ಸೋನಿಯಾ ಗುಣಮುಖರಾಗಲು ಪೂಜಾರಿ ಉರುಳುಸೇವೆ

ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಅವರಿಗೆ ಗೋಕರ್ಣನಾಥ ದೇವರು ಒಳ್ಳೆಯದು ಮಾಡಲಿ ಎನ್ನುವ ಆಶಯದೊಂದಿಗೆ ಪೂಜಾರಿ ಅವರು ಈ ಉರುಳು ಸೇವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಬೆಳ್ಳಿ ರಥೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ಶಾಸಕ ಅಭಯಚಂದ್ರ ಜೈನ್, ಕಿರುತೆರೆ ನಟ ಮತ್ತು ನಿರ್ಮಾಪಕ ಕೆ.ಪಿ.ನಂಜುಂಡಿ,ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೊಂಡಾಲ ಜಗನಾಥ ಶೆಟ್ಟಿ, ಐವನ್ ಡಿಸೋಜಾ ಸಹಿತ ಕಾಂಗ್ರೆಸ್ ಮುಖಂಡರು ಉರುಳು ಸೇವೆಯಲ್ಲಿ ಪಾಲ್ಗೊಂಡರು. ಶಾಸಕ ಯು.ಟಿ.ಖಾದರ್, ಕಾಂಗ್ರೆಸ್ ಮುಖಂಡ ಮೊಹಿದ್ದೀನ್ ಬಾವಾ ಸಹಿತ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಣ್ಣಾವ್ರಿಗಾಗಿಯೂ ಉರುಳುಸೇವೆ : ಪೂಜಾರಿಯವರು ಉರುಳುಸೇವೆ ನಡೆಸುತ್ತಿರುವುದು ಇದೇನು ಮೊದಲೇನಲ್ಲ. ಈ ಹಿಂದೆ ವರನಟ ಡಾ.ರಾಜಕುಮಾರ್ ದಂತಚೋರ ವೀರಪ್ಪನ್ ನಿಂದ ಅಪಹರಣವಾಗಿದ್ದಾಗಲೂ ಸೇವೆ ಸಲ್ಲಿಸಿದ್ದರು. ಜುಲೈ 30, 2000 ರಂದು ಅಣ್ಣಾವ್ರು ಅಪಹರಕ್ಕೀಡಾದ ಸುದ್ದಿ ತಿಳಿದ ತಕ್ಷಣ ತಿರುಪತಿಯಲ್ಲಿದ್ದ ಪೂಜಾರಿ ಧಾವಿಸಿ ಬಂದು ತಮ್ಮ ಬೆಂಬಲಿಗರೊಂದಿಗೆ ಉರುಳುಸೇವೆ ಸಲ್ಲಿಸಿದ್ದರು.












Click it and Unblock the Notifications