ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಟೆಕ್‌ ಸಿಟಿ ಬೆಂಗಳೂರಲ್ಲೂ ರಂಗೋಲಿ ಕಿಲಕಿಲ!

By Staff
|
Google Oneindia Kannada News


ಮಾನ್ಯರೇ,

ಜ್ಯೋತಿರ್ಮಯಿ ಅವರಿಗೆ ಬೆಂಗಳೂರಿಗರ ಬಗ್ಗೆ ಯಾಕೆ ಇಂತಹ ಅಪಹಾಸ್ಯ ಎಂದು ಗೊತ್ತಿಲ್ಲ.

ಬೆಂಗಳೂರಿನಲ್ಲಿರುವ ನಾನು, ಎಂದೂ ರಂಗೋಲಿ ಹಾಕುವುದನ್ನು ತಪ್ಪಿಸಿಲ್ಲ. ಹಾಗೇ ನಮ್ಮ ಲೊಕ್ಯಾಲಿಟಿಯಲ್ಲಿರುವ ಎಲ್ಲ ಕನ್ನಡಿಗರ, ತಮಿಳರ, ತೆಲುಗರ ಹಾಗೂ ಮಲಯಾಳಿಗಳ ಮನೆ ಮುಂದೆ ರಂಗೋಲಿ ಇದ್ದೇ ಇರುತ್ತದೆ(ಮಳೆಗಾಲದಲ್ಲೂ).

ಹಬ್ಬಗಳಲ್ಲಿ, ಬಣ್ಣಬಣ್ಣದ ರಂಗೋಲಿ ಹಾಕುವುದನ್ನು ನಾವು ಸಂತೋಷದಿಂದಲೇ ಮಾಡುತ್ತೇವೆ. ಹಾಗಾಗಿ ಬೆಂಗಳೂರಿನಲ್ಲಿರುವ ಎಲ್ಲ ಜನರೂ ರಂಗೋಲಿ ಮರೆತಿಲ್ಲ. ಮನೆಯಾಡತಿ ಹಾಕಲಾಗದಿದ್ದರೂ ಕೆಲಸದವಳಾದರೂ ಹಾಕುತ್ತಾಳೆ.

- ಜಯಲಕ್ಷ್ಮೀ.ಡಿ.

*

ಸಂಪಾದಕರೇ,

ಅಮ್ಮನ ನೋಡಿ, ಮಗಳು ರಂಗೋಲಿ ಹಾಕುವುದನ್ನು ಕಲಿಯುತ್ತಿದ್ದಳು. ನೋಡನೋಡುತ್ತಿದ್ದಂತೆಯೇ ಪುಟ್ಟಪುಟ್ಟ ಕೈಗಳು, ದೊಡ್ಡದೊಡ್ಡ ರಂಗೋಲಿ ಬಿಡಿಸುತ್ತಿದ್ದವು.

ಹಬ್ಬದ ದಿನ ರಂಗೋಲಿ ಬಿಡಿಸಿ, ಮನೆಮಂದಿಯೆಲ್ಲರೂ ಬಣ್ಣ ತುಂಬುತ್ತಾ ಖುಷಿ ಪಡುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಕಾರಣ ಮನೆ ಮುಂದೆ ರಂಗೋಲಿ ಹಾಕಲು ಜಾಗವಿಲ್ಲ. ಮನೆಯಾಡತಿಗೆ ಬಿಡುವಿಲ್ಲ.

ಎಲ್ಲೋ ನೋಡಿದ ರಂಗೋಲಿಯನ್ನು ಕಣ್ಣಲ್ಲಿ ತುಂಬಿಟ್ಟುಕೊಂಡು, ಮನೆಗೆ ಬಂದು ನಮ್ಮ ಪಕ್ಕದ ಮನೆಯ ಗೌರಜ್ಜಿ ನನ್ನ ಸ್ಲೇಟ್‌ನಲ್ಲಿ ಬಿಡಿಸುತ್ತಿದ್ದಳು. ಅದು ಮೂಡುವ ತನಕ ಆಕೆಗೆ ತೃಪ್ತಿ ಇರುತ್ತಿರಲಿಲ್ಲ. ಆ ಅಜ್ಜಿಯಿಂದ ರಂಗೋಲಿ ಕಲಿತು, ನಾವು ಸಂಭ್ರಮಿಸುತ್ತಿದ್ದೆವು.

ರಂಗೋಲಿ ಬಗ್ಗೆ ನೆನೆದಾಗ, ಬಾಲ್ಯವೇ ನೆನಪಾಗುತ್ತದೆ. ಬದುಕಿನಲ್ಲಿ ಬಾಲ್ಯವೇ ಒಂದು ಸುಂದರ ರಂಗೋಲಿ ಅಲ್ವಾ?

- ಸುಧಾಮಣಿ ರಾಮದಾಸ್‌, ಮೈಸೂರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X