ಡಾಟಾ ಒನ್‌ನ ದರಗಳಲ್ಲಿ ಭರ್ಜರಿ ಕಡಿತ ಎಂಬ ಭರ್ಜರಿ ಸುಳ್ಳು!


ಸರ್ಕಾರಿ ಸಂಸ್ಥೆಯೇ ಹೀಗೆ ಕಿಸೆಗೆ ಕತ್ತರಿ ಹಾಕಿದರೆ ಖಾಸಗಿ ಸಂಸ್ಥೆಗಳು ಸುಮ್ಮನಿದ್ದಾವೇ? ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಬ್ರಾಡ್‌ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯ ಕನಸು ಕಾಣುತ್ತಿರುವವರು ಈ ದರಪಟ್ಟಿಯನ್ನು ಬಲವಾಗಿ ಪ್ರತಿಭಟಿಸಬೇಕು.

  • ಬೇಳೂರು ಸುದರ್ಶನ, ಬೆಂಗಳೂರು
ಆಗಸ್ಟ್‌ 15ರಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಎಸ್‌ಎನ್‌ಎಲ್‌ ಸಂಸ್ಥೆಯು, ತನ್ನ ಬ್ರಾಡ್‌ ಬ್ಯಾಂಡ್‌ ಇಂಟರ್‌ನೆಟ್‌ ಸೇವೆಯಾದ ಡಾಟಾ ಒನ್‌ನ ದರಗಳನ್ನು ಶೇ.50ರಷ್ಟು ಇಳಿಸಿರುವುದಾಗಿ ಭರ್ಜರಿ ಜಾಹೀರಾತುಗಳು ಪ್ರಕಟವಾಗಿವೆ. ಆದರೆ ಈ ಜಾಹೀರಾತು ಸಂಪೂರ್ಣವಾಗಿ ಸುಳ್ಳು ಮಾಹಿತಿಗಳಿಂದ ಕೂಡಿವೆ.

ಈಗ ಡಾಟಾ ಒನ್‌ ಬ್ರಾಡ್‌ ಬ್ಯಾಂಡ್‌ ಗೃಹಸೇವೆಯ ಕನಿಷ್ಠ ದರ 500ರೂಪಾಯಿ ಇದೆ. ಈ ದರದಲ್ಲಿ ತಿಂಗಳಿಗೆ ಒಂದು ಗೆಗಾಬೈಟ್‌(ಅಂದರೆ ಸುಮಾರು 1ಸಾವಿರ ಮೆಗಾಬೈಟ್‌)ಪ್ರಯಾಣದ ಮಾಹಿತಿಯ ಪ್ರವಾಹ ಬಳಸಬಹುದು. ಅಂದರೆ ಒಂದು ರೂಪಾಯಿಗೆ 2ಮೆಗಾಬೈಟ್‌ ಸಿಗುತ್ತದೆ. ಆದರೆ ಈಗ ಬಿಎಸ್‌ಎನ್‌ಎಲ್‌ ಪ್ರಕಟಿಸಿರುವುದು ಹೊಸ ಮಾಸಿಕ 250ರೂಗಳ ಸೇವೆ. ಅದರಲ್ಲಿ ತಿಂಗಳಿಗೆ ಕೇವಲ 400ಮೆಗಾಬೈಟ್‌ ಮಾಹಿತಿ ಪ್ರವಾಹದ ಕೋಟಾ ಇದೆ. ಅಂದರೆ ಒಂದು ರೂಪಾಯಿಗೆ ಕೇವಲ 1.6 ಮೆಗಾಬೈಟ್‌ ಮಾಹಿತಿ ದಕ್ಕುತ್ತದೆ. ಉಳಿದ 600ಮೆಗಾಬೈಟ್‌ಗಳಿಗೆ ತಲಾ 1.40ರೂ. ನಂತೆ ಹೆಚ್ಚುವರಿಯಾಗಿ ಪಾವತಿ ಮಾಡಿದರೆ ತಿಂಗಳಿಗೆ, ಒಂದು ಗೆಗಾಬೈಟ್‌ಗೆ 1090ರೂ ನೀಡಿದಂತಾಗುತ್ತದೆ!

