• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಲೇಖನಕ್ಕೆ ಬಂದ 10 ಅತ್ಯುತ್ತಮ ಅಭಿಪ್ರಾಯಗಳು

By Prasad
|

ನಮ್ಮ ಲೇಖನಗಳಿಗೆ ದಿನಂಪ್ರತಿ ಮೌಲ್ಯಯುತ ಅಭಿಪ್ರಾಯ ಮಂಡಿಸುತ್ತಿರುವ ಓದುಗರಿಗೆ ಅನಂತಾನಂತ ಧನ್ಯವಾದಗಳು. ಈ ಅಭಿಪ್ರಾಯಗಳು, ಕಾಮೆಂಟುಗಳು ಲೇಖನಗಳ ಸಾರವನ್ನು, ಸ್ವಾರಸ್ಯವನ್ನು, ಮೌಲ್ಯವನ್ನು ಹೆಚ್ಚಿಸಿವೆ ಎಂದು ಹೇಳಿದರೆ ತಪ್ಪಾಗಲಾರದು.

ಸಾಧ್ಯವಾದಷ್ಟು ಮಟ್ಟಿಗೆ ಕಾಮೆಂಟುಗಳನ್ನು ಕನ್ನಡದಲ್ಲಿಯೇ ಬರೆಯಿರಿ. ಇದಕ್ಕಾಗಿ ಹಲವಾರು ಟೂಲ್ಸುಗಳು ಇಂಟರ್ನೆಟ್ಟಿನಲ್ಲಿ ಲಭ್ಯವಿವೆ. ಕನ್ನಡದ ಬಳಕೆ ಅಂತರ್ಜಾಲದಲ್ಲಿ ಹೆಚ್ಚದ ಹೊರತು ಕನ್ನಡ ಭಾಷೆ ಕೂಡ ಅಂತರ್ಜಾಲದಲ್ಲಿ ಉದ್ಧಾರವಾಗುವುದಿಲ್ಲ ಎಂಬ ಸತ್ಯವನ್ನು ಇಲ್ಲಿ ಹೇಳಬಯಸುತ್ತೇವೆ.

ನಮ್ಮಲ್ಲಿ ಪ್ರಕಟವಾಗುವ ವೈವಿಧ್ಯಮಯ ಲೇಖನಗಳಿಗೆ ಬಂದ ಹಲವಾರು ಅನಿಸಿಕೆ, ಅಭಿಪ್ರಾಯಗಳ ನಡುವೆ ಉತ್ತಮವಾದ 10 ಅನಿಸಿಕೆಗಳನ್ನು ಆಯ್ಕೆ ಮಾಡಿ ಇಲ್ಲಿ ನೀಡಿದ್ದೇವೆ. ವಸ್ತುನಿಷ್ಠ ಅಭಿಪ್ರಾಯಗಳಿಗೆ, ತಿದ್ದುಪಡಿಗಳಿಗೆ, ಸತ್ವಯುತ ಮಾಹಿತಿಗಳಿಗೆ ಸದಾ ಸ್ವಾಗತ.

ಸೆನ್ಸ್ ಇರತ್ತೆ, ಕಾಮನ್ ಸೆನ್ಸ್ ಒಂದನ್ನು ಬಿಟ್ಟು!

ಸೆನ್ಸ್ ಇರತ್ತೆ, ಕಾಮನ್ ಸೆನ್ಸ್ ಒಂದನ್ನು ಬಿಟ್ಟು!

ಒಣಜಂಭ ಬರುವುದೇ ಅವಿವೇಕದಿಂದ, ಅತಾರ್ಕಿಕ ಚಿಂತನೆಯಿಂದ. ಅದನ್ನೇ ಇಂಗ್ಲೀಷಿನಲ್ಲಿ ಕಾಮನ್ ಸೆನ್ಸ್ ಅಂತಾರೆ. ನಮಗೆ ಎಲ್ಲದರಲ್ಲೂ ಸೆನ್ಸ್ ಇರತ್ತೆ, ಕಾಮನ್ ಸೆನ್ಸ್ ಒಂದನ್ನು ಬಿಟ್ಟು. We have to adapt common sense, logic, observation and understanding in our life to lead a sensible life.

