ಐ2 ಟೆಕ್ನಾಲಜೀಸ್ ಕಂಪನಿಯಲ್ಲಿ ಮಿಂಚಿದ ಕನ್ನಡ ಟೀಶರ್ಟ್

ಕರುನಾಡಿನ ಕನ್ನಡ ಸ್ನೇಹಿತರೆ,
ಐ2 ಟೆಕ್ನಾಲಜೀಸ್ ಕಂಪನಿಯಲ್ಲಿ ಮಿಂಚಿದ ಕನ್ನಡ ಟೀಶರ್ಟ್ಇತ್ತೀಚೆಗೆ ನಮ್ಮ ಬೆಂಗಳೂರಿನಲ್ಲಿ ಕನ್ನಡ ಮರೆಯಾಗುತ್ತಿರುವ ಬಗ್ಗೆ ಎಲ್ಲ ಕಡೆಯಿಂದ ಕೂಗು ಕೇಳಿ ಬರುತ್ತಿದೆ. ಇದಕ್ಕೆ ಬೆಂಗಳೂರಿನಲ್ಲಿ ಕಳೆದ ಒಂದು ದಶಕದಲ್ಲಿ ಆದ ಕ್ಷಿಪ್ರ ಐ.ಟಿ, ಬಿ.ಟಿ ಕ್ರಾಂತಿಯೂ ಸಹ ಪುಷ್ಠಿ ನೀಡಿರಬಹುದು. ಏನೇ ಇರಲಿ ಆಗಿದ್ದು ಆಗಿಹೋಗಿದೆ ಈಗ ಏನು ಮಾಡುವುದು ಎಂದು ಸುಮ್ಮನೆ ಕೂರುವುದು ತರವಲ್ಲ.

ಕನ್ನಡಿಗರು ಬಹುತೇಕ ಸಂಖ್ಯೆಯಲ್ಲಿ ಐ.ಟಿ , ಬಿ.ಟಿ ಕಂಪನಿಗಳಲ್ಲಿ ಕೆಲಸ ಮಾಡಿದರೂ ಅಲ್ಲಿ ಕನ್ನಡದ ಕಂಪನ್ನು ಪಸರಿಸುವುದಕ್ಕೆ ಮುಂದಾಗುವುದು ವಿರಳ. ಇದಕ್ಕೆ ಒಂದು ಅಪವಾದವೆಂಬಂತೆ ಇತ್ತೀಚೆಗೆ ಕೆಲವು ಐ.ಟಿ ಕಂಪನಿಗಳಲ್ಲಿ ರಾಜ್ಯೋತ್ಸವ ಆಚರಿಸುವುದನ್ನು ನಾವು ಕಂಡಿದ್ದೇವೆ. ಕನ್ನಡಿಗರು ಬಹುತೇಕ ಅಲ್ಲದಿದ್ದರು ಸಾಕಷ್ಟು ಇರುವ ನಮ್ಮ ಕಂಪನಿ ಐಟು ಟೆಕ್ನಾಲಜೀಸ್‍ನಲ್ಲಿ ಪ್ರಥಮಬಾರಿಗೆ ರಾಜ್ಯೋತ್ಸವ ಆಚರಣೆ ಮಾಡಿದೆವು.

ರಾಜ್ಯೋತ್ಸವ ಆಚರಣೆಗೆ ಮೆರಗು ತಂದದ್ದು ಕನ್ನಡ ಹಿಂಬರಹದ ಟಿ-ಷರ್ಟ್ಸ್.ಎಲ್ಲ ಐಟು ಕನ್ನಡಿಗರು http://www.i2.com ಬಹುಸಂಖ್ಯೆಯಲ್ಲಿ ಕನ್ನಡದ ಟಿ-ಷರ್ಟ್ ಧರಿಸಿ, ನವೆಂಬರೆ 2ರಂದು ಸುಮಾರು 500ಜನ ಸಿಬ್ಬಂದಿಗೆ ಸಿಹಿ ಹಂಚುವ ಮೂಲಕ ರಾಜ್ಯೋತ್ಸವ ಆಚರಣೆ ಮಾಡಿದೆವು. ಕನ್ನಡ ರಾಜ್ಯೋತ್ಸವ ಆಚರಣೆಯ ಮೂಲ ಉದ್ದೇಶದ ಬಗ್ಗೆ ಪರಭಾಷಾ ಸಹೋದ್ಯೋಗಿಗಳಿಗೆ ಇದ್ದ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ ಅದರ ಮೂಲ ಉದ್ದೇಶ ಮನವರಿಕೆ ಮಾಡಿದೆವು.

ಇದಕ್ಕೆ ಎಲ್ಲ ಕನ್ನಡಿಗ ಸಹೋದ್ಯೋಗಿಗಳು ಪ್ರೋತ್ಸಾಹ ನೀಡಿ ಸಹಕರಿಸಿದರು. ಮುಂಬರುವ ವರ್ಷಗಳಲ್ಲಿ ಇನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಮಾಡಿದ್ದೇವೆ.ರಾಜ್ಯೋತ್ಸವ ಆಚರಣೆಯ ಮೂಲಕ ಕನ್ನಡ ನಾಡು, ನುಡಿ ಇತಿಹಾಸದ ಬಗ್ಗೆ ಪರಭಾಷಿಕರಿಗೆ ಅರಿವುಮೂಡಿಸಿ ಅವರಲ್ಲಿ ಕನ್ನಡ ಪ್ರೇಮದ ಬೀಜ ಹಾಕಬೇಕು ಎನ್ನುವುದೊಂದೆ ನಮ್ಮ ಉದ್ದೇಶ. ಟಿ-ಷರ್ಟ್ ಬಗ್ಗೆ ಮಾಹಿತಿ ನೀಡಿದ ದಟ್ಸ್ ಕನ್ನಡ ಡಾಟ್‍ಕಾಮ್ ಹಾಗು ಅದರ ತಯಾರಕರಿಗೆ ತುಂಬ ಧನ್ಯವಾದಗಳು.

ಐಟು ಕನ್ನಡಿಗರ ಧ್ಯೇಯ ವಾಕ್ಯ : ಎಲ್ಲ ಭಾಷೆಗಳನ್ನು ಪ್ರೀತಿಸು ಕನ್ನಡವನ್ನು ಪೋಷಿಸು. ಜೈ ಕರ್ನಾಟಕ ಮಾತೆ...

-ರವಿಕುಮಾರ್ ವೈ.ಎಂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+