ಮಾಹಿತಿಯ ಪ್ರವಾಹವನ್ನು ಅರ್ಧಕ್ಕಿಂತ ಹೆಚ್ಚು ಕಡಿತ ಮಾಡಿ, ದರವನ್ನು ಅರ್ಧ ಮಾತ್ರ ಕಡಿತ ಮಾಡಿದರೆ ಭರ್ಜರಿ ಇಳಿತ ಎಲ್ಲಿ ಬಂತು?ಒಂದು ಮಸಾಲೆ ದೋಸೆಗೆ ನೀಡುವ ದರದ ಬದಲು ಈಗ ಅರ್ಧಕ್ಕಿಂತ ಕಡಿಮೆ ದೋಸೆಗೆ ಅರ್ಧ ಬೆಲೆ ತೆರಬೇಕಾಗಿದೆ. ಇದು ಹಗಲುದರೋಡೆ ಎಂಬುದು ಇಂಟರ್‌ನೆಟ್‌ ಬಳಕೆದಾರರ ಸಾಮಾನ್ಯ ಅಭಿಪ್ರಾಯ. ಇನ್ನು ಯಾವ ಗಣಿತವನ್ನು ಬಳಸಿದರೂ ಇದು ಕಡಿತವಂತೂ ಆಗುವುದಿಲ್ಲ. ಅರ್ಧಪುಟದ ಜಾಹೀರಾತಿನಲ್ಲಿ ಇಂಥ ಹಸಿ ಸುಳ್ಳನ್ನು ಪ್ರಚಾರ ಮಾಡಿದ ಬಿಎಸ್‌ಎನ್‌ಎಲ್‌ಗೆ ಯಾರು ಕಡಿವಾಣ ಹಾಕುತ್ತಾರೆ?

ಈಗ ಜಿಲ್ಲಾ ಮಟ್ಟದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ನೀಡಲು ಹೊರಟಿರುವ ಬಿಎಸ್‌ಎನ್‌ಎಲ್‌ 250ರೂಗಳ ಪ್ಯಾಕೇಜ್‌ ಮೂಲಕ ಗ್ರಾಮಾಂತರ ಜನರನ್ನು ಹಾಡುಹಗಲೇ ಸುಲಿಗೆ ಮಾಡಲು ಹೊರಟಿದೆ ಅಥವಾ ಜನ ತೆಪ್ಪಗೆ 500ರೂ ಪ್ಯಾಕೇಜನ್ನೇ ಕೊಳ್ಳಲಿ ಎಂಬ ಒತ್ತಡ ತಂತ್ರವೂ ಇದಾಗಿರಬಹುದು.

2004ರಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್‌ ಪ್ರಕಟಿಸಿರುವ ಬ್ರಾಡ್‌ಬ್ಯಾಂಡ್‌ ನೀತಿಯನ್ನು ಬಿಎಸ್‌ಎನ್‌ಎಲ್‌ನ ಈ ದರಪಟ್ಟಿ ಧಿಕ್ಕರಿಸಿದೆ. ಸರಕಾರಿ ಸಂಸ್ಥೆಯೇ ಹೀಗೆ ಕಿಸೆಗೆ ಕತ್ತರಿ ಹಾಕಿದರೆ ಖಾಸಗಿ ಸಂಸ್ಥೆಗಳು ಸುಮ್ಮನಿದ್ದಾವೇ? ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಯ ಕನಸು ಕಾಣುತ್ತಿರುವವರು ಈ ದರಪಟ್ಟಿಯನ್ನು ಬಲವಾಗಿ ಪ್ರತಿಭಟಿಸಬೇಕು.

ಮುಖಪುಟ / ಓದುಗರ ಓಲೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+