ಶ್ರೇಯೋಭಿಲಾಶಿ

ಗೂಟದ ಕಾರ್ನಲ್ಲಿ ತಿರುಗೋ ನಿಮಗೇನು ಗೊತ್ತು ಜನರ ತೊಂದರೆ?

ಗೂಟದ ಕಾರ್ನಲ್ಲಿ ತಿರುಗೋ ನಿಮಗೇನು ಗೊತ್ತು ಜನರ ತೊಂದರೆ?

ಮಾನ್ಯ ಮಂತ್ರಿಗಳೇ.. ನಿಮಗೆ ಗೊತ್ತಿಲ್ಲದೇ ಈ ಶಾಲೆಗಳು ನಿಯಮ ಬಾಹಿರವಾಗಿ ನಡೆಯಲು ಸಾಧ್ಯವಿಲ್ಲ.. ಆರ್ಕಿಡ್ಸ್ ಒಂದು ಸಮೂಹ ಸಂಸ್ಥೆ. ಇಷ್ಟು ದಿನ ಸರ್ಕಾರ ಏನು ಮಾಡುತಿತ್ತು? ಬೆಂಗಳೂರಿನಲ್ಲಿ ಎಷ್ಟು ನಿಯಮ ಬಾಹಿರ ಶಾಲೆಗಳಿಲ್ಲ? ಇವೆಲ್ಲ ನಿಮಗೆ ಗೊತ್ತಿಲ್ಲ ಅಂತ ಇಲ್ಲ.. ಗೊತ್ತಿದೆ. ಈವಾಗ ಗಡ್ಡಕ್ಕೆ ಬೆಂಕಿ ಬಿದ್ದಿದೆ. ಜನರ ಆಕ್ರೋಶ ಹೆಚ್ಚಾಗಿದೆ ಅಂತ ಸಮಜಾಯಿಷಿ ನಿಡ್ತಾ ಇದ್ದೀರಾ? ಗೂಟದ ಕಾರ್ನಲ್ಲಿ ತಿರುಗೋ ನಿಮಗೇನು ಗೊತ್ತಾಗಬೇಕು ಸಾಮಾನ್ಯ ಜನರ ತೊಂದ್ರೆ .. ಥು..

ಜನದನಿ

ಸಿದ್ದರಾಮಯ್ಯನಿಗೆ ಸಾವಿರ ಕೋಟಿ ನಮಸ್ಕಾರ

ಸಿದ್ದರಾಮಯ್ಯನಿಗೆ ಸಾವಿರ ಕೋಟಿ ನಮಸ್ಕಾರ

ಜನ ಮೆಚ್ಚಿದ ನಾಯಕ. ಬಡವರ ಬಂಧು. ದೀನ ದಲಿತರ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಉದ್ದಾರಕ. ಅನ್ನಭಾಗ್ಯದ ಹರಿಕಾರಕ. ಅಭಿವೃದ್ಧಿ ಶಿಲ್ಪಿ. ಅದ್ವಿತೀಯ ಸಮಾಜ ಸೇವಕ. ಶಾದಿಭಾಗ್ಯದ ಶೃಷ್ಟಿಕರ್ತ. ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನಿಗೆ ಸಾವಿರ ಕೋಟಿ ನಮಸ್ಕಾರಗಳು. ಇಂತಿ ಶುಭ ಕೋರುವವರು ಐತ್ಲಾಂಡಿ ನನ್ ಮಕ್ಕಳು!

