ನಿಜಾಮರ ನಗರಿಯಲ್ಲಿ ವ್ಯವಸ್ಥಿತ ಪ್ರವಾಸ ಕೈಗೊಳ್ಳಿ

ಬೆಂಗಳೂರು, ಏ. 3: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ವತಿಯಿಂದ ಪ್ರತಿ ಶುಕ್ರವಾರ ನಾಲ್ಕು ದಿನಗಳ ಹೈದರಾಬಾದ್ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಹೈದರಾಬಾದ್‌ನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳು ಹಾಗೂ ರಾಮೋಜಿ ಚಿತ್ರ ನಗರಿಗಳನ್ನೊಳಗೊಂಡ ಪ್ರವಾಸವನ್ನು ಏರ್ಪಡಿಸುತ್ತಿದೆ.

ಈ ಪ್ರವಾಸವು ಪ್ರತಿ ಶುಕ್ರವಾರ ಸಂಜೆ 7 ಗಂಟೆಗೆ ಹೊರಟು ಸೋಮವಾರ ಬೆಳಿಗ್ಗೆ 7.30 ಗಂಟೆಗೆ ಹಿಂದಿರುಗುವುದು. ವೋಲ್ವೋ ಹವಾನಿಯಂತ್ರಿತ ವಾಹನದಲ್ಲಿ ಒಂದು ಸೀಟಿನ ದರ ರೂ. 4,415 ಹಾಗೂ ಐಶಾರಾಮಿ ಹವಾನಿಯಂತ್ರಿತ ವಾಹನದಲ್ಲಿ ಒಂದು ಸೀಟಿನ ದರ 3,455 ಆಗಿರುತ್ತದೆ. ಈ ದರಗಳಲ್ಲಿ ಹವಾನಿಯಂತ್ರಿತ ವಸತಿ ಸೌಕರ್ಯ ಮತ್ತು ರಾಮೋಜಿ ಚಿತ್ರ ನಗರ ಪ್ರವೇಶ ಶುಲ್ಕವೂ ಸೇರಿದೆ.

ಹೆಚ್ಚಿನ ಮಾಹಿತಿಗಾಗಿ ಬಾದಾಮಿ ಹೌಸ್, (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎದುರು), ಎನ್.ಆರ್. ಚೌಕ, ಬೆಂಗಳೂರು -560 002
ದೂರವಾಣಿ ಸಂಖ್ಯೆ: (080)2221 2098, 22222400, 41329211ಮೂಲಕ ಸಂಪರ್ಕಿಸಬಹುದಾಗಿದೆ.

(ದಟ್ಸ್ ಕನ್ನಡಮಾಹಿತಿ ಕೇಂದ್ರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+