ವಾರಕ್ಕೈದು ದಿನ ಕೆಲ್ಸ: ಆರು ತಿಂಗಳು ರಜೆಗಳು

ನೌಕರ ಬಾಂಧವರಿಗೆ ವರ್ಷಕ್ಕೆ 15 ದಿನ ಸಾಂದರ್ಭಿಕ ರಜೆಗಳು, 22 ಸಾರ್ವಜನಿಕ ರಜೆಗಳು, 52 ಭಾನುವಾರಗಳು, 2 ನಿರ್ಬಂಧಿತ ರಜೆಗಳು ಮತ್ತು 12 ದಿನ ಎರಡನೇ ಶನಿವಾರ ರಜೆಗಳು, ಇತ್ಯಾದಿ ರಜೆ ಸೇರಿ ಒಟ್ಟು 120 ರಜಾ ದಿನಗಳು ವರ್ಷದಲ್ಲಿ ಲಭ್ಯವಾಗುತ್ತವೆ. ಇವು ಕಾನೂನು ರೀತ್ಯ ಒದಗುವಂತಹವುಗಳು.
ಇದರ ಜೊತೆಗೆ ರೈಲುಗಾಡಿ ವಿಳಂಬ, ಬಸ್ಸು ಸಂಚಾರ ರದ್ದು, ಮುಷ್ಕರಗಳು, ಗಣ್ಯ ವ್ಯಕ್ತಿಗಳ ಸಾವು, ಕಚೇರಿ ಸಿಬ್ಬಂದಿಗಳ ಮದುವೆ ಮುಂತಾದ ಕಾರಣ ಹೇಳಿ ಕಾನೂನುಬಾಹಿರ ರಜೆಗಳ ಪಟ್ಟಿ ಬೆಳೆಯುತ್ತದೆ.
ಈಗ ಸರಕಾರಕ್ಕೆ ಮತ್ತೆ ವಾರಕ್ಕೈದು ದಿನ ಕೆಲಸ ವ್ಯವಸ್ಥೆ ಜಾರಿಗೆ ತಂದರೆ, 6 ತಿಂಗಳು ಅಧಿಕೃತ ರಜೆಗಳು ದೊರೆತಂತಾಗುವುದು. ಅನೇಕ ನೌಕರರು ದಿನಕ್ಕೆ ಎಂಟು ಗಂಟೆ ಕೆಲಸದ ಅವಧಿಯಲ್ಲಿ 3 ಗಂಟೆಗಳ ಕೆಲಸ ಸಹ ನಿರ್ವಹಿಸದೆ ಓಡಾಡಿಕೊಂಡು ದಿನ ಕಳೆಯುತ್ತಿದ್ದಾರೆ.
ಹದ್ದು ಮೀರಿದ ಭ್ರಷ್ಟಾಚಾರ, ಕಡಿಮೆ ಕಾರ್ಯಕ್ಷಮತೆ, ಒಳಜಗಳ, ಜಾತೀಯತೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಮತ್ತೆ ವಾರಕ್ಕೈದು ದಿನ ಕೆಲಸದ ವ್ಯವಸ್ಥೆ ಜಾರಿಗೆ ಬಂದರೆ ಜನಸಾಮಾನ್ಯರ ಗೋಳು ಹೆಚ್ಚಾಗಿ ಸರಕಾರಕ್ಕೆ ಕೆಟ್ಟ ಹೆಸರು ಬರುವುದರಲ್ಲಿ ಅನುಮಾನವಿಲ್ಲ.
ಈ ವ್ಯವಸ್ಥೆ ಬಂದ ಸಾರ್ವಜನಿಕರ ಆಕ್ರೋಶಕ್ಕೆ ಎದುರಿಸುವ ಮೊದಲೇ ಮರು ಚಿಂತನೆ ಮಾಡಿ ವ್ಯವಸ್ಥೆಯನ್ನು ಕೈ ಬಿಡುವುದು ಲೇಸು.












Click it and Unblock the Notifications