ಜೀವ

ಭಾರತೀಯರೆಲ್ಲರೂ ಮೂರ್ಖರು ಅಂದು ಕೊಂಡಿದ್ದಾರೆ

ಭಾರತೀಯರೆಲ್ಲರೂ ಮೂರ್ಖರು ಅಂದು ಕೊಂಡಿದ್ದಾರೆ

ಎಲ್ಲರೂ ಸೇರಿ ಚೆನ್ನಾಗಿ ನಾಟಕದ ಪಾತ್ರ ನಿರ್ವಹಣೆ ಮಾಡ್ತಾ ಇದ್ದಾರೆ. ಆದರೆ ಒಂದು ನೆನಪಿರಲಿ, ಗಾಂದೀಜಿ ಸಾರ್ವಜನಿಕ ಶೌಚಾಲಯಗಳನ್ನು ಶುಚಿ ಮಾಡಿ ಸ್ವಚ್ಛತಾ ಕಾರ್ಯಕ್ರಮ ಮಾಡುತ್ತಿದ್ದರು. ಈ ನಮ್ಮ ನಾಟಕದ ಪಾತ್ರದಾರಿಗಳು ಆ ರೀತಿ ಮಾಡದೆ, ಎಲ್ಲಿಂದಲೋ ಕಸ ತಂದು ಶುಚಿ ಇರುವಲ್ಲಿ ಹಾಕಿ ಪೊರಕೆ ಹಿಡಿದು ಸ್ವಚ್ಛ ಮಾಡುತ್ತಿದ್ದಾರೆ. ಪ್ರಧಾನಿಯವರು ಪೋಲಿಸ್ ಸ್ಟೇಶನ್ ಸ್ವಚ್ಛ ಮಾಡಿದರಂತೆ, ಸಲ್ಮಾನ್ ಖಾನ್ ಪೊರಕೆ ಹಿಡಿದನಂತೆ! ಇದೆಲ್ಲಾ ಈಗಿನ ಸ್ವಚ್ಛತಾ ಕಾರ್ಯಕ್ರಮವಂತೆ? ಇವರು ಭಾರತೀಯರೆಲ್ಲರೂ ಮೂರ್ಖರು ಅಂದು ಕೊಂಡಿದ್ದಾರೆ. ಥೂ ನಿಮ್ಮ ......!!!

ರಾಜು ಕುಮಾರ್

ಶೋಕಿಗೆ ಓದುವವರು ಚೇತನ್ ಭಗತ್ ಪುಸ್ತಕ ಓದಬಹುದು

ಶೋಕಿಗೆ ಓದುವವರು ಚೇತನ್ ಭಗತ್ ಪುಸ್ತಕ ಓದಬಹುದು

ಸರಿಯಾಗಿ ಬರೆದಿದ್ದೀರಿ ಗುರುರಾಜ್, ಈ ಪುಣ್ಯಾತ್ಮನ್ನಿಗೆ (ಚೇತನ್ ಭಗತ್) ಅದೇಕೋ ಓದುಗರ ಸ೦ಖ್ಯೆ ಜಾಸ್ತಿ, ಕನ್ನಡವನ್ನು ಓದದೇ ತಾವೂ ಸಹ ಇ೦ಗ್ಲಿಷ್ ಓದುತ್ತೇವೆ ಎನ್ನುವ ಶೋಕಿಗೆ ಓದುವವರು ಈತನ ಪುಸ್ತಕಗಳನ್ನು ಓದಬಹುದು. ನೀವು ಕತೆಯನ್ನು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಹೀಗೆ ಸಾರಾ೦ಶ ರೂಪದಲ್ಲಿ ಓದಬಹುದಾದ ಕತೆಯೇ ಇವನದ್ದು. ಈ ಪುಸ್ತಕ ಬಿಡುಗಡೆಯಾಗಿ ಸಾಕಷ್ಟು ದಿನಗಳು ಕಳೆದಿವೆ. ಈಗ ವಿಕಿಪಿಡಿಯಾದಲ್ಲೂ ಇದರ ಕತೆಯ ಸಾರಾ೦ಶ ಸಿಗುತ್ತದೆ. ನೀವು ಹೀಗೆ ಕನ್ನಡದಲ್ಲಿ ಬರೆದರೇ ಕನ್ನಡ ಮಾತ್ರ ಓದುವವರಿಗೆ ಸಹಾಯವಾಗುತ್ತದೆ ಬಿಡಿ.

