ಗೌಹರ್ ಖಾನ್ ಕಪಾಳ ಮೋಕ್ಷಕ್ಕೆ ತೀವ್ರ ಖಂಡನೆ

INDIA'S RAW STAR ಎಂಬ ಹಾಡುಗಳ ರಿಯಾಲಿಟಿ ಶೋ ನಡೆಸಿಕೊಡುವ ನಟಿ-ರೂಪದರ್ಶಿ ಗೌಹರ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ವೇದಿಕೆಯ ಮೇಲೆ ಪ್ರೇಕ್ಷಕರ ಸಮಕ್ಷಮದಲ್ಲಿ ಹಲ್ಲೆಗೊಳಗಾಗಿದ್ದಾರೆ.

ಅವರ ಕಪಾಳಕ್ಕೆ ಹೊಡೆದಾತ ಮಲ್ಲಿಕ್ ಎಂಬ 24 ವರ್ಷದ ಯುವಕ. ಹೊಡೆದಿದ್ದಕ್ಕೆ ಆತ ನೀಡಿದ ಸಮರ್ಥನೆ -ಮುಸ್ಲಿಂ ಆಗಿದ್ದುಕೊಂಡು ಆಕೆ ತುಂಡು ಬಟ್ಟೆ ಧರಿಸಬಾರದಿತ್ತು.[ನಟಿ ತುಂಡು ಬಟ್ಟೆ ತೊಟ್ಟರೆ ಕಪಾಳಮೋಕ್ಷ!]

ಹಿಂದಿನ ಸೆಕ್ಯುಲರ್ ಸರ್ಕಾರವಾಗಿದ್ದರೆ ಆತ ಬಚಾವಾಗಿಬಿಡುತ್ತಿದ್ದ. ಆದರೆ ಈಗ ಆತ ಒಟ್ಟೊಟ್ಟಿಗೆ ಮೂರು ಸೆಕ್ಷನುಗಳನ್ನು ಜಡಿಸಿಕೊಂಡು ಜೈಲು ಪಾಲಾಗಿದ್ದಾನೆ. ವಿಷಯ ಅದಲ್ಲ. ಒಂದು ವೇಳೆ ಗೌಹರ್ ಖಾನ್ ಜಾಗದಲ್ಲಿ ಮಲ್ಲಿಕಾ ಶೆರಾವತ್ ಇದ್ದು, ಮಲ್ಲಿಕ್ ನ ಜಾಗದಲ್ಲಿ ಮಲ್ಲಣ್ಣನಿದ್ದಿದ್ದರೆ, ಆತ ಹಿಂದೂ ಸಂಘಟನೆಯವನಾಗಿದ್ದರೆ ಪರಿಸ್ಥಿತಿ ಏನಾಗಿರಬಹುದು?!

Public Shocked Gauhar Khan Being Slapped For Choice Of Clothes!

ನಮ್ಮ ಬುಜಿಗಳು ಇದನ್ನು ನೈತಿಕ ಪೋಲಿಸಗಿರಿ ಅಮಾನವೀಯ ಕೃತ್ಯ ಎಂದೆಲ್ಲಾ ಕರೆದು ಬೊಬ್ಬೆ ಹಾಕಲು ಶುರುಮಾಡಿರುತ್ತಿದ್ದರು. ಮಹಿಳಾ ಸಂಘಟನೆಗಳ ಅಗಲ ಕುಂಕುಮದ ಅಮ್ಮಣ್ಣಿಯರು, ಮೇಣದ ಬತ್ತಿ ಮಾನಿನಿಯರಂತೂ ಬಳೆ ಹೊಡೆದುಕೊಂಡು ಕಿರುಚುತ್ತಾ ಆಕಾಶ ಭೂಮಿ ಒಂದು ಮಾಡಿರುತ್ತಿದ್ದರು.
ಯಾಕೆ ಇವರ್ಯಾರೂ ಕೂಡಾ ಈ ಘಟನೆಯ ವಿರುದ್ಧ ದನಿ ಎತ್ತುತ್ತಿಲ್ಲ?

ಹೊಡೆಸಿಕೊಂಡವರ ಧರ್ಮ, ಲಿಂಗ ಯಾವುದೇ ಇರಲಿ ; ಹೊಡೆದವ ಹಿಂದೂ ಆಗಿದ್ದರೆ ಮಾತ್ರ ನೀವು ಪ್ರಟಿಭಟಿಸುವುದಾ?

ಗೌಹರ್ ಖಾನ್ ದೌರ್ಜನ್ಯಕ್ಕೊಳಗಾದ ಸಾಮಾನ್ಯ ಹೆಣ್ಣಿನಂತೆ ಕಾಣಿಸುತ್ತಿಲ್ಲವಾ?

ಮಂಗಳೂರು ಪಬ್ ದಾಳಿಗೆ ನೈತಿಕ ಪೋಲಿಸ್ ಗಿರಿ ಎಂದು ಹೆಸರಿಟ್ಟವರೇ, ಹೇಳಿ ಇದಕ್ಕೆ ಯಾವ ನಾಮಕರಣ ಮಾಡುತ್ತೀರಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+