿಲಿಯನ್ ಪ್ರಯಾಣಿಕರು ಎಂದು ನಿರೀಕ್ಷಿಸಲಾಗಿದೆ.
2022-23ರ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣಗಳು 57 ಮಿಲಿಯನ್ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ದಾಖಲಿಸಿವೆ ಮತ್ತು ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ 136 ಮಿಲಿಯನ್ ಪ್ರಯಾಣಿಕರದ್ದಾಗಿದೆ.
ನವದೆಹಲಿ, ನವೆಂಬರ್, 28: ಮುಂದಿನ ವರ್ಷ ಅಂದರೆ 2024ರ ಮಾರ್ಚ್ ವೇಳೆಗೆ ದೇಶದಲ್ಲಿ 200 ದೇಶೀಯ ವಿಮಾನಗಳು ಹಾರಾಟ ನೆಲಕಚ್ಚುವ ಸಾಧ್ಯತೆಯಿದೆ ಎಂದು ವಾಯುಯಾನ ಸಲಹಾ ಸಂಸ್ಥೆ ಕ್ಯಾಪಾ ಇಂಡಿಯಾ ತಿಳಿಸಿದೆ. ಅವುಗಳಲ್ಲಿ 90ಕ್ಕೂ ಹೆಚ್ಚು ದೇಶದ ಅತಿದೊಡ್ಡ ವಾಹಕ ಇಂಡಿಗೊ ಆಗಿರುತ್ತವೆ ಎಂದು ತಿಳಿಸಿದೆ.
ಏರ್ ಇಂಡಿಯಾ 25-30 ವಿಮಾನಗಳನ್ನು ಹೊಂದುವ ನಿರೀಕ್ಷೆ ಇದ್ದರೆ, ಸ್ಪೈಸ್ ಜೆಟ್‌ನ ನೆಲದ ವಿಮಾನಗಳ ಸಂಖ್ಯೆ ಸುಮಾರು 27 ಆಗಿರುತ್ತದೆ ಎಂದು ಕಾಪಾ ತನ್ನ ವರದಿಯಲ್ಲಿ ತಿಳಿಸಿದೆ. ಇದೀಗ ಇಂಡಿಗೊ, ಏರ್ ಇಂಡಿಯಾ, ಗೋ ಫಸ್ಟ್ ಮತ್ತು ಸ್ಪೈಸ್ ಜೆಟ್‌ನ 161-166 ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ವಾಯುಯಾನ ಕ್ಷೇತ್ರವು ಮಾರ್ಚ್ 2024ರ ವೇಳೆಗೆ 790 ವಿಮಾನಗಳು ಹೊಂದುವ ಸಾಧ್ಯತೆಯಿದೆ, ಅದರಲ್ಲಿ 588 ವಿಮಾನಗಳು ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ವಾಯುಯಾನ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ. ಭಾರತದ ಅತ್ಯಂತ ಕಿರಿಯ ವಿಮಾನಯಾನ ಸಂಸ್ಥೆ ಅಕಾಸಾ ಏರ್‌ಗೆ ವಿಮಾನ ವಿತರಣೆಯಲ್ಲಿ ವಿಳಂಬ ಆಗಲಿದೆ ಎಂದು ಸಿಎಪಿಎ ಇಂಡಿಯಾ ತಿಳಿಸಿದೆ.
ನವೆಂಬರ್ ತಿಂಗಳ ಆರಂಭದಿಂದ ಇಂಡಿಗೊ ತನ್ನ ಪ್ರಾಟ್ & ವಿಟ್ನಿ (ಪಿ ಮತ್ತು ಡಬ್ಲ್ಯೂ) ಚಾಲಿತ ಫ್ಲೀಟ್‌ನಲ್ಲಿ ಪೌಡರ್ ಮೆಟಲ್ ಸಮಸ್ಯೆಯಿಂದಾಗಿ ಸುಮಾರು 35 ವಿಮಾನಗಳನ್ನು ಹಾರಟ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿತ್ತು. ತನ್ನ 334 ವಿಮಾನಗಳಲ್ಲಿ, ಪಿಡಬ್ಲ್ಯೂ ಚಾಲಿತ ವಿಮಾನಗಳ ಸಂಖ್ಯೆ ಈಗ 40ಕ್ಕಿಂತ ಹೆಚ್ಚಾಗಿದೆ ಎಂದು ಏರ್‌ಲೈನ್ಸ್ ಈ ಹಿಂದೆ ಮಾಹಿತಿ ನೀಡಿತ್ತು.
ಕ್ಯಾಪಾ ಇಂಡಿಯಾ ತನ್ನ ವರದಿಯಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆಗೆ ಸಂಬಂಧಿಸಿದಂತೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆ ಕ್ರಮವಾಗಿ 155 ಮಿಲಿಯನ್ ಮತ್ತು 70 ಮಿಲಿಯನ್ ಪ್ರಯಾಣಿಕರು ಎಂದು ನಿರೀಕ್ಷಿಸಲಾಗಿದೆ.
2022-23ರ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣಗಳು 57 ಮಿಲಿಯನ್ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ದಾಖಲಿಸಿವೆ ಮತ್ತು ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ 136 ಮಿಲಿಯನ್ ಪ್ರಯಾಣಿಕರದ್ದಾಗಿದೆ.

Click it and Unblock the Notifications