ರಾಕೇಶ್ ಎಸ್

ನಿಮ್ಮ ಮಗುವನ್ನು ನೀವೇ ಕಾಪಾಡಿ. ಕಾನೂನು, ಕ್ಯಾಮೆರಾ ಮೇಲೆ ನಂಬಿಕೆ ಇಡಬೇಡಿ

ನಿಮ್ಮ ಮಗುವನ್ನು ನೀವೇ ಕಾಪಾಡಿ. ಕಾನೂನು, ಕ್ಯಾಮೆರಾ ಮೇಲೆ ನಂಬಿಕೆ ಇಡಬೇಡಿ

ದಯವಿಟ್ಟು ಶಿಕ್ಷಣದ ವ್ಯಾಪಾರವನ್ನ ನಿಲ್ಲಿಸಿ. ಸರ್ಕಾರ ಖಾಸಗಿ ಶಾಲೆಗಳನ್ನು ತಕ್ಷಣ ಮುಚ್ಚಲಿ. ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನು ಸರ್ಕಾರ ಎಲ್ಲ ಮಕ್ಕಳಿಗೂ ಕೊಡಲಿ. ಮನೆಯ ಹತ್ತಿರವೇ ಇರುವ ಶಾಲೆಗೆ ಮಗುವನ್ನು ಸೇರಿಸಿ ಮತ್ತು ಪೋಷಕರು ಮಕ್ಕಳ ಸರ್ವತೋಮುಖ ಬೆಳೆವಣಿಗೆಯ ಬಗ್ಗೆ ಗಮನ ಹರಿಸಿ. ಈ ಖಾಸಗಿ ಶಾಲೆಗಳು ಶಿಕ್ಷಣವನ್ನು ಮಾರಾಟ ಮಾಡುವ ಭರದಲ್ಲಿ ಮಕ್ಕಳ ರಕ್ಷಣೆಯನ್ನು 'ಸಿಸಿ' ಟಿವಿ ಕ್ಯಾಮೆರಾಗಳಿಗೆ ವಹಿಸಿ ತಾವು ಐಷಾರಮಿ ಜೀವನವನ್ನು ನಡೆಸುತ್ತಿದ್ದಾರೆ. ಕ್ಯಾಮೆರಾಗಳು ನಿಮ್ಮ ಮಕ್ಕಳನ್ನು ರಕ್ಷಿಸುವುದಿಲ್ಲ. ಆ ಮಗುವಿಗೆ ಆದ ನೋವನ್ನು ಅದರ ಮನಸ್ಥಿತಿಯನ್ನು ಊಹಿಸಿರಿ.

ಪೋಷಕರು ಮತ್ತು ಜವಾಬ್ದಾರಿಯುತ ಶಿಕ್ಷಕರು ಮಾತ್ರ ಮಕ್ಕಳನ್ನು ಇಂಥ ಹೀನ ಘಟನೆಗಳನ್ನು ನಡೆಯದಂತೆ ತಡೆಯಬಹುದು. ಈಗ ಆ ಪಾಪಿಯನ್ನು ಹಿಡಿದು ಶಿಕ್ಷೆ ಕೊಟ್ಟರೂ ಮಗುವಿಗೆ ಆದ ನೋವನ್ನು ಸರಿ ಪಡಿಸಲಾಗದು. ದಯವಿಟ್ಟು ನಿಮ್ಮ ಮಗುವನ್ನು ನೀವೇ ಕಾಪಾಡಿ. ಕಾನೂನು, ಕ್ಯಾಮೆರಾ ಮೇಲೆ ನಂಬಿಕೆ ಇಡಬೇಡಿ.

ರಾಘವೇಂದ್ರ

ಅತ್ಯಾಚಾರ, ಮತಾಂತರ, ದೇಶದ್ರೋಹಿತನ ಕುರಾನ್ ಹೇಳುತ್ತದಾ?

ಅತ್ಯಾಚಾರ, ಮತಾಂತರ, ದೇಶದ್ರೋಹಿತನ ಕುರಾನ್ ಹೇಳುತ್ತದಾ?

