ಸಾರ್ವಜನಿಕ ಶೌಚ ಕೂಪದ ಬಗ್ಗೆ ಕಾರ್ಕಳದ ವಿದ್ಯಾರ್ಥಿನಿಯರು

ಶೌಚಾಲಯದತ್ತ ಹೋದಾಗ ಅಲ್ಲಿಯೇ ಇದ್ದ ಸುಲಭ ಶೌಚಾಲಯದ ನೌಕರ ಒಳಗೆ ಹೋಗಬೇಕಾದರೆ ಎರಡು ರೂಪಾಯಿ ಕೊಡಬೇಕೆಂದು ತಾಕೀತು ಮಾಡಿದ. ಯಾಕೆ ಮೂತ್ರ ವಿಸರ್ಜನೆ ಉಚಿತವಲ್ಲವೆ ಎಂದು ಪ್ರಶ್ನಿಸಿ ಗೆಳತಿಯಲ್ಲರೆಲ್ಲರೂ ಆತನನ್ನು ತರಾಟೆಗೆ ತೆಗೆದುಕೊಂಡೆವು.
ನಮ್ಮ ತರಾಟೆಗೆ ಅವನು ಉತ್ತರಿಸಿದ ರೀತಿ ಹೀಗಿತ್ತು. 1 ರೂಪಾಯಿ, 4 ರೂಪಾಯಿ, 10 ರೂಪಾಯಿ ಎಂದು ನಗರಸಭೆಯ ಅಧಿಕಾರಿಗಳಿಗೆ ನಾವು ದಿನಾಲೂ ಮಾಮೂಲಿ ನೀಡಬೇಕು ಎಂದು ಸಾರ್ವಜನಿಕರ ಎದುರೇ ರಾಜಾರೋಷವಾಗಿ ನಮ್ಮನ್ನೇ ತರಾಟೆಗೆ ತೆಗೆದುಕೊಂಡ ರೀತಿ ಮಾತ್ರ ಅಸಹನೀಯ.
ಎರಡು ರೂಪಾಯಿ ಕೊಟ್ಟು ಒಳ ಹೋದ ನನ್ನ ಗೆಳತಿ ಹೊರ ಬಂದು ವಾಂತಿ ಮಾಡಿ, ಶೌಚಾಲಯದ ಒಳಗಿನ ಬಗ್ಗೆ ವರ್ಣಿಸಿದಳು. ಮೂಗು ಮುಚ್ಚಿಕೊಂಡೇ ಒಳಗೆ ಹೋಗಬೇಕಾದ ಪರಿಸ್ಥಿತಿ ಅಲ್ಲಿತ್ತು ಎಂದಳು. ಗೋಡೆಯ ತುಂಬಾ ಅಸಹ್ಯ ಶಬ್ದಗಳು, ಚಿತ್ರಗಳು, ಅಲ್ಲಲ್ಲಿ ಉಪಯೋಗಿಸಿ ಬಿದ್ದುಕೊಂಡಿರುವ ಕಾಂಡೋಮ್‌ಗಳ ರಾಶಿ, ಸ್ತ್ರೀಯರಂತೂ ಶೌಚಾಲಯ ಪ್ರವೇಶಿಸದ ದುಃಸ್ಥಿತಿ. ಶರಾಬಿನ ಬಾಟ್ಲಿಗಳು ಅಲ್ಲಲ್ಲಿ ಬಿದ್ದುಕೊಂಡಿದ್ದವು ಎಂದು ವಿವರಿಸಿದಳು.
ಸ್ತ್ರೀಯರ ಶೌಚಾಲಯಕ್ಕೆ ಸ್ತ್ರೀಯರಿಗೆ ಮಾತ್ರ ಪ್ರವೇಶ ಎಂದು ನಿಯಮವಿದ್ದರೆ ಹೀಗಾಗುತ್ತಿರಲಿಲ್ಲ. ಸ್ತ್ರೀಯರು ಉಪಯೋಗಿಸುವ ಶೌಚಾಲಯದ ಕೋಣೆಗೆ ಪುರುಷರನ್ನು ಬಿಡುವುದು ಸರಿಯೇ? ಹಾಗೆ ಇಲ್ಲಿ ಹೆಚ್ಚು ಹಣವನ್ನು ವಸೂಲು ಮಾಡುವುದು ಸರಿಯೇ? ಸಚ್ಛತೆ ಸರಿಯಾಗಿ ನಿರ್ವಹಿಸದೆ ಸಾರ್ವಜನಿಕರನ್ನು ಹಗಲು ದರೋಡೆ ಮಾಡುವುದು ಯಾವ ನ್ಯಾಯ? ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಯಾರೇ?












Click it and Unblock the Notifications