ಉರುಳುಸೇವೆ ಸಂಪ್ರದಾಯ ಮುರಿದ ಕಾಂಗ್ರೆಸ್ 'ಪೂಜಾರಿ'

ಆದರೆ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅನಾರೋಗ್ಯ ನಿಮಿತ್ತ ಅವರನ್ನು ಮೆಚ್ಚಿಸುವುದಕ್ಕಾಗಿ ಪೂಜಾರಿಯಂತಹ ನಾಯಕರು ಎಂಥ ಕೆಲಸಕ್ಕೂ ಹಿಂಜರಿಯಲಾರರು ಎನ್ನುವುದು ಇದರಿಂದ ಸಾಬೀತಾಯಿತು.
ಪೂಜಾರಿಯವರು ಕುದ್ರೋಳಿ ದೇವಳದ ಹೊರಗಿನ ಮಾರ್ಬಲ್ ಅಂಗಳದಲ್ಲಿ ತಮ್ಮ ಸಹವರ್ತಿಗಳ ಜೊತೆ ಉರುಳಿದರು. ಇದನ್ನು ಪ್ರತ್ಯಕ್ಷದರ್ಶಿಯಾಗಿ ಕಂಡ ನನಗೆ ರಾಜಕೀಯ ಮತ್ತದರ ಡೊಂಕುಬಾಲದ ನಾಯಕರ ಬಗ್ಗೆ ಇದ್ದ ಅಲ್ಪಸ್ವಲ್ಪ ಅಭಿಮಾನವೂ ಹೊರಟುಹೋಗಿದೆ. ಪೂಜಾರಿಯವರು ಉರುಳು ಸೇವೆ ಮಾಡಿದ್ದನ್ನು ತಪ್ಪೆನ್ನಲಾಗದು. ಆದರೆ ಅವರಿಲ್ಲಿ ಉರುಳು ಸೇವೆ ಮಾಡುವಾಗ ಪಾಲಿಸ ಬೇಕಾದ ಕನಿಷ್ಟ ನಿಯಮಗಳನ್ನಾದರೂ ಪಾಲಿಸಬೇಕಿತ್ತು.
ಮಡಿಬಟ್ಟೆ ಉಟ್ಟು, ದೇವಳದ ಕೆರೆಯಲ್ಲಿ ಸ್ನಾನ ಮಾಡಿ ದೇವರ ಸಾನಿಧ್ಯದಲ್ಲಿ ಉರುಳು ಸೇವೆ ಮಾಡಬೇಕಿತ್ತು. ಅದನ್ನು ಬಿಟ್ಟು ಬಿಳಿ ಬಟ್ಟೆ ಧರಿಸಿ, ಕೈಗೆ ವಾಚ್, ಸೊಂಟಕ್ಕೆ ಬೆಲ್ಟ್, ಕಾಲಿಗೆ ಸಾಕ್ಸ್ ಧರಿಸಿ ಉರುಳು ಸೇವೆ ಮಾಡು ವುದೆಂದರೆ ಅದು ಪವಿತ್ರ ಹಿಂದೂ ಧರ್ಮದ ಸಂಪ್ರದಾ ಯದ ಅವಹೇಳನವಲ್ಲವೇ? ದೇವಳದ ಅಂಗಳದಲ್ಲಿ ಪಾದರಕ್ಷೆ, ಕಾಲುಚೀಲ ಧರಿಸಿ ಪ್ರವೇಶಿಸುವಂತಿಲ್ಲ.
ಹೀಗಿರು ವಾಗ ಪೂಜಾರಿಯವರು ಈ ಕಟ್ಟುಪಾಡನ್ನು ಮುರಿದಿದ್ದೇಕೆ? ಈ ಬಗ್ಗೆ ಸಾಮಾಜಿಕ ಸಂಘಟನೆಗಳು ಯಾಕೆ ಇವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ? ಇವರ ಜೊತೆ ದೇವಳದಲ್ಲಿ ಸೋನಿಯಾಗಾಗಿ ಉರುಳಾಡಿದ ನಂಜುಂಡಿ ಸಮೇತ ಇತರ ಬಾಲಂಗೋಚಿ ನಾಯಕರು ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲಿ.
ಸಂಪ್ರದಾಯ ಎನ್ನುವುದು ಇದ್ದ ಹಾಗೇ ಇದ್ದರೆ ಒಳ್ಳೆಯದು. ಅದನ್ನು ಬಿಟ್ಟು ಬೂಟಾಟಿಕೆಗಾಗಿ ಎಲ್ಲೆಂದರಲ್ಲಿ ಉರುಳಾ ಡಿದರೆ ದೇವರೂ ಕ್ಷಮಿಸಲಾರ. ಗೋಕರ್ಣನಾಥನ ಪವಿತ್ರ ಸನ್ನಿಧಿ ಪಾವಿತ್ರ್ಯತೆ ಕಳೆದುಕೊಳ್ಳದಂತೆ ನೋಡಿಕೊಳ್ಳ ಬೇಕಿದೆ.












Click it and Unblock the Notifications