ಒಂದು ಬೆರಳನ್ನು ಬೇರೆಯವರ ಕಡೆ ತೋರಿಸುವಾಗ ಉಳಿದ ನಾಲ್ಕು ಬೆರಳುಗಳು ನಮ್ಮನ್ನೇ ತೋರಿಸುತ್ತದೆ. ಹಾಗೇನೇ ಮುಗ್ಧರನ್ನು ಕೊಲ್ಲಲು ಕಟುಕರಿಗೆ ಹೇಳಿದಾಗ (ನಾವೇ ಭಾರತೀಯರು ಕೊಂದು ಬಿಸಾಕುತ್ತೇವೆ), ನಂತರದ ಸರದಿ ಈ ಮನೆಹಾಳು ಪಾಕಿನದೇ ಆಗಿರುತ್ತದೆ. ಈ ವಿಷಯವನ್ನು ದುಷ್ಟ ಪಾಕಿ ಮರೆಯಬಾರದು. ನೀವು ಮಾಡಿದ ಪಾಪಕ್ಕೆ ನರಕವು ಕಾಯುತ್ತಾಯಿದೆ. ಪ್ರತಿದಿನ ಐದೈದು ಸಾರಿ ಪ್ರಾರ್ಥನೆಯನ್ನು ಮಾಡುತ್ತೀರಾ. ಇದಕ್ಕೇನಾ ದೇಶದ್ರೋಹಿತನ, ಅತ್ಯಾಚಾರ, ಮತಾಂತರ, ದೇಶವನ್ನು ಕೊಳ್ಳೆಹೊಡಿಯುವುದು? ಇದು ನಿಜವಾಗಿಯೂ ನಿಮ್ಮ ಕುರಾನ್ ಹೇಳುತ್ತದೆಂದಾದರೆ ಅದೆಂಥ ಧರ್ಮ ಗ್ರಂಥ? ರಾಕ್ಷಸರು ಮಾಡುವಂತಹ ಕೃತ್ಯಕ್ಕೆ ದೇವರ ಹೆಸರು, ನಿಮ್ಮ ಈ ಹಲ್ಕಾ ಕೆಲಸಕ್ಕೆ ನನ್ನದೊಂದು ಧಿಕ್ಕಾರ, ಜೈಹಿಂದ್.

ಶಿವಾನಿ

ಉಪಯೋಗಕ್ಕೆ ಬಾರದ ನಮ್ಮ ಮೆಟ್ರೋ!

ಉಪಯೋಗಕ್ಕೆ ಬಾರದ ನಮ್ಮ ಮೆಟ್ರೋ!

ಸಹಜ.. ಮೆಟ್ರೋ ಉಪಯೋಗಕ್ಕೆ ಇಲ್ಲ ಈಗ. ಜನ ಮೆಟ್ರೋದಲ್ಲಿ ಹೋಗುತ್ತಿದ್ದುದು ಅದು ಹೇಗಿದೆ ಅಂತ ನೋಡಲು. ಸರಿಯಾದ ಉಪಯೋಗಕ್ಕಲ್ಲ. ಮೆಟ್ರೋ ಇಳಿದು ಬಸ್ ಹಿಡಿಯಲು ತುಂಬಾ ದೂರ ನಡೆಯಬೇಕಾದ ಪರಿಸ್ಥಿತಿ.. ಸರಿಯಾದ ಪ್ಲಾನ್ ಮಾಡಿಲ್ಲ. ಬೇರೆ ದೇಶಗಳನ್ನ ನೋಡಿ ಒಮ್ಮೆ. ಬಸ್, ಮೆಟ್ರೋ, ದೂರ ಹೋಗುವ ರೈಲು ಎಲ್ಲ ಸ್ಟೇಷನ್ ಗಳೂ ಒಂದೇ ಕಡೆ... ಅಬ್ಬಬ್ಬ ಅಂದ್ರೆ 1 ಇಲ್ಲ 2 ನಿಮಿಷ ನದಿಗೆ ದೂರ. ಆದ್ರೆ ಇಲ್ಲಿ ಸ್ಟೋರಿನೇ ಬೇರೆ! ಇದು ನಮ್ಮ ಸ್ಟೈಲ್!

