• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಬರವಣಿಗೆಯ ಮಾನಸಿಕ ಪ್ರಯೋಜನಗಳು

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಕಂಪ್ಯೂಟರ್ ಬಹಳ ನಿಧಾನವಾಗಿತ್ತು. ಇಂಟರ್ನೆಟ್ ಸರಿಯಾಗೇ ಕೆಲಸ ಮಾಡುತ್ತಿದೆ. ಕೆಲಸದ ಭರದಲ್ಲೆ ಬಹಳಷ್ಟು ಟ್ಯಾಬ್, ಪುಟಗಳು ತೆರೆದೇ ಇದ್ದವು. ಇದು ನನ್ನ ಗಮನಕ್ಕೇ ಬಂದಿರಲಿಲ್ಲ. ಇಂಟರ್ನೆಟ್ ಡೇಟಾ ಬಳಕೆಯಾಗುತ್ತಲೇ ಇತ್ತು. ಸಿಸ್ಟಮ್ ಅನೇಕ ಹಾಡುಗಳು, ಫೋಟೋಗಳು, ಹಳೆಯ ಅನೇಕ ಬೇಡದ ದತ್ತಾಂಶಗಳಿಂದ ತುಂಬಿ ಹೋಗಿತ್ತು, ಬೇಡವಾದುದನ್ನು ಅಳಿಸಿ ಬೇಕಾದ ಫೈಲ್‌ಗಳನ್ನು ಮಾತ್ರ ಬೇರೆ ಪೆನ್ ಡ್ರೈವ್ ಅಲ್ಲಿ ಹಾಕಿದೆ. ಬೇಡದ ಅನೇಕ ಟ್ಯಾಬ್‌ಗಳನ್ನು ಮುಚ್ಚಿದ ಮೇಲೆ, ಕಂಪ್ಯೂಟರ್‌ ಮತ್ತೆ ಮೊದಲ ವೇಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿತು.

ನಮ್ಮ ಮನಸ್ಸಿನಲ್ಲಿಯೂ ಅನೇಕ ವಿಚಾರಗಳು/ಯೋಚನೆಗಳು ಒಮ್ಮೆಲೇ ಒಟ್ಟೊಟ್ಟಿಗೆ ಆವರಿಸುತ್ತವೆ. ಶಕ್ತಿ ಹಾಗು ಸಮಯ ಹೆಚ್ಚಾಗಿಯೇ ಬಳಕೆಯಾಗುತ್ತಿದೆ‌. ಹತ್ತು ಹಲವಾರು ಪ್ರಶ್ನೆಗಳು, ಗೊಂದಲಗಳು, ಸಂತೋಷದ ವಿಚಾರಗಳು, ಕವನ ಕವಿತೆಗಳಿಗೆ ನಮ್ಮ ಶಕ್ತಿ, ಸಮಯ ಸಣ್ಣ ಸಣ್ಣ ಹಲವು ಭಾಗಗಳಾಗಿ ಮೇಲಿನ ವಿಚಾರಗಳಿಗೆ ಬಳಕೆಯಾಗುತ್ತದೆ. ಆದರೆ ಶಕ್ತಿ, ಸಮಯ- ಸರಿಯಾದ ಯೋಚನೆಗೆ ಹಾಗು ಸರಿಯಾದ ಪ್ರಮಾಣದಲ್ಲಿ ಬಳಕೆ ಆಗುವಂತೆ ಮಾಡುವುದು ನಮ್ಮ ಕೈಯಲ್ಲಿದೆ.

 ಯಾವ ವಿಚಾರಕ್ಕೆ ಹೆಚ್ಚಿನ ಗಮನ ಅಗತ್ಯ ಇಲ್ಲ?

ಯಾವ ವಿಚಾರಕ್ಕೆ ಹೆಚ್ಚಿನ ಗಮನ ಅಗತ್ಯ ಇಲ್ಲ?

ಯಾವುದಕ್ಕೆ ಗಮನ ಕೊಡಬೇಕು, ಯಾವ ವಿಚಾರಕ್ಕೆ ಹೆಚ್ಚಿನ ಗಮನ ಅಗತ್ಯ ಇಲ್ಲ ಎಂದು ವಿಂಗಡಿಸದಿದ್ದರೆ ಅನೇಕ ಉಪಯುಕ್ತ ಯೋಚನೆಗಳು ಹಾಗು ಯೋಜನೆಗಳು ಕಳೆದುಹೋಗುತ್ತವೆ. ನಮ್ಮ ಎಲ್ಲಾ ಯೋಚನೆಗಳೂ ಮುಖ್ಯವೇ ಎಂದುಕೊಂಡರೂ, ಒಮ್ಮೆಗೆ, ಒಂದು ವಿಚಾರ ಮಾತ್ರ ತೆಗೆದುಕೊಳ್ಳಬಹುದು. ಇದು ಸಮಸ್ಯೆ ಯನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಹಾಗು ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರಿ. ಒತ್ತಡದಲ್ಲಿ ಅನೇಕ ವಿಚಾರಗಳನ್ನು ಮರೆಯುವ ಸಾಧ್ಯತೆಯೂ ಇದೆ.

