T20 World Cup: ಎದುರಾಗಳಿಗಳಿ 'ಸೂರ್ಯಾಘಾತ' ಫಿಕ್ಸ್; ಮುಂಬೈನಿಂದಲೇ ದೊಡ್ಡ ಸಂದೇಶ ಕೊಟ್ಟ SKY

ಐಪಿಎಲ್‌ 2024 ಭಾರತದಲ್ಲಿ ನಡೆಯುತ್ತಿದೆ. ಇದಾದ ಕೆಲವೇ ದಿನಗಳಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಟಿ20 ವಿಶ್ವಕಪ್‌ಗೆ ಎಲ್ಲ ತಂಡಗಳು ತಯಾರಿ ನಡೆಸಿವೆ. ವಿಶ್ವದ ಸ್ಟಾರ್ ಆಟಗಾರರು ಐಪಿಎಲ್‌ನಲ್ಲಿ ಅಬ್ಬರಿಸುವ ಮೂಲಕ, ಎದುರಾಳಿ ತಂಡಗಳಿಗೆ ಸಂದೇಶವನ್ನು ಭಾರತದಿಂದಲೇ ರವಾನಿಸುತ್ತಿದ್ದಾರೆ. ಭಾರತದ ಒಬ್ಬ ಸ್ಟಾರ್‌ ಪ್ಲೇಯರ್‌ ಸಹ ಮುಂಬೈನ ಅರಬಿ ಸಮುದ್ರ ತಟದಲ್ಲಿ ಅಬ್ಬರಿಸಿದ್ರೆ, ಸಪ್ತ ಸಾಗರದಾಚೇಗೂ ಸೌಂಡ್ ಕೇಳ್ತಾ ಇತ್ತು. ಆತನೇ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಜೂನಿಯರ್‌ ಎಬಿಡಿ, ಸೂರ್ಯಕುಮಾರ್‌ ಯಾದವ್..

ಸೂರ್ಯಕುಮಾರ್‌ ಯಾದವ್ ಕಳೆದ ಎರಡು ಪಂದ್ಯಗಳಲ್ಲಿ ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಆದರೆ ಸನ್‌ರೈಸರ್ಸ್‌ ವಿರುದ್ಧ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ತಮ್ಮಲ್ಲಿನ ಬ್ಯಾಟಿಂಗ್ ಕ್ಷಮತೆಯನ್ನು ಸಾಬೀತು ಪಡಿಸಿದರು. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರೂ, ಧೃತಿ ಗೆಡದೆ ಬ್ಯಾಟ್‌ ಮಾಡಿದ ಸೂರ್ಯ, ತಮ್ಮ ನೈಜ ಆಟವನ್ನು ಪ್ರದರ್ಶಿಸಿದ್ದಾರೆ.

Suryakumar s Century Drives MI to Convincing Seven-Wicket Win Over Sunrisers in IPL 2024

ಒತ್ತಡ ಮೆಟ್ಟಿನಿಂತ ಸ್ಕೈ

ಬ್ಯಾಟಿಂಗ್‌ಗೆ ಸೂರ್ಯ ಬಂದಾಗ ಇವರ ಮೇಲೆ ಹಲವು ಪ್ರಶ್ನೆಗಳು ಇದ್ದವು. ಅಂದರೆ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದ ಬಳಿಕ ಸೂರ್ಯಕುಮಾರ್ ಯಾದವ್ ಮಂಕಾಗುತ್ತಿದ್ದಾರೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಅವರ ಮೇಲಿನ ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿರುವ ಸೂರ್ಯ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 4.1 ಓವರ್‌ಗಳಲ್ಲಿ 31 ರನ್‌ ಬಾರಿಸಿ ಮೂರು ವಿಕೆಟ್‌ ಕಳೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯ ಆಧಾರವಾದರು.