ಭಾರತೀಶ

ನಿಜ ಹೇಳೋರು ಸ್ವಲ್ಪ ಜನರಾದ್ರೂ ಇದ್ದಾರಲ್ಲ!

ನಿಜ ಹೇಳೋರು ಸ್ವಲ್ಪ ಜನರಾದ್ರೂ ಇದ್ದಾರಲ್ಲ!

ಜನರ ಮುಂದೆ ಸತ್ಯವನ್ನೇ ಹೇಳಿದ್ದಾರೆ ಅದಕ್ಕೆ ಯಾಕೆ ನಿರ್ಬಂಧ ಹಾಕ್ತಿರಾ? ರಾಹುಲ್ ಗಾಂಧಿ ಏನು ಬುದ್ದಿವಂತನೆ? ಪ್ರಪಂಚದ ಎಲ್ಲ ಜನರಿಗೂ ಗೊತ್ತಿರೋ ವಿಚಾರ. ನಿಮ್ಮಲ್ಲಿ ನಿಜ ಹೇಳೋರು ಸ್ವಲ್ಪ ಜನಗಳಾದ್ರು ಇದ್ದರಲ್ಲ! ಅದೇ ನಮ್ಮ ಪುಣ್ಯ.

ಲಿಂಗಣ್ಣ

ರಾಘವೇಶ್ವರಶ್ರೀ ಆಪಾದನೆಯಿಂದ ನುಣುಚಿಕೊಂಡಿಲ್ಲ

ರಾಘವೇಶ್ವರಶ್ರೀ ಆಪಾದನೆಯಿಂದ ನುಣುಚಿಕೊಂಡಿಲ್ಲ

ಮಠದ ಸಂಪ್ರದಾಯದ ಪ್ರಕಾರ ಗುರುಗಳು (ಸಾತ್ವಿಕರು) ಅಲೋಪಥಿಕ್ ವೈದ್ಯ ಪದ್ಧತಿಯನ್ನು ಬಳಸುವ ಹಾಗಿಲ್ಲ. ಇನ್ನು ಬಹಳ ಅನಿವಾರ್ಯ ಕಾರಣವಿದ್ದರೆ ಬಳಸಬಹುದು. ಈ ಪ್ರಕರಣದಲ್ಲಿ ಪೂರ್ತಿಯಾಗಿ ವಿಚಾರಣೆ ಆಗದ ಹೊರತು ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ. ಅಲ್ಲಿಯ ತನಕ ನಿಜವಾದ ಅನಿವಾರ್ಯತೆ ಇಲ್ಲ. ಮುಂದಿನ ದಿನಗಳಲ್ಲಿ ಅನಿವಾರ್ಯತೆ ಇದೆ ಎಂದು ಕೋರ್ಟ್ ಹೇಳಿದರೆ ಖಂಡಿತವಾಗಿಯೂ ಆ ಪರೀಕ್ಷೆ ಎದುರಿಸಲು ಅವರಿಗೆ ಯಾವ ಭಯವೂ ಇಲ್ಲ. ಹಾಗೆ ಅನಿವಾರ್ಯತೆ ಇಲ್ಲದ ಸಮಯದಲ್ಲಿ ಅವರು ಕಾನೂನಿನ ಮೊರೆ ಹೋದದ್ದು ಸರಿಯಾಗಿಯೇ ಇದೆ. ಇದು ಸಂಪ್ರದಾಯ ಭಂಗವಾಗದಿರಲು ತೆಗೆದುಕೊಂಡ ಕ್ರಮ. ಭಯದಿಂದ ಅಥವಾ ಆಪಾದನೆಯಿಂದ ನುಣುಚಿಕೊಳ್ಳಲು ತೆಗೆದುಕೊಂಡ ಕ್ರಮ ಅಲ್ಲ.

ಎಸ್ಎನ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Letters to the editor : We have selected 10 best comments posted by our readers to our articles on Oneindia Kannada. We request you to write your opinion in Kannada only to help Kannada on the internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more