ಯಾಕೋ ಬೇಜಾರು, ಮೈಸೂರಿಗೆ ಹೋಗೋಣ?

ವಿಂಡ್ ಫ್ಲವರ್ ಸ್ಪಾ ಅಂಡ್ ರೆಸಾರ್ಟ್ ಮೈಸೂರಿನಲ್ಲಿರುವ ಜನಪ್ರಿಯ ಮತ್ತು ಅತ್ಯುತ್ತಮ ದರ್ಜೆಯ ರೆಸಾರ್ಟ್. ಇದು ಎಲ್ಲಿದೆ ಹೋಗೋದು ಹೇಗೆ? ಎಂದು ನೀವು ಕೇಳಬಹುದು. ಈ ರೆಸಾರ್ಟ್ ಮೈಸೂರಿನ ಪ್ರೇಕ್ಷಣಿಯ ಸ್ಥಳಗಳ ಆಸುಪಾಸಿನಲ್ಲಿಯೇ ಇದೆ. ಇದು ರೇಸ್ ಕೋರ್ಸ್ ಹಿಂಬಾಗದಲ್ಲಿದ್ದು, ಇಲ್ಲಿಂದ ಚಾಮುಂಡಿ ಬೆಟ್ಟ ಕೇವಲ 5 ಕಿ.ಮೀ. ದೂರವಿದೆ. ಬಸ್ ನಿಲ್ದಾಣದಿಂದ ಇಲ್ಲಿಗೆ 3 ಕಿ.ಮೀ. ದೂರವಿದೆ. ಮೈಸೂರು ಮೃಗಾಲಯ ಮತ್ತು ಅರಮನೆಗೆ ಇಲ್ಲಿಂದ ಕೇವಲ 5 ನಿಮಿಷ ಪ್ರಯಾಣ ಮಾಡಿದರೆ ಸಾಕು. [ರೆಸಾರ್ಟ್ ಫೋಟೋಗಳು]
ಎಲ್ಲಾ ಸರಿ ಈ ರೆಸಾರ್ಟ್ ನ ವಿಶೇಷತೆ ಏನು? ಯಾವೆಲ್ಲ ಸೌಕರ್ಯಗಳಿವೆ? ಅನ್ನೋ ಪ್ರಶ್ನೆ ಸಹಜ. ಸುತ್ತಲೂ ನೀರು ನಡುವೆ ಕುಟೀರ ಇರೋದರಿಂದ ಹಾಯಾಗಿರಬಹುದು. ಈಜುಕೊಳ, ಹಲವು ವಿಶೇಷತೆಗಳ ರೆಸ್ಟೊರೆಂಟ್, ಕಾಫಿ ಶಾಪ್, ಡ್ರಿಂಕ್ ಮಾಡ್ತೀರಂದ್ರೆ ಬಾರ್, ಒಂದಿಷ್ಟು ವ್ಯಾಯಾಮ, ಮೈಕೈಗೆ ಕಸರತ್ತು ಕೊಡಬೇಕಂದ್ರೆ ಅತ್ಯಾಧುನಿಕ ಜಿಮ್ ಕೂಡ ಇಲ್ಲಿದೆ. ಆಡಲು ಟೆನ್ನಿಸ್ ಅಂಗಣ, ಒಳಾಂಗಣ ಕ್ರೀಡಾಂಗಣ ಮತ್ತು ವೈ-ಫೈ ಇಂಟರ್ನೆಟ್ ಸೌಲಭ್ಯಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿವೆ.
ಐಎಸ್ ಪಿಎನಿಂದ ಮಾನ್ಯತೆ ಪಡೆದ ಭಾರತದ ಒಂದೇ ಸ್ಪಾ ಎಂದರೆ "ವಿಂಡ್ ಪ್ಲವರ್ ಸ್ಪಾ ಅಂಡ್ ರೆಸಾರ್ಟ್". ಇದು ಅಂಥ ದುಬಾರಿಯೇನಲ್ಲ. ಎರಡು ಹಗಲು ಒಂದು ರಾತ್ರಿ ಕಳೆಯಲು ರೂಮ್ ಬಾಡಿಗೆ ನಾಲ್ಕೈದು ಸಾವಿರ ಅಷ್ಟೇ. 2 ಹಗಲು, ಒಂದು ರಾತ್ರಿ ಎಕ್ಸ್ ಕ್ಲೂಸಿವ್ ರೂಮ್ ನಲ್ಲಿ ಕಳೆಯಲು ಇಚ್ಚಿಸಿದರೆ 4,200 ರೂ.ನಿಂದ 4,500 ರೂ. ನೀಡಿದರೆ ಸಾಕು. ನಿಮಗೆ ಡಿಲಕ್ಸ್ ರೂಮ್ ಬೇಕಿದ್ದಲ್ಲಿ 5,100 ರೂ.ರಿಂದ 5,850 ರೂ. ನೀಡಿದರೆ ಸಾಕು. ಹಾಯಾಗಿ ಕಾಲ ಕಳೆದು ಬರಬಹುದು. ಹ್ಯಾವ್ ಅ ನೈಸ್ ಹಾಲಿಡೇ.
;












Click it and Unblock the Notifications