ಮೋಟರ್ ಬೈಕ್ನಲ್ಲಿ ಕರ್ನಾಟಕ ಚಾರಣ!
ಬೆಂಗಳೂರು, ಅ. 23 : ಮೋಟರ್ ಬೈಕ್ ನಲ್ಲಿ ಕರ್ನಾಟಕ ಸುತ್ತಾಡ ಬಯಸುವ ಸಾಹಸಿ ಚಾಲಕರಿಗೆ ಆಹ್ವಾನ. ಬೆಂಗಳೂರಿನ ಟ್ರಾವಲ್ ಲೈಫ್ ಉತ್ಸಾಹಿಗಳು ಆಯೋಜಿಸಿರುವ ಮೂರು ದಿನಗಳ 'ಬುಲೆಟೀರ್ ಮೋಟರ್ ಬೈಕ್ ಯಾತ್ರೆ'ಯಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ವಿವರಗಳು ಇಲ್ಲಿವೆ.
ರಸ್ತೆ : ಬೆಂಗಳೂರಿಂದ ಕೊಡಗು, ಕೊಡಗಿನಿಂದ ಪಶ್ಚಿಮಘಟ್ಟದ ಸಾಲು ಅಲ್ಲಿಂದ ಚಿಕ್ಕಮಂಗಳೂರು ಮತ್ತೆ ಬೆಂಗಳೂರು. ಅತ್ಯಂತ ಸಾಹಸಮಯವಾಗುವ ಈ ಬೈಕ್ ಯಾತ್ರೆ ಎರಡು ರಾತ್ರಿ ಮತ್ತು ಮೂರು ಹಗಲುಗಳ ರೋಚಕ ಅನುಭವ ನೀಡಲಿದೆ.
ನವೆಂಬರ್ 14ರಿಂದ ಆರಂಭವಾಗಿ ನವಂಬರ್ 16ಕ್ಕೆ ಕೊನೆಗೊಳ್ಳುವ ಯಾತ್ರೆಯಲ್ಲಿ Rappelling, Country Rafting, River Crossing ಅಂದರೆ, ಹಳ್ಳ ದಿಣ್ಣೆ ಎಲ್ಲಾ ದಾಟಿ ಒಂದೇ ಸಮನೆ ಓಡುವ ಗಾಡಿಯನ್ನು ಚಲಿಸುವ ಸಾಹಸ ಸಮಯ ನಿಮ್ಮದಾಗಲಿದೆ.
ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೋಟರ್ ಬೈಕ್ ಸಾಹಸಿಗಳಿಗೆ ಊಟ ವಸತಿಯನ್ನು ಆಯೋಜಕರು ಏರ್ಪಾಟು ಮಾಡುತ್ತಾರೆ. ಆಸಕ್ತರು 5000 ರೂಪಾಯಿಗಳನ್ನು ಸಲ್ಲಿಸಿ ಹೆಸರು ನೊಂದಾವಣೆ ಮಾಡಬಹುದು. ನೊಂದಾವಣೆಗೆ ಅವಕಾಶ ಸೀಮಿತವಾಗಿರುವುದರಿಂದ ಬೈಕ್ ಸಾಹಸಿಗಳು ಆಯೋಜಕರಿಗೆ ಬೇಗ ಬರೆದು ತಿಳಿಸಿರಿ.
ಇಮೇಲ್ : [email protected] ಅಥವಾ [email protected]. ದೂರವಾಣಿ : 080-2356 2839 /40; M: 98453 82953 / 98448 67611 / 96111 96123
ಅರ್ಜಿ ನಮೂನೆಗಳಿಗೆ ಮತ್ತಿತರ ವಿವರಗಳಿಗೆ ಭೇಟಿ ಕೊಡಿ : http://www.travelife.in/
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications