ಹಂಪಿ ಉತ್ಸವ ನಿಮಿತ್ತ ವಿಶೇಷ ಪ್ರವಾಸ

hampi ratha..img:instablogimages.comಹೊಸಪೇಟೆ, ಅ. 27: ಇದೇ ನವೆಂಬರ್ 03ರಿಂದ 05 ರವರೆಗೆ ಹಂಪಿಯಲ್ಲಿ ಜರುಗಲಿರುವ ಹಂಪಿ ಉತ್ಸವ-2008ರ ಪ್ರಯುಕ್ತ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹೊಸಪೇಟೆಯಿಂದ ವಿಶೇಷ ಪ್ರವಾಸಗಳನ್ನು ವ್ಯವಸ್ಥೆಗೊಳಿಸಿದ್ದು, ಈ ಪ್ರವಾಸಗಳು ನವೆಂಬರ್ 03ರಿಂದ ಆರಂಭಗೊಂಡು, ನವೆಂಬರ್ 10 ರ ವರೆಗೆ ಮುಂದುವರೆಯಲಿದೆ.

ಪ್ರತಿದಿನ ಹೊಸಪೇಟೆಯಿಂದ ಬೆಳಿಗ್ಗೆ 8.00 ಗಂಟೆಗೆ ಹೊರಟು ಆನೆಗುಂದಿ, ನವಬೃಂದಾವನ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ದುರ್ಗಾದೇವಿ ದೇವಸ್ಥಾನ ಹಾಗೂ ದರೋಜಿ ಕರಡಿಧಾಮ ಸಂದರ್ಶಿಸಿ, ಸಂಜೆ 7.30 ಕ್ಕೆ ಪ್ರವಾಸಕ್ಕೆ ವೆಚ್ಚ ಒಬ್ಬರಿಗೆ 350ರುಗಳಾಗಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದೆ. 5ವರ್ಷ ಮೇಲ್ಪಟ್ಟವರಿಗೆ ಪೂರ್ಣ ಶುಲ್ಕ ಪಾವತಿಸಬೇಕಾಗುವುದು.

ಎರಡನೆಯದಾಗಿ ಹಂಪಿ, ದರೋಜಿ ಕರಡಿ ಧಾಮ ಪ್ರವಾಸಕ್ಕೆ ಬೆಳಿಗ್ಗೆ 8.00 ಕ್ಕೆ ಹೊರಡಲಾಗುವುದು. ಪ್ರವಾಸದ ಶುಲ್ಕ ಒಬ್ಬರಿಗೆ 300ರುಗಳನ್ನು ನಿಗದಿಪಡಿಸಲಾಗಿದೆ. ಈ ಪ್ರವಾಸದ ವಿಶೇಷ ಆಕರ್ಷಣೆಯೆಂದರೆ ಉತ್ಸವದ ದಿನಗಳಂದು ಪ್ರವಾಸದಿಂದ ಹಿಂದಿರುಗುವಾಗ ಕಮಲಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಪ್ರವಾಸಿಗರಿಗೆ ಒಂದು ಗಂಟೆ ಅವಕಾಶ ಕಲ್ಪಿಸಲಾಗುವುದು.

ಇತರೆ ಪ್ರವಾಸಿ ತಾಣಗಳ ಪ್ರವಾಸಕ್ಕೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವ್ಯವಸ್ಥೆ ಮಾಡಿದ್ದು, ಈ ಅವಧಿಯಲ್ಲಿ ಬಾದಾಮಿ, ಬನಶಂಕರಿ, ಪಟ್ಟದಕಲ್ಲು ಹಾಗೂ ಐಹೊಳೆಗೆ ಒಂದು ದಿನದ ಪ್ರವಾಸವನ್ನು ಬೆಳಿಗ್ಗೆ 7.00ರಿಂದ ರಾತ್ರಿ 9.30ರವರೆಗೆ ವ್ಯವಸ್ಥೆಗೊಳಿಸಲಾಗಿದೆ. ಈ ಪ್ರವಾಸದ ಶುಲ್ಕ ತಲಾ ಒಬ್ಬರಿಗೆ 500ರು.ಗಳನ್ನು ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಹೊಸಪೇಟೆ ಕಛೇರಿಯ ಸಹಾಯಕ ಸಾರಿಗೆ ಅಧಿಕಾರಿ ಕೆ.ಎಂ. ಹತ್ತಿಕಾಳ ಅವರು ತಿಳಿಸಿದ್ದಾರೆ.

ಈ ಪ್ರವಾಸಗಳಲ್ಲದೆ ನಿಗಮ ಪ್ರತಿದಿನವೂ ಹಂಪಿ-ಟಿ.ಬಿ.ಡ್ಯಾಂ ಪ್ರವಾಸ ಏರ್ಪಡಿಸುತ್ತಿದ್ದು, ಪ್ರತಿಯೊಬ್ಬರಿಗೂ 175 ರುಗಳನ್ನು ಪ್ರವಾಸ ವೆಚ್ಚ ನಿಗದಿಗೊಳಿಸಿದೆ. ಈ ಪ್ರವಾಸಗೊಳಿಗೆ ಮುಂಗಡ ಬುಕ್ಕಿಂಗ್ ಮಾಡಿಸಿಕೊಳ್ಳಬಯಸುವವರು ಹೊಸಪೇಟೆಯ ಕಾಲೇಜು ರಸ್ತೆಯಲ್ಲಿರುವ ರಾಜ್ಯ ಪ್ರವಾಸೋದ್ಯಮ ಕಛೇರಿಯಲ್ಲಿರುವ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿ / ಸಿಬ್ಬಂದಿಯನ್ನು ಸಂಪರ್ಕಿಸುವಂತೆ (ದೂರವಾಣಿ ಸಂಖ್ಯೆ:08394-221008) ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+