ನೆಟ್ಟಿಗರು ಬರೆದಿರುವ ಐದು ಅತ್ಯುತ್ತಮ ಪತ್ರಗಳು

- ವಿನಾಯಕ ಸೇನ್
***
ನನ್ನ ಮನ ಕಲಕಿದ ಕವನವಿದು. ನನ್ನೆರಡು ಕಂಬನಿ ಬಿಂದುಗಳು ಆ ಮಗುವಿಗಿರಲಿ. ಮತ್ತೆ ಹುಟ್ಟಿ ಬಾ ಆಫ್ರಿನ್. ನಿನ್ನ ಅತ್ಮಕ್ಕೆ ಶಾಂತಿ ಸಿಗಲಿ. [ಮತ್ತೆ ಹೆಣ್ಣಾಗಿ ಹುಟ್ಟುತ್ತೇನೆ]
- ತಿಮ್ಮಯ್ಯ ಮಡಿಕೇರಿ
***
ಕನ್ನಡ ಚಿತ್ರದಲ್ಲಿ ಬರಿ ಸ್ಲಂ, ಸ್ಮಶಾನ, ಮಚ್ಚು, ಲಾಂಗು ಬಿಟ್ಟರೆ ಬೇರೆ ಏನು ಇರೋದಿಲ್ಲ. ಅದರಲ್ಲೂ ಈ ಸ್ಮಶಾನ ಸೂರಿ, ಸ್ಲಂ ಪ್ರೇಮ್ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಾರಕ. ಇವರನ್ನ ಬ್ಯಾನ್ ಮಾಡಬೇಕು. ಅಣ್ಣ ಬಾಂಡ್ ಚಿತ್ರ ಗ್ಯಾರಂಟಿ ಬ್ಲಡ್ ಡೈಮಂಡ್ ಚಿತ್ರದ ಕನ್ನಡ ಅವತರಣಿಕೆ ಅನ್ಸುತ್ತೆ. ಸ್ಮಶಾನ ಸೂರಿ ಬರಿ ಫಾರೆನ್ ಫಿಲಂ ಕಾಪಿ ಹೊಡಿತಾನೆ. [ಇದೆಲ್ಲ ಬೇಕಿತ್ತಾ ಅಣ್ಣಾಬಾಂಡ್?]
- ಪ್ರದೀಪ್
***
ದಿನೇಶ್ ಅವರೆ Hats off.. ಮೆದುಳಿಗೆ ತಿಳಿಸದೇ ತನ್ನಿಂದ ತಾನೇ ಕಣ್ಣು ನೀರು ಸುರಿಸಲು ಮನಕೆ ಹೇಗೆ ಏನು ಮಾಡಬೇಕು ಎಂದು ತೋಚಲಿಲ್ಲ ಅಳುವುದನ್ನು ಒಂದು ಬಿಟ್ಟು! ಚಿರನಿದ್ರೆಗೆ ಜಾರಿರುವ ಆಫ್ರೀನ್ ನಿನಗೆ ನಾ ಏನೆಂದು ಹೇಳಲಿ ಬರೆಯಲಿ, ತಿಳಿಸಲಿ. ಹೋಗಿ ಬಾರಮ್ಮ ಎನ್ನಲೇ ಮತ್ತೆ ಈ ಕೆಟ್ಟ ಪ್ರಪಂಚಕ್ಕೆ! ಹೋಗಮ್ಮ ಈ ಕೆಟ್ಟ ಪುರುಷ ಸಮಾಜದಿಂದ ಎನ್ನಲೇ? ಒಂದೂ ತಿಳಿಯದಾಗಿದೆ. ನಾನು ಒಬ್ಬ ಅಪ್ಪನಾಗಿ ಹೆಣ್ಣುಮಗುವಿನ ತಂದೆಯಾಗಿ ಕ್ಷಮೆ ಕೇಳಲು ನಾಚಿಗೆಯಾಗಿದೆ. ಫಾರೂಕ್ ನಿನಗೆ ಹೇಗೋ ಮನಸ್ಸು ಬಂತು ಶೈತಾನ್?! ಸರಕಾರಕ್ಕೆ ನ್ಯಾಯಾಂಗಕ್ಕೆ ವಿನಂತಿ ಇಷ್ಟೇ ದಯವಿಟ್ಟು ಮಾಡಬೇಡಿ ಇವನನ್ನು ಇನ್ನೊಬ್ಬ ಕಸಬ್! [ಅಪ್ಪಾ ಎಂದು ಚೀರಲೂ ಆಗಲಿಲ್ಲ]
- ಪ್ರಶಾಂತ್ ಮಾನ್ವಿ
***
ನಮಸ್ಕಾರ. ಯಾರು ಯಾರ್ ಫ್ಯಾನೂ.. ಅವರ ಕಡೆ ಗಾಳಿ ಬಿಸುತಿದ್ದೀರ. ಎಲ್ಲರು ಅವಿವೆಕಿಗಳೇ. ಎಲ್ಲ ಸೇರಿ ಯಾರದೋ ಗೋರಿ ಮೇಲೆ ನಿಮ್ನಿಮ್ಮ ಜಾತ್ರೆ ಮಾಡ್ತಿದ್ದೀರಾ. ನಾನು ಸಿನಿಮಾ (ಭೀಮಾ ತೀರದಲ್ಲಿ) ಫಸ್ಟ್ ಶೋ ನೋಡಿದೀನಿ. ಅದ್ರಲ್ಲಿ ಚಂದಪ್ಪನ್ನ ಭಗತ್ ಸಿಂಗ್ ಥರ ತೋರ್ಸಿದ್ದಾರೆ. ಅಂದ್ರೆ ಹೀರೋ ಥರ. ಅದರ ಬಗ್ಗೆ ಮಾತಾಡಿ. ಅದನ್ನು ಬಿಟ್ಟು... ಪ್ರತಾಪ್ ವಿಚಾರದಿಂದ ಹೊರಗೆ ಮಾತಾಡ್ತಾರೆ... ನಾನ್ ಯಾವಾಗ್ ಅವ್ರನ್ ನೋಡಿದರೂ ಅವರ ಜೊತೆ ವಾದ ಮಾಡಬೇಕು ಅನ್ಸುತ್ತೆ, ಫಸ್ಟ್ ಟೈಮ್ ನೋದ್ದಾಗ್ನಿಂದಾ... ಎಲ್ಲ ನಿಮ್ ನಿಮ್ ಕೆಲ್ಸಾ ನೋಡ್ಕೊಳ್ಳಿ. ಕೋಳಿ ಜಗಳಕ್ಕೆ ಖಾರಾ ಹಾಕ್ ಬೇಡಿ. [ಭೀಮಾ ತೀರದಲ್ಲಿ ಚರ್ಚೆ]
- ಮನೋಜ್











Click it and Unblock the Notifications