‘‘ನಮ್ಮ ವಿವಾಹ ವ್ಯವಸ್ಥೆಗೆ ಬಲವಾದ ಬೇರುಗಳಿವೆ’’


ಅನ್ನಿಸಿದಾಗ ಕೊಡವಿಕೊಳ್ಳುವ ಕಲೆ ಅದಲ್ಲ. ಪಾಶ್ಚಿಮಾತ್ಯ ರೀತಿನೀತಿಗಳನ್ನು ಕಾಪಿ ಮಾಡಬೇಡಿ.

ಮಾನ್ಯರೆ,

ಈ ಲೇಖನದಲ್ಲಿ ನಿಜವಾಗಿಯೂ ಲೇಖಕರ ನಿಲವು ಏನು ಎನ್ನುವುದು ಗೊತ್ತಾಗಲಿಲ್ಲ. ‘ಟ್ರಯಲ್‌ ಮ್ಯಾರಿಯೇಜ್‌’ ಮತ್ತು ಮದುವೆಗಳೆರಡರ ಬಗ್ಗೆಯೂ ಮಾತನಾಡಿದ್ದೀರ. ಆದರೆ, ಟ್ರಯಲ್‌ ಮ್ಯಾರಿಯೇಜ್‌ ಯಾವಾಗ ಬೇಕೋ ಆವಾಗ ಕೊಡವಿಕೊಳ್ಳುವುದಕ್ಕೆ ಸೌಲಭ್ಯ ಒದಗಿಸತ್ತೆ ಅಂತಲೂ ಹೇಳ್ತೀರಾ. ‘ಮದುವೆ’ಯಲ್ಲಿ ಗಂಡು ಹೆಣ್ಣಿನ ಸಹಬಾಳ್ವೆಗೆ ಚೌಕಟ್ಟು ಒದಗಿಸುತ್ತದೆ ಅಂತನೂ ಹೇಳ್ತೀರಾ.

ನನ್ನ ಪ್ರಕಾರ, ಗಂಡು-ಹೆಣ್ಣಿನ ಸಹಬಾಳ್ವೆ ದೀರ್ಘಜೀವನಕ್ಕೆ ಹಾಸುತ್ತದೆ. ಯಾವಾಗ ಬೇಕೋ ಆವಾಗ ಕೊಡವಿಕೊಳ್ಳುವ ಸಂಬಂಧ ಅಲ್ಲ ಅದು.

ಭಾರತೀಯ ವಿವಾಹ ವ್ಯವಸ್ಥೆಗೆ ಬಲವಾದ ಬೇರುಗಳಿವೆ. ನಾವು ಪಾಶ್ಚಿಮಾತ್ಯ ರೀತಿನೀತಿಗಳನ್ನು ಅನುಕರಿಸುವ ಪ್ರಮೇಯ ಇಲ್ಲ. ಧನ್ಯವಾದಗಳು.

-ಅರುಣ್‌, ಸಿಟಿ?

ಮಾನ್ಯರೆ,

ನಮ್ಮ ವಿವಾಹ ವ್ಯವಸ್ಥೆ ಯಾವತ್ತೋ ಬಿದ್ದುಹೋಗಿದೆ. ಬಾಯಿಬಿಟ್ಟರೆ ಬಂಡಗೇಡು ಅದಕ್ಕೆ ಸುಮ್ಮನಿರುತ್ತೀವಿ. ಸಾಸಿವೆ ಕಾಳಿನಷ್ಟು ಸಹಬಾಳ್ವೆಯ ಅಂಶಗಳಿಲ್ಲದಿದ್ದರೂ ದಾಂಪತ್ಯ ಜೀವನ ಮುಂದುವರೆಯುವುದು ಭಾರತದಲ್ಲಿ ಮಾತ್ರ. ಹಳೆಯದನ್ನು ನಿರಾಕರಿಸುವುದಕ್ಕೆ ಆಗುವುದಿಲ್ಲ, ಹೊಸದರ ಬಗ್ಗೆ ಭಯ ಮತ್ತು ಅನುಮಾನ. ಇದು ಭಾರತದ ಕತೆ.

-ಶಾಲಿನಿ, ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+