ಸಿದ್ದು ವೀಕೆಂಡ್ ಟೆಂಟ್ ಸಿನಿಮಾ ಗಂಭೀರವಾಗಿ ತಗೊಂಡಿಲ್ಲ
ಬೆಂಗಳೂರು, ಜೂನ್ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಸೀಟಿನಲ್ಲಿ ಕಾಣಿಸಿಕೊಂಡು, ಮಿಂಚಿ, ಅದರ ಬಗ್ಗೆ ಮಾತನಾಡಿಕೊಂಡಿದ್ದರ ಬಗ್ಗೆ ನಿಮ್ಮ ಗಮನಕ್ಕೆ ಬಂದಿರುತ್ತದೆ ಆ ಇಡೀ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಹೇಳಿಕೊಂಡ ಕೆಲವು ಮುಖ್ಯ ವಿಚಾರಗಳ ಬಗ್ಗೆ ಒನ್ ಇಂಡಿಯಾ ಕನ್ನಡದಲ್ಲಿ ವರದಿ ಆಗಿತ್ತು.
ಇನ್ನು ಆ ವರದಿಯನ್ನು ಆಧರಿಸಿ ಹಾಗೂ ಕಾರ್ಯಕ್ರಮದ ಬಗ್ಗೆ ಒನ್ ಇಂಡಿಯಾ ಓದುಗರಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ವೀಕೆಂಡ್ ವಿತ್ ರಮೇಶ್ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಕೇಳಲಾಗಿತ್ತು. ಅದರ ಫಲಿತಾಂಶವನ್ನು ನಿಮ್ಮೆದುರು ಇಡುತ್ತಿದ್ದೇವೆ.

ಜೂನ್ ಇಪ್ಪತ್ತೇಳರ ಸಂಜೆ ವೇಳೆ ಮೂರು ಸಾವಿರದ ಐವತ್ತೆಂಟು ಓದುಗರು ಮತ ಚಲಾವಣೆ ಆಗಿದೆ. ಆ ಪೈಕಿ ಸಾವಿರದ ಇಪ್ಪತ್ಮೂರು ಮತಗಳು ಬಿದ್ದಿರುವುದು ನಾವಿದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಆಯ್ಕೆಗೆ. ಇನ್ನು ಈ ಕಾರ್ಯಕ್ರಮವೇ ಮೊದಲು ಸಿದ್ಧ ಮಾಡಿಟ್ಟುಕೊಂಡ ಪ್ರಶ್ನೋತ್ತರ ಎಂದು ಎಂಟು ನೂರಾ ತೊಂಬತ್ಮೂರು ಮತ ಬಂದಿವೆ.
ವರ್ಚಸ್ಸು ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಅವರಿಗೆ ಒಂದೊಳ್ಳೆ ವೇದಿಕೆ ಆಯಿತು ಎಂದು ಆರುನೂರಾ ಮೂವತ್ತೆರಡು ಮತ ಬಿದ್ದಿವೆ. ಜನರನ್ನು ತಲುಪೋದಿಕ್ಕೆ ಹೀಗೊಂದು ಅವಕಾಶ ಎಂಬ ಆಯ್ಕೆಗೆ ಐನೂರಾ ಹತ್ತು ಮತ ಬಿದ್ದಿವೆ. ಈ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬುದಕ್ಕೆ ಹೆಚ್ಚು ಮತ ಬಿದ್ದಿವೆ.











Click it and Unblock the Notifications