ರಕ್ತ ಹೆಪ್ಪುಗಟ್ಟದ ಕಾಯಿಲೆಗೆ ಲಸಿಕೆ : ಈ ಸುದ್ದಿಯಲ್ಲಿ ತಪ್ಪಿದೆ
ಮಾನ್ಯರೇ,
ದಟ್ಸ್ ಕನ್ನಡದಲ್ಲಿ ಪ್ರಕಟಿಸಿರುವ ಈ ಸುದ್ದಿ ಸರಿಯಲ್ಲ ಎಂದು ನನಗೆ ತೋರುತ್ತದೆ. ತಾವು ಈ ರೀತಿಯಾಗಿ ಪ್ರಕಟಿಸಿದ್ದೀರಿ ;
ಹೈದರಾಬಾದ್, ಸೆಪ್ಟೆಂಬರ್ 06 : ಅನುವಂಶಿಕವಾಗಿ ಬರುವ ಕಾಯಿಲೆಗಳಲ್ಲಿ ಹಿಮೋಫಿಲಿಯಾ ಕೂಡಾ ಒಂದು. ಮಾನವನ ವಂಶವಾಹಿಗಳಲ್ಲಿನ ದೋಷವೆ ಈ ಕಾಯಿಲೆಗೆ ಕಾರಣ. ರಕ್ತಹೆಪ್ಪುಗಟ್ಟದ ಈ ಕಾಯಿಲೆಗೆ ಔಷಧವನ್ನು ವಿಜ್ಞಾನಿಗಳು ಈಗ ಕಂಡುಹಿಡಿದಿದ್ದಾರೆ.
***
ಆದರೆ, ಈ ಲಸಿಕೆಯು (BioHib) ಹಿಮಾಫಿಲಸ್ ಇನ್ ಫ್ಲು ಯೆಂಸ ಎಂಬ ರೋಗಾಣುವಿನಿಂದ ಸಣ್ಣ ಮಕ್ಕಳಿಗೆ ತಗಲುವ ಮೆನಿಂಜೈಟಿಸ್ ಅಂಟುರೋಗ ಬರದಂತೆ ಮಾಡುವ ಲಸಿಕೆ. ಇದು ರಕ್ತ ಹೆಪ್ಪುಗಟ್ಟದ ಕಾಯಿಲೆ- ಹಿಮೋಫೀಲಿಯಕ್ಕೆ ಅಲ್ಲ.
ಭಾರತ್ ಬಯೋಟೆಕ್ ಇಂಟರ್ನ್ಯಾಶನಲ್ ಎಂಬ ಪ್ರಯೋಗಾಲಯದ ಅಂತರ್ಜಾಲ ಪತ್ರಿಕೆಯಲ್ಲಿ ಈ ರೀತಿಯಾಗಿ ಈ ರೀತಿಯಾಗಿ ಪ್ರಕಟಿಸಲಾಗಿದೆ.
BioHib is the first indigenously developed and manufacturedHaemophilus Influenza Type B (Hib) vaccine in India.
The vaccine isconsidered safe and affordable which offers complete protectionagainst Hib infection.
The second by BBIL firm is Comvac 4-HB, which is a tetravalentcombination vaccine. The Comvac4-HB and BioHib enable the deploymentof a combination pentavalent vaccine in a single injection.
ಆದುದರಿಂದ ತಾವು ತಮ್ಮ ಪತ್ರಿಕೆಯಲ್ಲಿ ಈ ವಿಷಯವನ್ನು ವಾಚಕರ ಗಮನಕ್ಕೆ ತರುತ್ತೀರೆಂದು ನಂಬಿದ್ದೇನೆ.
-ಡಾ. ರಾಜಾರಾಮ್ ಕಾವಳೆ,
ಬೇಸಿಂಗ್ ಸ್ಟೋಕ್,
ಇಂಗ್ಲೆಂಡ್, ಯುಕೆ.












Click it and Unblock the Notifications