ಪಟಾಕಿ ಬಿಡಿ, ಬಡ ಮಕ್ಕಳಿಗೆ ಒಪ್ಪೊತ್ತು ಊಟ ಹಾಕಿ

ಮನೆ ಮತ್ತು ಅಂಗಡಿಗಳಲ್ಲಿ ದೀಪಾ ಹಚ್ಚಿ ಅನಾಥ ಬಡ ಮಕ್ಕಳಿಗೆ ಒಂದೊತ್ತು ಊಟ ಹಾಕಿ ಪುಣ್ಯ ಕಟ್ಟಿಕೊಳ್ಳಿ. ದೀಪಾವಳಿ ಸಂಭ್ರಮ ಮೂರು ದಿನ ಮಾತ್ರ ಆ ಮೂರು ದಿನಗಳಲ್ಲಿ ಸಾವಿರಾರು ರೂಪಾಯಿ ಖರ್ಚುಮಾಡಿ ಪಟಾಕಿ ಹೊಡೆಯುವುದು ಬೇಡವೇ ಬೆಡ.
ದೀಪಾವಳಿಯಂದು ಸಾವಿರಾರು ರೂಪಾಯಿ ಖರ್ಚುಮಾಡಿ ಪಟಾಕಿ ಹೊಡೆಯಿರಿ ಎಂದು ಯಾವ ಕಾನೂನಿನಲ್ಲಿ ಇಲ್ಲ ಮತ್ತು ಯಾರು ಹೇಳುವುದು ಇಲ್ಲ. ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಪಟಾಕಿಯಿಂದ ಆಗುವ ಅನಾನುಕೂಲ ಬಗ್ಗೆ ತಿಳುವಳಿಕೆ ನೀಡಿ.
ದೀಪಾವಳಿಯಲ್ಲಿ ಹೆಚ್ಚು ಪಟಾಕಿ ಹೊಡೆಯುವುದರಿಂದ ನಮ್ಮ ಪರಿಸರದಲ್ಲಿ ವಾಯುಮಾಲಿನ್ಯ ವಾಗುತ್ತದೆ. ಇದರಿಂದ ಉಸಿರಾಟ ತೊಂದರೆ, ಕಿವಿ ತೊಂದರೆ, ಕಣ್ಣಿನ ತೊಂದರೆ ಹೀಗೆ ಹಲವಾರು ತೊಂದರೆಗಳು ಈ ಪಟಾಕಿಯಿಂದ ಆಗುತ್ತವೆ.
ಈ ಪಟಾಕಿಯ ಹಚ್ಚುವುದರ ಬದಲಾಗಿ ಆ ಹಣವನ್ನು ನಿಮ್ಮ ಮಕ್ಕಳ ಹೆಸರಲ್ಲಿ ಬ್ಯಾಂಕ್‌ನಲ್ಲಿ ಹಾಕಿ. ಮುಂದಿನ ದಿನಗಳಲ್ಲಿ ನಿಮ್ಮ ಮಗನ ವಿದ್ಯಾಭ್ಯಾಸಕ್ಕೆ ಅನುಕೂಲ ವಾಗುತ್ತದೆ.
ಪಟಾಕಿ ಹೋಡಿಯಲೆ ಬೇಡಿ ಅನ್ನುವುದಕ್ಕೆ ನಾವ್ಯಾರು...? ನಿಮ್ಮ ಹಣ..! ನಿಮ್ಮ ಪಟಾಕಿ..! ಒಂದು ಕ್ಷಣ ಯೋಚನೆಮಾಡಿ. ಪಟಾಕಿ ಹೊಡಿಬೇಕಾ ಅಥವಾ ಬೇಡ್ವಾ... ನಿಮ್ಮ ಮುಂದೆ ಇದೆ... ಒನ್ ಸೆಂಕೆಡ್ ಹ್ಯಾಪಿ ದೀಪಾವಳಿ












Click it and Unblock the Notifications