ಪ್ರವಾಸಿಗರೇ : 2 ವಾರ ಜೋಗಕ್ಕೆ ಬರಬೇಡಿ
ಶಿವಮೊಗ್ಗ ಏ.20: ಬೇಸಿಗೆಯಲ್ಲಿ ವಾರಾಂತ್ಯ ಕಳೆಯಲು ಗೆರುಸೊಪ್ಪೆ(ಜೋಗ)ಕ್ಕೆ ಹೊರಟಿದ್ದರೆ, ದಯವಿಟ್ಟು ಮತ್ತೊಮ್ಮೆ ಯೋಚಿಸಿ. ಮೇ ಮೊದಲ ವಾರದವರೆಗೂ ಜೋಗಕ್ಕೆ ನೀರು ಹರಿಸುವುದನ್ನು ನಿಲ್ಲಿಸುವುದರಿಂದ ಜೋಗಕ್ಕೆ ಬರದಿರುವಂತೆ ಕರ್ನಾಟಕ ವಿದ್ಯುತ್ ಶಕ್ತಿ ನಿಗಮ(ಕೆಪಿಸಿ) ಪ್ರಕಟಣೆ ತಿಳಿಸಿದೆ.
ಲಿಂಗನಮಕ್ಕಿ ಅಣೆಕಟ್ಟೆಯ ಗೇಟುಗಳ ದುರಸ್ತಿ ಕಾಮಗಾರಿ ಮತು ತುರ್ತು ನಿರ್ವಹಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 20, 26, 27 ಹಾಗೂ ಮೇ ಮೊದಲ ವಾರದಲ್ಲಿ ಜಲಾಶಯದಿಂದ ನೀರು ಹರಿಸಲಾಗುವುದಿಲ್ಲ. ಜೋಗದ ಸೌಂದರ್ಯ ವೀಕ್ಷಿಸಲು ಬರುವ ಪ್ರವಾಸಿಗರು ನೀರಿನ ಅಗಾಧತೆ, ಜೋಗದ ಅಬ್ಬರದ ಕಲ್ಪನೆ ಹೊತ್ತು ಬಂದು ನಿರಾಶೆಯಿಂದ ವಾಪಾಸಾಗುವುದು ಬೇಡ ಎಂದು ಮೇ ಮೊದಲ ವಾರದವರೆಗೂ ಜಲಪಾತ ವೀಕ್ಷಿಸಲು ಬರದಿದ್ದರೆ ಚೆನ್ನ ಎಂದು ಜೋಗ ಜಲಪಾತ ನಿರ್ವಹಣಾ ಘಟಕದ ಪ್ರಕಟಣೆಯಲ್ಲಿ ಹೇಳಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications