ಪ್ರತಿಕ್ರಿಯೆ: ಇನ್ಫೋಸಿಸ್ ತಗಾದೆ, ಸರ್ಕಾರ ಏನ್ಮಾಡ್ಬೇಕು?

ಹೋಂಡಾ ಧಾರವಾಡದಿಂದ ಹೋಗುವಾಗ ನಿದ್ದೆಯಲ್ಲಿ ಇದ್ದ.!
ಇನ್ಫೋಸಿಸ್ ಹೋರಡತಿನಿ ಅಂದ ತಕ್ಷಣ ಒಲೈಕೆಗೆ ಸಿದ್ದ.!
ಹೀಗೆ ಉತ್ತರ ಮತ್ತು ದಕ್ಷಿಣಗಳ ನಡುವಿನ ಅಂತರ ನಿರಂತರ.!

ಹೋಗುವವರು ಹೋಗಲಿ ಬಿಡಿ ತಡೆಯಬೇಡಿ ಇದೊಂದೇ ಯೋಜನೆ ಹೊರ ಹೋಗುವುದೇಕೆ? ಅವರಿಗೆ ಇದುವರೆಗೂ ನೀಡಿರುವ ಭೂಮಿಯನ್ನು ಅದರಲ್ಲಿ ನಿರ್ಮಿಸಿರುವ ಎಲ್ಲ ಕಟ್ಟಡ ಹಾಗೂ ನಿರ್ಮಾಣಗಳೊಂದಿಗೆ ಹಿಂಪಡೆದು ಅದನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಗೆ ನೀಡಿ ಅಲ್ಲಿ IIT ಆರಂಭವಾಗಲಿ.

First Honda Now Infosys How Karnataka Government Should Act

ಏಕೆ ಇವರಿಗೆ ಕೈಗಾರಿಕೆ ಸ್ಥಾಪಿಸಲು ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಮಾತ್ರ ಬೇಕೆ? ಸರಕಾರ ಕೂಡ ಹೋಂಡಾ ಹೋಗುವುದನ್ನು ತಡೆಯಲು ತೋರದ ಉತ್ಸಾಹವನ್ನು ಈಗೇಕೆ ತೋರುತ್ತಿದೆ? ಇವರಿಗೆ ತೆರಿಗೆ ವಿನಾಯಿತಿ? ಉಚಿತ ಮೂಲಸೌಕರ್ಯ? ಯಾಕೆ ಹುಬ್ಬಳ್ಳಿ ಧಾರವಾಡ ಬೆಳಗಾವಿ ವಿಜಯಪುರ ಕಲಬುರ್ಗಿ ಬಾಗಲಕೋಟೆ ಇಲ್ಲಿ ಸ್ಥಾಪಿಸಲು ಸಾಧ್ಯವಿಲ್ಲವೆ?[ದೇವನಹಳ್ಳಿಯಿಂದ ಇನ್ಫೋಸಿಸ್ ಕಾಲುತೆಗೆದಿದ್ದೇಕೆ?]

ಬನ್ನಿ ಇಲ್ಲಿಯೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಿವೆ. ವಿಮಾನ ನಿಲ್ದಾಣಗಳಿವೆ. ಸಾಕಷ್ಟು ತಾಂತ್ರಿಕ ಮಹಾವಿದ್ಯಾಲಯಗಳಿವೆ. ಮಾನವ ಸಂಪನ್ಮೂಲ ಇದೆ. ಜಲ ಸಂಪನ್ಮೂಲವಿದೆ. ರಾಜ್ಯದ ಹೆಚ್ಚಿನ ವಿದ್ಯುತ್ ತಯಾರಾಗುವುದು ಇಲ್ಲೆ ಹೀಗಾಗಿ ವಿದ್ಯುತ್ ಸಮಸ್ಯೆ ಇರುವುದಿಲ್ಲ. ಬೆಂಗಳೂರಿನ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಹೆಚ್ಚಿನನವರು ಉತ್ತರ ಕರ್ನಾಟಕ ಭಾಗದವರೆ ಅವರು ಇಲ್ಲಿಗೆ ವಾಪಸಾಗಿ ಇಲ್ಲಿನ ಕೈಗಾರಿಕೆಗಳಲ್ಲಿ ಸೇವೆ ಸಲ್ಲಿಸಿಲು ಸಿದ್ದರಿದ್ದಾರೆ.

ಹೀಗಾಗಿ ಸರಕಾರ ಈಗಲಾದರೂ ಹೆಚ್ಚಿನ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕದ ಭಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಲಿ. ಇನ್ನೂ ಸಿದ್ದರಾಮಯ್ಯ ತಮ್ಮ ಬಳಿಯೇ ಇಟ್ಟು ಕೊಂಡಿರುವ ಕೈಗಾರಿಕಾ ಖಾತೆಯನ್ನು ಉತ್ತರ ಕರ್ನಾಟಕದ ದಕ್ಷ ಯುವ ಶಾಸಕರೊಬ್ಬರಿಗೆ ನೀಡಿ ಅವರ ಖಾತೆಯಲ್ಲಿ ಹಸ್ತಕ್ಷೇಪ ಮಾಡದೆ ಸಹಕಾರ ನೀಡಲಿ. ಅಂದಾಗ ಮಾತ್ರ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+