ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ

You may write me down, but like dust I'll rise
ಆಫ್ರೀನ್ ಸತ್ತಿಲ್ಲ. ಸಮಾಜ ನೀಡಿದ ದೌರ್ಜನ್ಯ, ನೋವು, ಕುಹಕ, ಅವಮಾನ, ಅತ್ಯಾಚಾರಗಳನ್ನು ಸಮರ್ಥವಾಗಿ ಎದುರಿಸುವ ಸಂಕಲ್ಪದೊಂದಿಗೆ ಬೀಜದ ರೂಪದಲ್ಲಿ ಭೂತಾಯಿಯ ಗರ್ಭ ಸೇರಿದ್ದಾಳೆ. ಮತ್ತೆ ಮಳೆ ಹುಯ್ದು, ಮೊಳಕೆಯೊಡೆದು ಹೆಣ್ಣಾಗಿಯೇ ಈ ಜಗಕ್ಕೆ ಮತ್ತೆ ಬಂದೇ ಬರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾಳೆ. ಆ ಬೀಜ ಮೊಳಕೆಯೊಡೆದು ಮರವಾಗಲು ನಿಮ್ಮದೂ ಎರಡು ಕಂಬನಿಯ ಬಿಂದುಗಳು ಮಣ್ಣನ್ನು ಸೇರಲಿ. ಹೆಣ್ಣಿನ ನೋವು, ನಲಿವು, ಭಾವನೆಗಳನ್ನು ಬಿಂಬಿಸುವ ಅಮೆರಿಕಾದ ಕವಯಿತ್ರಿ ಮಾಯಾ ಆಂಜೆಲೋ ಅವರ ಕವನವನ್ನು ಅಂಜಲಿ ರಾಮಣ್ಣ ಭಾವಾನುವಾದ ಮಾಡಿದ್ದಾರೆ. ಈ ಕವನ ಬೇಬಿ ಆಫ್ರೀನ್‌ಳಿಗೆ ಅರ್ಪಣೆ.

ಇತಿಹಾಸದ ಹಾಳೆಗಳಿಂದ ನೀ ನನ್ನ ಕಿತ್ತೊಗೆದಿರಬಹುದು
ಕುರೂಪಗೊಂಡ ನಿನ್ನ ಕಹಿ ಸುಳ್ಳುಗಳು ಸಾಕ್ಷಿ ಹೇಳಬಹುದು
ಕಲ್ಮಶದ ಆಳದಲ್ಲಿ ನೀ ನನ್ನ ಹುದುಗಿಡಿಸಿಡಬಹುದು
ಹರಿಯದಂತೆ ಕೊಡದ ಕೈಸೆರೆಯಾಗಿಸಬಹುದು
ಆದರೂ ನಾನು ಧೂಳಿನಂತೆ ಮೇಲೇಳುವೆನು . . . .

ನನ್ನ ಮರುಹುಟ್ಟಿಗೆ ನೀ ನೋಯುವೆ
ವಿಷಣ್ಣನಾಗಿ ಮೋರೆ ಗಂಟಿಕ್ಕುವೆ
ಬಿಡದೆ ನಾ ನಿನ್ನೆಡೆಗೇ ನಡೆವೆ
ನನ್ನೊಳಗಿನ ಬತ್ತದ ಸೆಲೆಯ ಮೊಗೆವೆ
ಮತ್ತೆ ನಾನು ಧೂಳಿನಂತೆ ಮೇಲೇಳುವೆನು. . . . .

ನೀ ಬಯಸುವೆ ನಾ ಸೋತು ಸೊರಗುವುದನ್ನು
ಬಾಗಿದ ತಲೆ ನಿರ್ವಿಣ್ಣ ನೋಟವನ್ನು
ಮೇಲೇರದ ಭುಜ ಕಣ್ಣ್ರೆಪ್ಪೆಗಳನ್ನು
ನೋಡಲಾರದೆ ಹೋಗುವೆ ಆತ್ಮನೊಡನೆ ನನ್ನ ಅನುಸಂಧಾನವನ್ನು
ಅಲ್ಲಿ ನಾನು ಧೂಳಿನಂತೆ ಮೇಲೇಳುವೆನು. . . .

ಈ ಸ್ವಾಭಿಮಾನಕ್ಕೆ ನಿನ್ನ ಧಿಕ್ಕಾರವಿದ್ದೀತು
ನನ್ನಂತಃಸತ್ತ್ವಕೆ ನಿನ್ನ ಕುಹಕವಿದ್ದೀತು
ನನ್ನ ಅಸ್ತ್ತಿತ್ವಕ್ಕೆ ನಿನ್ನ ಕೊಡಲಿ ಏಟಿದ್ದೀತು
ಬಿಡದೆ ನಿನ್ನ ಗರ್ಭದಲ್ಲೇ ನನ್ನ ಚಿಗುರೆದ್ದೀತು
ತಣ್ಣಗೆ ನಾನು ಧೂಳಿನಂತೆ ಮೇಲೇಳುವೆನು. . . . .

ಚರಿತ್ರೆಯ ದುಮ್ಮಾನವನು ಮೀಂಟುವೆನು
ಭರವಸೆಯ ನಾಳೆಗೆ ಹೆಬ್ಬಾಗಿಲಾಗುವೆನು
ನೋವಿನಲ್ಲೂ ಬೀಜ ಮೊಳೆತು ಬೆಳಕಿನ ಭ್ರೂಣವಾಗುವೆನು
ಕಡಲುಬ್ಬರವನು ಲೆಕ್ಕಿಸದೆ ಹುಟ್ಟಿ ಹಸಿರಾಗುವೆನು
ಬೆಚ್ಚಗೆ ನಾನು ಧೂಳಿನಂತೆ ಮೇಲೇಳುವೆನು. . . . .

ನಾನು ಮೇಲೇಳುತ್ತೇನೆ
ಕನಸುಗಳ ಹೆಣೆಯುತ್ತೇನೆ
ಹೆಣ್ಣು ಭ್ರೂಣವಾಗುತ್ತೇನೆ
ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ
ಧೂಳಿನಂತೆ ಬಿಟ್ಟೂ ಬಿಡದೆ ಮೇಲೆದ್ದು ಹೆಣ್ಣಾಗುತ್ತೇನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+