ನಿಮ್ ದುಡ್ಡು, ನಿಮ್ ದೌಲತ್ತು! ಆದರೂ ಚೂರು ಯೋಚನೆ ಮಾಡಿ..

ಪ್ರಿಯ ಶ್ಯಾಮ್,

ನಿಮ್ ದುಡ್ಡು, ನಿಮ್ ದೌಲತ್ತು! ಆದರೂ ಚೂರು ಯೋಚನೆ ಮಾಡಿ..ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತಿರುವಂತೆಯೇ "ಐಷಾರಾಮಿ"(ಲಕ್ಷುರಿ) ವಸ್ತುಗಳ ಮಾರುಕಟ್ಟೆ ಭಾರತದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಸ್ವಿಟ್ಜರ್ಲೆಂಡ್ ಹಾಗೂ ಜರ್ಮನಿಯ ಉತ್ಪನ್ನಗಳದ್ದು ಈ ಮಾರುಕಟ್ಟೆಯಲ್ಲಿ ಮೇಲುಗೈ. ಭಾರತದ ಮಹಾನಗರಗಳನ್ನೊಳಗೊಂಡಂತೆ ಇತರ ನಗರಗಳಲ್ಲೂ ಇದು ವ್ಯಾಪಕವಾಗಿ ಹಬ್ಬುತ್ತಿದೆ. ಸಾಮಾನ್ಯವಾಗಿ ಮಧ್ಯಮ ವರ್ಗಕ್ಕೆ ಸೇರಿದವರು ಇದರ ಸೆಳೆತಕ್ಕೆ ಒಳಗಾಗುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಸ್ಥಿತಿ ಬದಲಾಗಬಹುದು.

ಜಪಾನ್, ಕೊರಿಯಾ ಮುಂತಾದ ದೇಶಗಳು ಉತ್ತಮ ಗುಣಮಟ್ಟದ ಟೀವಿ, ಕಾರು ಮುಂತಾದವುಗಳನ್ನು ಭಾರತದಲ್ಲಿ ಉತ್ಪಾದಿಸಿ ಒಳ್ಳೆಯ ಕೆಲಸವನ್ನು ಮಾಡುತ್ತಿವೆ. ಇವುಗಳ ಅಗತ್ಯತೆಯೂ ಜನತೆಗೆ ಇದೆ. ನಾನು ಹೇಳಲು ಹೊರಟಿರುವುದು ಈ ವಸ್ತುಗಳಿಂದ ಹೊರತಾದ "ಐಷಾರಾಮಿ" ಎಂದು ಕರೆಯಲ್ಪಡುವ ವಸ್ತುಗಳು.

ಈ ವಸ್ತುಗಳು ಮಹಿಳೆಯರ ಬ್ಯಾಗು, ತಂಪು ಕನ್ನಡಕ, ಪೆನ್ನು, ಪುರುಷರ ಕೈ ಗಡಿಯಾರಗಳು, ಬೂಡ್ಸು, ನೇಲ್ ಪಾಲಿಷ್, ಮುಂತಾದ ನಿತ್ಯೋಪಯೋಗಿ ವಸ್ತುಗಳು. ಈ ಉತ್ಪನ್ನಗಳು ನೋಡಲು ಚೆನ್ನಾಗಿದ್ದು ಉತ್ತಮ ಗುಣಮಟ್ಟದ್ದೂ ಇರಬಹುದಾದರೂ ಬೆಲೆ ಮಾತ್ರ ಗಗನದೆತ್ತರ.

ಉದಾಹರಣೆಗೆ : ಒಂದು ಚರ್ಮದ ಚೀಲಕ್ಕೆ ಹತ್ತು ಸಾವಿರದಿಂದ ಎರಡು ಲಕ್ಷ ರೂಪಾಯಿ, ಒಂದು ಪೆನ್ನಿಗೆ ಆರು ಸಾವಿರ ರೂಪಾಯಿ, ಒಂದು ಕೈಗಡಿಯಾರಕ್ಕೆ ಒಂದರಿಂದ ಐವತ್ತು ಲಕ್ಷ ರೂಪಾಯಿ...! ಕೈಗಡಿಯಾರಗಳ ಬಗ್ಗೆ ಸ್ವಲ್ಪ ಹೇಳಬೇಕು: ಇವು ಸಾಮಾನ್ಯವಾಗಿ ಕೀ ಕೊಡುವ ಅಥವಾ ಆಟೊಮ್ಯಾಟಿಕ್ ಗಡಿಯಾರಗಳು. ಇವುಗಳ ನಿಖರತೆ ಸದಾ ಬ್ಯಾಟರಿಯಿಂದ ಚಲಿಸುವ ಕ್ವಾರ್ಟ್ಜ ಗಡಿಯಾರಗಳಿಗಿಂತ ಕಡಿಮೆ. ಇವುಗಳಿಗೆ ಪ್ರಚಾರ ಕೊಡಲು ಭಾರತೀಯ ಇಂಗ್ಲೀಷ್ ಪತ್ರಿಕೆಗಳು ಹಾಗೂ ಟೀವಿ ಚಾನಲ್ಲುಗಳು ಸದಾ ಮುಂದೆ. (ಇಂಡಿಯಾ ಟುಡೆ ಬಗ್ಗೆ ರವಿ ಬೆಳಗೆರೆ ಬರೆದಿದ್ದ ಲೇಖನವನ್ನು ಇಲ್ಲಿ ಸ್ಮರಿಸಬಹುದು.) ನಮ್ಮ ದೇಶದಲ್ಲಿಯೇ ಇಂತಹದೇ ಅಥವಾ ಇನ್ನೂ ಉತ್ತಮವಾದ ವಸ್ತುಗಳು ತಯಾರಾಗುತ್ತಿವೆಯಾದರೂ ಮೇಲ್ವರ್ಗದ ಜನ ಮಾತ್ರ ವಿದೇಶೀ ವಸ್ತುಗಳನ್ನು ಮುಗಿಬಿದ್ದು ಕೊಳ್ಳತೊಡಗಿದ್ದಾರೆ.

ಭಾರತದಂತಹ ಬಡರಾಷ್ಟ್ರದ ಹಣ ಬೇರೆ ದೇಶಗಳಿಗೆ ಹರಿದು ಹೋಗುತ್ತಿದೆ. "ಅವರ ಹಣ, ಅವರ ಇಚ್ಛೆ" ಎಂದು ಸುಮ್ಮನಾಗಿ ಬಿಡಬಹುದಾದರೂ, ಬ್ಯಾಗು ಬೂಡ್ಸು ಕೊಳ್ಳಲು ನಮ್ಮ ದೇಶದ ಅಗಾಧ ಸಂಪತ್ತನ್ನು ಬೇರೆ ದೇಶಗಳಿಗೆ ಸಾಗಿಸುವುದು ಎಷ್ಟು ಸರಿ ಎಂದು ಯೋಚಿಸುವಂತಾಗುತ್ತಿದೆ.

ರಂಗನಾಥ, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+