ನವೆಂಬರ್ ಬಂದಿದೆ, ಎಚ್ಚರಿಕೆ!
ಕಾಟಾಚಾರಕ್ಕೆ ಕನ್ನಡದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುತ್ತಿರುವ, ಬೆಂಗಳೂರು ದೂರದರ್ಶನದ ಕನ್ನಡ ವಿರೋಧಿ ನೀತಿಗೆ ಇಲ್ಲೊಂದು ಅಸಮಾಧಾನ!
- ಬಿ.ಎಚ್.ಚಂದ್ರಶೇಖರ, ಬೆಂಗಳೂರು.
[email protected]
ಕರ್ನಾಟಕ ಪ್ರಾದೇಶಿಕ ದೂರದರ್ಶನ ಕೇಂದ್ರದಿಂದ ಪ್ರಸಾರವಾಗುವ ಬೆಂಗಳೂರು ಕೇಂದ್ರದ ಕಾರ್ಯಕ್ರಮಗಳನ್ನು ನೀವು ಗಮನಿಸಿರುವಿರಾ?
ಪ್ರಸಾರದ ಸಂದರ್ಭದಲ್ಲಿ ದೂರದರ್ಶನದ ಚಿನ್ಹೆಯ ಜೊತೆಗೆ ಆಂಗ್ಲ ಭಾಷೆಯಲ್ಲಿ ‘ಕರ್ನಾಟಕ’ ಎಂಬುದಾಗಿ ಕೆಲವು ತಿಂಗಳುಗಳಿಂದ ತೋರಿಸಲಾಗುತ್ತಿದೆ. ಇದೇಕೆ ಹೀಗೆ? ಕರ್ನಾಟಕವನ್ನು ಕನ್ನಡ ಲಿಪಿಯಲ್ಲಿಯೇ ತೋರಿಸಬಹುದಲ್ಲ?
ಅಲ್ಲದೇ, ಕನ್ನಡಲಿಪಿಯಲ್ಲಿ ಚಿನ್ಹೆಯ ಜೊತೆಯಲ್ಲಿರುತ್ತಿದ್ದ ಕರ್ನಾಟಕ ಪದವು ಅದೇಕೆ ಆಂಗ್ಲಭಾಷೆಗೆ ರೂಪಾಂತರಗೊಂಡಿತು? ಈ ಪ್ರಶ್ನೆಗೆ ಬೆಂಗಳೂರು ದೂರದರ್ಶನ ಕೇಂದ್ರದ ಅಧಿಕಾರಿಗಳು ಉತ್ತರಿಸುವರೆ?
ಕನ್ನಡದ ಬಗೆಗಿನ ನಿರ್ಲಕ್ಷ್ಯಕ್ಕೆ ಇದೊಂದು ಸಣ್ಣ ಉದಾಹರಣೆ. ಇಂತಹ ಸೂಕ್ಷ್ಮ ಸಂಗತಿಗಳನ್ನು ಕಡೆಗಣಿಸುವುದು ಸಲ್ಲದು. ರಾಜ್ಯೊತ್ಸವದ ಈ ನವೆಂಬರ್ ತಿಂಗಳಿನಲ್ಲಿಯಾದರೂ ಕನ್ನಡಿಗರು ಜಾಗೃತರಾಗಬೇಕು!












Click it and Unblock the Notifications