ವಾರಾಂತ್ಯದ ರಜಾಮಜಾಕ್ಕೆ ಭೀಮೇಶ್ವರಿ ಫಿಷಿಂಗ್ ಕ್ಯಾಂಪ್
ಒಂದೆರಡು ದಿನದ ಬೇಸಿಗೆ ರಜಾ ಪ್ರವಾಸಕ್ಕೆ ತಕ್ಕುದಾದ ತಾಣ ಭೀಮೇಶ್ವರಿ. ಹಸುರು, ನೀರು ಮತ್ತು ಆಮ್ಲಜನಕ ಸಮೃದ್ಧ ಭೀಮೇಶ್ವರಿಗೆ ಈ ಏಪ್ರಿಲ್ ಮೇ ತಿಂಗಳ ಒಂದು ವಾರಾಂತ್ಯದ ನಿಮ್ಮ ಪಿಕ್‌ನಿಕ್ ಮೂಡನ್ನು ನದಿತೀರಕ್ಕೆ ತಿರುಗಿಸಬಹುದು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಅಲ್ಲಿ ನೀವು ಎರಡು ದಿನ ಹಾಯಾಗಿ ಕಾಲಕಳೆಯಬಹುದು.
ನಾವು ಸಲಹೆ ಮಾಡುತ್ತಿರುವ ಪ್ರವಾಸಿ ತಾಣದ ಪೂರ್ಣ ಹೆಸರು ಭೀಮೇಶ್ವರಿ ಫಿಶ್ಶಿಂಗ್ ಅಂಡ್ ನೇಚರ್ ಕ್ಯಾಂಪ್. ಉಷ್ಣ ವಲಯದ ದೈತ್ಯ ಎಂದೇ ಹೆಸರಾದ ಮಶೀರ್ ಮೀನುಗಳ ತವರು ಮನೆಯಿದು. ಗಜಗಾತ್ರದ ಈ ಮೀನುಗಳ ಆಟ ಚೆಲ್ಲಾಟ ನೋಡಿ ನಲಿಯುವುದೊಂದು ಸೊಗಸು. ಪ್ರವಾಸದಲ್ಲಿ ಜತೆಗೆ ಎಳೆಯರಿದ್ದರೆ ಅವರ ಬೇಸಿಗೆ ರಜೆಯ ಮೋಜಿಗೆ ಮೋಸವಿಲ್ಲ. ಬೆಳ್ಳಿ ಮೀನುಗಳಿಗೆ ನೀವೂ ಗಾಳ ಎಸೆಯಬಹುದು !
ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಭೀಮೇಶ್ವರಿಗೆ ಕೇವಲ 100 ಕಿಲೋಮೀಟರ್. ಬೆಂಗಳೂರಿನಿಂದಲ್ಲದೆ ನೀವು ಬೇರೆ ಊರುಗಳಿಂದ ಹೋಗುವುದಾದರೆ ಮೊದಲು ಕನಕಪುರ ತಲುಪಿಕೊಳ್ಳಿ. ಅಲ್ಲಿಂದ ಭೀಮೇಶ್ವರಿಗೆ 60 ಕಿ.ಮಿ. ಪ್ರವಾಸ ಏರ್ಪಾಟು, ಊಟ ತಿಂಡಿ, ವಸತಿ, ಟ್ರೆಕ್ಕಿಂಗ್ ಮುಂತಾದ ಇನ್ನಿತರ ಎಲ್ಲ ವ್ಯವಸ್ಥೆಗಳನ್ನು ನಿಮಗೋಸ್ಕರ ಕಲ್ಪಿಸಿಕೊಡುವ ಜವಾಬ್ದಾರಿಯನ್ನು ನೀವು ನಮಗೆ ಒಪ್ಪಿಸಬಹುದು. ಭೀಮೇಶ್ವರಿಯ ಚಿತ್ರಗಳು, ಪ್ರವಾಸಿ ತಂಗುದಾಣದ ಖರ್ಚುವೆಚ್ಚಗಳು ಹಾಗೂ ಬುಕಿಂಗ್ ಮಾಡುವುದಕ್ಕೆ ಈ ಕೊಂಡಿಯನ್ನು ಉಪಯೋಗಿಸಿ.












Click it and Unblock the Notifications