ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ

ನವದೆಹಲಿ, ಮೇ 4: ಭಾರತದಲ್ಲಿ ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಅನಿರೀಕ್ಷಿತವಾಗಿ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರದಲ್ಲಿ 40 ಮೂಲಾಂಕಗಳನ್ನು ಏರಿಕೆ ಮಾಡಿದೆ. ಆ ಮೂಲಕ ದೇಶದಲ್ಲಿ ರೆಪೋ ದರ 4.40ಕ್ಕೆ ಏರಿಕೆಯಾಗಿದೆ.

ಇದು ವಿತ್ತೀಯ ನೀತಿ ಸಮಿತಿಯು (MPC) ರೆಪೊ ದರದಲ್ಲಿ ಅನಿರೀಕ್ಷಿತ ಹೆಚ್ಚಳ ಮಾಡಿದ ಮೊದಲ ನಿದರ್ಶನವಾಗಿದೆ. 2018ರ ಆಗಸ್ಟ್ ತಿಂಗಳ ನಂತರ ರೆಪೋ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿತ್ತು. ಆದರೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಬುಧವಾರ ದಿಢೀರ್ ಸುದ್ದಿಗೋಷ್ಠಿ ಕರೆದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರ ಹೆಚ್ಚಳದ ಬಗ್ಗೆ ಘೋಷಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಈ ನಿರ್ಧಾರದಿಂದ ವೈಯಕ್ತಿಕ ಸಾಲ, ಕಾರು ಸಾಲ, ಗೃಹ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಾಗುವುದರ ಜೊತೆಗೆ ಅವುಗಳ ಇಎಂಐ ಏರಿಕೆಯಾಗುವ ನಿರೀಕ್ಷೆಯಿದೆ. ಅಸಲಿಗೆ ರೆಪೋ ದರ ಎಂದರೇನು?, ರಿವರ್ಸ್ ರೆಪೋ ದರ ಎಂದರೇನು?, ಈ ರೆಪೋ ದರವು ಆರ್ಥಿಕತೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ರೆಪೋ ದರ ಎಂದರೇನು?

ರೆಪೋ ದರ ಎಂದರೇನು?

'REPO' ಎಂದರೆ 'ಮರುಖರೀದಿ ಆಯ್ಕೆ' ಅಥವಾ 'ಮರುಖರೀದಿ ಒಪ್ಪಂದ'. ರೆಪೋ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವ ದರವನ್ನು ಸೂಚಿಸುತ್ತದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಆರ್‌ಬಿಐ ಪ್ರಮುಖ ಸಾಧನಗಳಲ್ಲಿ ರೆಪೋ ದರವೂ ಒಂದು ಎಂದು ಪರಿಗಣಿಸಲಾಗುತ್ತದೆ. ದೇಶದ ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರವನ್ನೇ ರೆಪೋ ದರ ಎಂದು ಕರೆಯಲಾಗುತ್ತದೆ.

ರಿವರ್ಸ್ ರೆಪೋ ಎಂದರೇನು?

ರಿವರ್ಸ್ ರೆಪೋ ಎಂದರೇನು?

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ವಾಣಿಜ್ಯ ಹಾಗೂ ಇತರೆ ಬ್ಯಾಂಕುಗಳು ತಾವು ಇರಿಸುವ ಹಣದ ಮೇಲೆ ಪಡೆಯುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ.

ಗೃಹ, ಕಾರು ಸಾಲದ ಮೇಲಿನ ಇಎಂಐ ಹೆಚ್ಚಳ

ಗೃಹ, ಕಾರು ಸಾಲದ ಮೇಲಿನ ಇಎಂಐ ಹೆಚ್ಚಳ

ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದ ಸಂದರ್ಭಗಳಲ್ಲಿ, ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲದ ವೆಚ್ಚವು ಕಡಿಮೆ ಇರುತ್ತದೆ. ಆದ್ದರಿಂದ, ರೆಪೋ ದರವನ್ನು ಕಡಿಮೆಗೊಳಿಸಿದಾಗ ಬ್ಯಾಂಕುಗಳು ಸಾಮಾನ್ಯವಾಗಿ ಗ್ರಾಹಕರಿಂದ ಸಾಲಗಳಿಗೆ ಕಡಿಮೆ ಬಡ್ಡಿದರವನ್ನು ಹಾಕುತ್ತವೆ. ಆದರೆ, ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿರುವುದರಿಂದ ಬ್ಯಾಂಕ್‌ಗಳು ಗೃಹ ಸಾಲ, ಕಾರು ಸಾಲ ಮತ್ತಿತರ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಬ್ಯಾಂಕುಗಳು ಬಡ್ಡಿದರಗಳನ್ನು ಹೆಚ್ಚಿಸಿದರೆ, ಸಮಾನ ಮಾಸಿಕ ಕಂತುಗಳು (ಇಎಂಐಗಳು) ಸಹ ಹೆಚ್ಚಾಗುತ್ತವೆ, ಇದು ಸಾಲಗಾರರ ಮೇಲೆ ಪರಿಣಾಮ ಬೀರುತ್ತದೆ.

ಎಫ್‌ಡಿ ಮೇಲಿನ ಬಡ್ಡಿದರ ಏರಿಕೆ ಸಾಧ್ಯತೆ

ಎಫ್‌ಡಿ ಮೇಲಿನ ಬಡ್ಡಿದರ ಏರಿಕೆ ಸಾಧ್ಯತೆ

ರೆಪೋ ದರವನ್ನು ಹೆಚ್ಚಿಸುವ ಆರ್‌ಬಿಐ ಕ್ರಮವು ಉಳಿತಾಯ ಖಾತೆಗಳಲ್ಲಿ ಮತ್ತು ಸ್ಥಿರ ಠೇವಣಿಗಳ ಮೂಲಕ (ಎಫ್‌ಡಿ) ಹಣವನ್ನು ಇಡುವ ಠೇವಣಿದಾರರಿಗೆ ಉತ್ತಮವಾಗಿದೆ. ಬ್ಯಾಂಕುಗಳು ಎಫ್‌ಡಿಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುವ ಸಾಧ್ಯತೆಯಿದೆ.

ರೆಪೋ ದರ ಏರಿಕೆ ಬಗ್ಗೆ ಶಕ್ತಿಕಾಂತ್ ದಾಸ್ ಹೇಳಿದ್ದೇನು?

ರೆಪೋ ದರ ಏರಿಕೆ ಬಗ್ಗೆ ಶಕ್ತಿಕಾಂತ್ ದಾಸ್ ಹೇಳಿದ್ದೇನು?

"ಇಂದು ರೆಪೋ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಮೇ 2020ರ ದರದ ವಿರುದ್ಧದ ಕ್ರಮದಂತೆ ಕಾಣಬಹುದು. ಹಣದುಬ್ಬರ ಹೆಚ್ಚಳ ಮತ್ತು ಹಣದುಬ್ಬರ ನಿರೀಕ್ಷೆಯನ್ನು ತಹಬದಿಗೆ ತರುವ ಗುರಿಯನ್ನು ವಿತ್ತೀಯ ನೀತಿಯ ಕ್ರಮವು ಹೊಂದಿದೆ. ಹಣದುಬ್ಬರದ ಹೆಚ್ಚಳವು ಆರ್ಥಿಕತೆಯ ಬೆಳವಣಿಗೆಗೆ ಹಾನಿಕಾರಕವಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರವು ಸುಮಾರು 7 ಪ್ರತಿಶತದಷ್ಟಿತ್ತು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+