ಕನ್ನಡಿಗರ ‘ಕಾವೇರಿ ಗಾಯ’ದ ಮೇಲೆ ಡಿ.ಎಂ.ಕೆ. ಬರೆ!


ತಮಿಳು ನಾಡಿನ ಡಿ.ಎಂ.ಕೆ. ಪಕ್ಷದ ಮುಖಂಡರೊಬ್ಬರ ಅಧೀನದಲ್ಲಿರುವ ಈ ವಾಹಿನಿಯಿಂದ, ಕನ್ನಡಿಗರಿಗೆ ಈಗ ಹಿಂದಿ ಹಾಡುಗಳನ್ನು ಕೇಳಿಸಲಾಗುತ್ತಿದೆ! ಇದು, ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಕನ್ನಡಿಗರು ನಡೆಸುತ್ತಿರುವ ಪ್ರತಿಭಟನೆಗೆ ಡಿ. ಎಂ. ಕೆ. ನೀಡಿರುವ ತಿರುಗೇಟು!!

ಬೆಂಗಳೂರಿನಲ್ಲಿ ಹಲವು ಖಾಸಗಿ ಎಫ್‌ಎಂ ವಾಹಿನಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡೆಗಣಿಸಿ ಹಿಂದಿ ಮತ್ತು ಇಂಗ್ಲಿಷನ್ನು ಮೆರೆಸುತ್ತಿರುವುದನ್ನು ಗಮನಿಸಿರಬಹುದು.

2006ರ ನವಂಬರ್‌ನಲ್ಲಿ ಸನ್‌ ನೆಟ್‌ವರ್ಕ್‌ ನವರ ಎಸ್‌ ಎಫ್‌ಎಂ 93.5 ಎಂಬ ಖಾಸಗಿ ಎಫ್‌ಎಂ ರೇಡಿಯೋ ವಾಹಿನಿ ಬೆಂಗಳೂರಿನಲ್ಲಿ ಕಾರ್ಯಾರಂಭಗೊಳ್ಳುವ ಮೊದಲು, ಅದರ ವ್ಯವಸ್ಥಾಪಕರು ಈ ವಾಹಿನಿಯಲ್ಲಿ ಶೇಕಡ 30 ತಮಿಳು ಹಾಡುಗಳನ್ನು ಪ್ರಸಾರ ಮಾಡಲಾಗುವುದಾಗಿ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯವರ ಪ್ರತಿಭಟನೆಯಿಂದ ತಮಿಳು ಹಾಡುಗಳನ್ನು ಪ್ರಸಾರ ಮಾಡುವ ನಿರ್ಧಾರವನ್ನು ಹಿಂತೆಗೆದುಕೊಂಡ ಇವರು ನಂತರದಲ್ಲಿ ಮಾಡಿದ್ದು ನಾಡೇ ಮೆಚ್ಚುವಂತ ಸ್ತುತ್ಯಾರ್ಹ ಕೆಲಸ.

ಎಸ್‌ ಎಫ್‌ಎಂ 93.5, ಇಪ್ಪತ್ನಾಲ್ಕು ಘಂಟೆಗಳ ಏಕೈಕ ಕನ್ನಡ ಹಾಡುಗಳನ್ನು ಪ್ರಸಾರ ಮಾಡುವ ವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೇ ಇಂದು(ಫೆ.10) ಬೆಳಗ್ಗಿನಿಂದ ಈ ರೇಡಿಯೋ ವಾಹಿನಿಯನ್ನು ಆಲಿಸುತ್ತಿರುವ, ಈಗಾಗಲೇ ಕಾವೇರಿ ನ್ಯಾಯಧೀಕರಣ ತೀರ್ಪಿನಿಂದ ಅನ್ಯಾಯಕ್ಕೊಳಗಾಗಿರುವ ಕನ್ನಡಿಗರಿಗೆ ತಟ್ಟಿದೆ ಮತ್ತೊಂದು ಶಾಕ್‌!

ತಮಿಳು ನಾಡಿನ ಡಿ.ಎಂ.ಕೆ. ಪಕ್ಷದ ಮುಖಂಡರೊಬ್ಬರ ಅಧೀನದಲ್ಲಿರುವ ಈ ವಾಹಿನಿಯಿಂದ ಕನ್ನಡಿಗರಿಗೆ ಹಿಂದಿ ಹಾಡುಗಳನ್ನು ಕೇಳಿಸಲಾಗುತ್ತಿದೆ. ಇದು ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಕನ್ನಡಿಗರು ನಡೆಸುತ್ತಿರುವ ಪ್ರತಿಭಟನೆಗೆ ಡಿ. ಎಂ. ಕೆ. ನೀಡಿರುವ ತಿರುಗೇಟು!!

ಈ ಕುರಿತು ಎಫ್‌ಎಂಗೆ ಕರೆ ಮಾಡಿದಾಗ ರೇಡಿಯೋ ಜಾಕಿ ಅಸಂಬದ್ಢ ಉತ್ತರ ನೀಡುತ್ತಿದ್ದಾರೆ. ಈಗಾಗಲೇ ಕನ್ನಡವನ್ನು ಕಡೆಗಣಿಸಿ, ಕೀಳು ಅಭಿರುಚಿಯ ಅಸಂಬದ್ಧ ಪದ-ವಾಕ್ಯಗಳನ್ನು ಬಳಸುತ್ತಿರುವ ರೇಡಿಯೋ ಸಿಟಿ, ರೇಡಿಯೋ ಮಿರ್ಚಿ, ಬಿಗ್‌ ಎಫ್‌ಎಂ ರೇಡಿಯೋ ಒನ್‌ ಸಾಲಿಗೆ, ಎಸ್‌. ಎಫ್‌ಎಂ ಕೂಡ ಸೇರಲು ಹೊರಟಿರುವುದು ದುರದೃಷ್ಟಕರ.

93.5 ಎಸ್‌. ಎಫ್‌ಎಂ. ವಾಹಿನಿಯ ಈ ನಡವಳಿಕೆ ಕನ್ನಡಿಗರಿಗೆ, ಗಾಯದ ಮೇಲೆ ಬರೆ ಎಳೆದಂತಾಗಿದೆ. ಕನ್ನಡದ ಜನಪ್ರಿಯ ವಾಹಿನಿಯಾಂದು ಕನ್ನಡಿಗರೆ ಕೈತಪ್ಪಿ ಹೋಗದಂತೆ ತಡೆ ಹಿಡಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+