ಕನ್ನಡ ಬಾವುಟದಲ್ಲಿ ಸತ್ಯ ಮೇವ ಜಯತೇ..ಮರೆತಿರಾ?

Posted By: ಸಿ.ಟಿ ಮಂಜುನಾಥ್, ಮಂಡ್ಯ
Subscribe to Oneindia Kannada

"ಸತ್ಯಮೇವ ಜಯತೇ" ( सत्यमेव जयते; ಅಂದರೆ ಸತ್ಯವೊಂದೇ ಸದಾ ಗೆಲ್ಲುತ್ತದೆ ) ಇದು ಪ್ರಾಚೀನ ಭಾರತೀಯ ಗ್ರಂಥ ಮುಂಡಕ ಉಪನಿಷತ್ತಿನಲ್ಲಿನ ಒಂದು ಮಂತ್ರ. ಭಾರತ ದೇಶವು ಸ್ವಾತಂತ್ರ್ಯ ಪಡೆದಾಗ, ಇದನ್ನು ಭಾರತದ ರಾಷ್ಟ್ರೀಯ ಧ್ಯೇಯ ವಾಕ್ಯವನ್ನಾಗಿ ಅಳವಡಿಸಿಕೊಂಡಿತು.

ರಾಷ್ಟ್ರೀಯ ಲಾಂಛನದ ತಳಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಇದನ್ನು ಕೆತ್ತಲಾಗಿದೆ. ಲಾಂಛನ ಮತ್ತು "ಸತ್ಯಮೇವ ಜಯತೇ" ಪದಗಳನ್ನು ಎಲ್ಲಾ ಭಾರತೀಯ ನಾಣ್ಯ ಮತ್ತು ನಗದು ನೋಟುಗಳಲ್ಲಿ ಅಚ್ಚು ಮಾಡಲಾಗುತ್ತದೆ.

ನೂತನ ನಾಡಧ್ವಜಕ್ಕೆ ವಾಟಾಳ್ ನಾಗರಾಜ್ ವಿರೋಧ

ಭಾರತದ ಉತ್ತರ ಪ್ರದೇಶ ರಾಜ್ಯದ ವಾರಣಾಸಿ ಸಮೀಪದ ಸಾರಾನಾಥದಲ್ಲಿ ಕ್ರಿ.ಪೂ. 250 ರ ಸುಮಾರಿನಲ್ಲಿ ನಿಲ್ಲಿಸಲಾದ ಅಶೋಕ ಸ್ತಂಭದಲ್ಲಿರುವ ಸಿಂಹಲಾಂಛನದ ರೂಪಾಂತರ ಈ ವಾಕ್ಯವಾಗಿದೆ.

Opinion : How Can CM of Karnataka miss Sathya Meva Jayante from Official Kannada Flag

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ದೇವನಾಗರಿ ಲಿಪಿಯಲ್ಲಿ
सत्यमेव जयते नानृतं
सत्येन पन्था विततो देवयानः ।
येनाक्रमन्त्यृषयो ह्याप्तकामा
यत्र तत् सत्यस्य परमं निधानम् ॥६॥

ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ

ಕನ್ನಡದಲ್ಲಿ ಅರ್ಥ
ಸತ್ಯ ಮಾತ್ರ ಗೆಲ್ಲುವುದು ಸುಳ್ಳುತನ ಅಲ್ಲ
ಯಾವುದರ ಮೂಲಕ ಆಸೆಗಳನ್ನು ಸಂಪೂರ್ಣವಾಗಿ ಗೆದ್ದ ಋಷಿಗಳು ನಡೆದು
ಸತ್ಯದ ಪರಮ ನಿಧಿಯನ್ನು ಹೊಂದುವರೋ
ಆ ದೈವಿಕ ಪಥವು ಸತ್ಯದ ಮೂಲಕವೇ ಸಾಗುವುದು
ಸತ್ಯದಲ್ಲಿ ಪರಮಾತ್ಮನ ನಿಧಿ ವಾಸಿಸುತ್ತದೆ.

ಮೈಸೂರು ರಾಜ್ಯದ ಕೊಡುಗೆಯಾದ ರಾಜ್ಯ ಲಾಂಛನದಲ್ಲಿ ಇರುವ ಶರಭ (ಗಜಕೇಸರಿ) ಅರಿಶಿನ ಬಣ್ಣದಲ್ಲಿ ಇರಬೇಕು, ಗಂಡಭೇರುಂಡ ಬಿಳಿ ಬಣ್ಣದಲ್ಲಿದ್ದು ಗೆರೆಗಳು ನೀಲಿ ಬಣ್ಣದಲ್ಲಿ ಇರಬೇಕು, ಶರಭದ ಕೇಶ ಕೆಂಪುಬಣ್ಣದಲ್ಲಿರಬೇಕು, ಹೀಗೆ ಪ್ರತಿಯೊಂದು ಬಣ್ಣಕ್ಕೂ ತನ್ನದ ಆದ ಇತಿಹಾಸ ಹಾಗು ಪಾವಿತ್ರ್ಯತೆ ಇದೆ.

ಆದರೆ, ಸಿದ್ದರಾಮಯ್ಯರವರು ಹೊಸ ಧ್ವಜ ನೀಡುವ ಭರಾಟೆಯಲ್ಲಿ ಕನ್ನಡ ಧ್ವಜದ ಇತಿಹಾಸ ಮರೆತರಾ ? ಇಲ್ಲಾ ಸತ್ಯ ಮೇವ ಜಯತೆ ಅನ್ನೋದು, ಹಿಂದೂಗಳ ಮಂತ್ರ, ಅಲ್ಪಸಂಖ್ಯಾತರ ಮನಸ್ಸಿಗೆ ಎಲ್ಲಿ ನೋವಾಗುತ್ತೋ ಎಂದು ಗೊತ್ತಿದ್ದೂ, ಬೇಕೆಂತಲೇ ಈ ರೀತಿ ಮಾಡಿದ್ದಾರಾ ? ಅನ್ನೋ ಅನುಮಾನ ಕನ್ನಡಿಗರನ್ನು ಕಾಡುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opinion : How Can CM of Karnataka miss Sathya Meva Jayate from Official Kannada Flag. The emblem and word 'Sathya Meva Jayate' is an adaptation of the Lion Capital of Ashoka which was erected around 250 BCE at Sarnath, near Varanasi in the north Indian state of Uttar Pradesh

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