ಹೆಡ್ ಅಂಡ್ ಷೋಲ್ಡರ್ ನಲ್ಲಿ ಕನ್ನಡದ ಕಂಪಿಲ್ಲ

Down with heads and shoulders
ಹೆಡ್ ಅಂಡ್ ಷೋಲ್ಡರ್ ಶಾಂಪು ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.ತಲೆ ಕೂದಲು ಸೊಂಪಾಗಲು, ತಲೆ ಹೊಟ್ಟನ್ನು ನಿವಾರಿಸಲು ನಮ್ಮ ಶಾಂಪು ಬಳಸಿ ಎಂದು ಬಣ್ಣಬಣ್ಣದ ಜಾಹೀರಾತುಗಳನ್ನು ಬಿತ್ತರಿಸುವುದರಲ್ಲಿ ಎತ್ತಿದ ಕೈ.ಆದರೆ ತಾವು ತಯಾರಿಸಿದ ಶಾಂಪು ಪ್ಯಾಕೆಟ್ ಗಳ ಮೇಲೆ ಕನ್ನಡಹಾಕುವುದನ್ನು ಮರೆತಿದ್ದಾರೆ.

ಕರ್ನಾಟಕದಲ್ಲಿ ಎಗ್ಗಿಲ್ಲದಂತೆ ಮಾರಾಟವಾಗುತ್ತಿರುವ ರು.1.50 ಬೆಲೆಯ ಶಾಂಪು ಪ್ಯಾಕೆಟ್ ಗಳ ಮೇಲೆ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳು ರಾರಾಜಿಸುತ್ತಿವೆ. ಶಾಂಪು ಪ್ಯಾಕೆಟ್ ಗಳ ಮೇಲೆ ಕನ್ನಡದ ಸುಳಿವಿಲ್ಲ. ಮುಖ್ಯವಾಗಿ ಶ್ರೀಸಾಮಾನ್ಯರು, ಕಡಿಮೆ ಆದಾಯವುಳ್ಳವರು ಹೆಚ್ಚಾಗಿ ಬಳಸುತ್ತಿರುವ ಈ ಸಣ್ಣ ಶಾಂಪು ಪ್ಯಾಕೆಟ್ ಗಳ ಮೇಲೆ ವಿವರಗಳನ್ನು ಕನ್ನಡಲ್ಲಿ ಮುದ್ರಿಸಲು ಕಂಪನಿಗೆ ಆಸಕ್ತಿ ಇಲ್ಲ.

ಈ ಶಾಂಪು ಪ್ಯಾಕೆಟ್ ಗಳನ್ನು ಕನ್ನಡಿಗರು ಬಹಿಷ್ಕರಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸರಿಯಾಗಿ ಪಾಠ ಕಲಿಸಬೇಕಾಗಿದೆ. ಇವರಿಗೆ ಕನ್ನಡಿಗರ ಅನ್ನ, ಹಣ,ನೀರು, ಗಾಳಿ, ಭೂಮಿ ಎಲ್ಲವೂ ಬೇಕು ಆದರೆ ಭಾಷೆ ಮಾತ್ರ ಬೇಕಾಗಿಲ್ಲ.ಹಾಗಿದ್ದರೆ ಇವರು ನಮಗೇಕೆ ಬೇಕು? ನಮ್ಮ ಮನೆಯ ಹತ್ತಿರದ ಶೆಟ್ಟರ ಅಂಗಡಿಯಲ್ಲಿ ಚಿಲ್ಲರೆ ಇಲ್ಲದ್ದಕ್ಕೆ ಈ ಶಾಂಪು ಕೊಟ್ಟ. ಸರಿ ಮನೆಗೆ ಬಂದು ಸುಮ್ಮನೆ ಹಾಗೆ ಕಣ್ಣಾಡಿಸಿದರೆ ಈ ಪರಮ ಸತ್ಯ ಗೋಚರಿಸಿತು. ಇಷ್ಟಕ್ಕು ಈ ಪ್ಯಾಕೆಟ್ ತಯಾರಾಗಿರುವುದು ಹಿಮಾಚಲ ಪ್ರದೇಶದಲ್ಲಿ. ಇವರಿಗೆ ದಕ್ಷಿಣ ಭಾರತ ಎಂದರೆ ಬರೀ ತಮಿಳು, ತೆಲುಗು ಎಂದು ತಿಳಿದಿರುವಂತಿದೆ. ಒಟ್ಟಿನಲ್ಲಿ ಭುಜದ ಮೇಲೆ ತಲೆಇಲ್ಲದ ಈ ರೀತಿಯ ಶಾಂಪುಗಳನ್ನು ಬಳಸುವುದರಲ್ಲಿ ಯಾವ ಅರ್ಥವೂ ಇಲ್ಲ.

ರಾಜೇಂದ್ರ ಚಿಂತಾಮಣಿ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+