ನೈಜ ಆಟವಾಡಿದ ಸೂರ್ಯ

ಸೂರ್ಯಕುಮಾರ್ ಯಾದವ್ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಯಾವೊಬ್ಬ ಬೌಲರ್‌ನ್ನು ಸಹ ಸಡಿಲವಾಗಿ ಬಿಡಲೇ ಇಲ್ಲ. ಜಸ್ಟ್‌ 51 ಎಸೆತಗಳಲ್ಲಿ 200ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿದ ಸೂರ್ಯಕುಮಾರ್‌ 102 ರನ್‌ ಸಿಡಿದರು. ಇವರ ಕ್ಲಾಸಿಕ್ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, ಆರು ಸಿಕ್ಸರ್‌ಗಳು ಸೇರಿವೆ.ಐಪಿಎಲ್‌ನಲ್ಲಿ ಸೂರ್ಯ ಬಾರಿಸಿದ ಎರಡನೇ ಶತಕ ಇದಾಗಿದೆ.

ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಆಟದ ಬಲದಿಂದ ಎಸ್‌ಆರ್‌ಎಚ್‌ ಗೆಲುವಿನ ಆಸೆ ಕಮರಿದೆ. ಒಂದು ಹಂತದಲ್ಲಿ ಸನ್‌ ತಂಡದ ಪರ ವಾಲಿದಂತೆ ಕಂಡು ಬಂದ ಪಂದ್ಯದಲ್ಲಿ ಸೂರ್ಯ ಒನ್‌ ಮ್ಯಾನ್‌ ಶೋ ಎದುರಾಳಿಗಳ ನಿದ್ದೆ ಗೆಡಿಸಿದೆ. ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದರೆ ಬೇರೆ ದೇಶದ ತಂಡಗಳಿಗೆ ನಡುಕ ಶುರುವಾಗಿದೆ.

Suryakumar s Century Drives MI to Convincing Seven-Wicket Win Over Sunrisers in IPL 2024

ಸೂರ್ಯಕುಮಾರ್ ಯಾದವ್ ಎಂತಹ ಬ್ಯಾಟರ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಒಬ್ಬ ಪ್ಲೆಯರ್‌ ಗಾಯದ ಬಳಿಕ, ತಿಂಗಳು ಗಟ್ಟಲೇ ಮೈದಾನದಿಂದ ಹೊರಗೆ ಇದ್ದು, ಮತ್ತೆ ಭರ್ಜರಿ ಕಮ್‌ ಬ್ಯಾಕ್‌ ಮಾಡುವುದು ಸುಲಭದ ಮಾತಲ್ಲ. ಇವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿ, ಐಪಿಎಲ್‌ನ ಆರಂಭಿಕ ಪಂದ್ಯಗಳನ್ನು ಮಿಸ್‌ ಮಾಡಿಕೊಂಡು, ಬಳಿಕ ಎನ್‌ಸಿಎನಿಂದ ಫಿಟ್ನೆಸ್‌ ಸರ್ಟಿಫಿಕೆಟ್‌ ಪಡೆದು, ಮುಂಬೈ ತಂಡವನ್ನು ಸೇರಿದ ಮೇಲಂತು, ಸೂರ್ಯ ಡಿಫ್ರೆಂಟ್‌ ಆಗಿ ಬ್ಯಾಟ್ ಮಾಡುತ್ತಿದ್ದಾರೆ.

ಮಿಸ್ಟರ್‌ 360 ಡಿಗ್ರಿ ಖ್ಯಾತಿಯ ಸೂರ್ಯ ಫಾರ್ಮ್‌ನಲ್ಲಿದ್ದರೆ ಅವರು ಯಾವ ಪಿಚ್‌ನಲ್ಲಿ ಆಡುತ್ತಿದ್ದಾರೆ, ಎದುರಾಳಿ ಯಾರು, ಎಂಬುದೆಲ್ಲಾ ಲೆಕ್ಕಕ್ಕೆ ಇಲ್ಲ. ಸುಮ್ಮನೆ ಚೆಂಡನ್ನು ಬೌಂಡರಿ ಗೆರೆಯ ಆಚೆಗೆ ಕಳಿಸುತ್ತಾ ಇರೋದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+