ನೆನಪಿದೆಯಾ ಮೊದಲ ಲವ್ ಲೆಟರ್ ಬರೆದ ಸಿಹಿ ಸಿಹಿ ಘಳಿಗೆ?!ನೆನಪಿದೆಯಾ ಮೊದಲ ಲವ್ ಲೆಟರ್ ಬರೆದ ಸಿಹಿ ಸಿಹಿ ಘಳಿಗೆ?!

 ಬರವಣಿಗೆ ಮೂಲಕ ಭಾವನೆ, ಅನುಭವ ಹೊರತಂದಾಗ

ಬರವಣಿಗೆ ಮೂಲಕ ಭಾವನೆ, ಅನುಭವ ಹೊರತಂದಾಗ

ಕೆಲವೊಮ್ಮೆ ಆಫೀಸಿನಲ್ಲಿ ಕೆಲಸ ಮಾಡುವಾಗ, ಗಿಡಕ್ಕೆ ನೀರು ಹಾಕುವಾಗ, ಪ್ರಯಾಣಿಸುವಾಗ, FM ಕೇಳುವಾಗ ಏರ್‌ಪೋರ್ಟ್ ಅಲ್ಲಿ ಕುಳಿತಿರುವಾಗ, ಅಡುಗೆ ಮಾಡುವಾಗ, ಟಿವಿ ನೋಡುವಾಗ, ಯಾರಾದರೊಬ್ಬರನ್ನು ಭೇಟಿಯಾದಾಗ ಹೀಗೆ ಹಲವಾರು ಸಂದರ್ಭಗಳಲ್ಲಿ, ಅನೇಕ ಮಾಹಿತಿಗಳು ಸಿಗುತ್ತವೆ ಹಾಗು ಹೊಸ ಕಲಿಕೆ, ಅನುಭವ, ಯೋಜನೆ ಹೊಳೆಯುತ್ತದೆ. ನಮ್ಮ ಈ ಎಲ್ಲಾ ಮಾಹಿತಿ, ಅನುಭವ, ಕಲಿಕೆ, ಯೋಜನೆಗಳು ಬರವಣಿಗೆ ಮೂಲಕ ಹೊರತಂದಾಗ ಹೆಚ್ಚಾಗಿ ನೆನಪಿನಲ್ಲಿ ಉಳಿಯುತ್ತದೆ ಹಾಗು ತೃಪ್ತಿ ನೀಡುತ್ತದೆ.

 ಅಯ್ಯೋ ಮರೆತೇ ಹೋಯಿತು

ಅಯ್ಯೋ ಮರೆತೇ ಹೋಯಿತು

ಬರವಣಿಗೆಯನ್ನು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಯೋಚನೆಗಳನ್ನು ಪೋಷಿಸಿ ಅದನ್ನು ಸಾಕಾರಗೊಳಿಸಬಹುದು.
ನಿಮಗೂ ಹೀಗೆ ಆಗಿರಬಹುದು.
• ಮಳೆ ನೀರು ಸಂರಕ್ಷಣೆಯ ಬಗ್ಗೆ ನೆನ್ನೆಯಷ್ಟೇ ಒಂದೊಳ್ಳೆ ಯೋಚನೆ ಬಂತು, ಈಗ ಮರೆತೇ ಹೋಯಿತು.
• ದಸರಾ ಬಗ್ಗೆ ಎರಡು ಸಾಲುಗಳ ಕವಿತೆ ರಚಿಸಿದೆ, ನೆನಪಾಗುತ್ತಿಲ್ಲ ಈಗ...
• ಅಂಗಡಿಗೆ ಹೋದರೆ ಈ ಸಾಮಾನುಗಳು ತರಬೇಕು ಎಂದು ಎಷ್ಟು ನೆನಪು ಮಾಡಿಕೊಂಡರೂ, ಮರೆತೇ ಹೋಯಿತು.
ಒಂದು ಸಣ್ಣ ಆಲೋಚನೆ, ಯೋಜನೆ ಜೀವನದ ದಿಕ್ಕನ್ನೇ ಬದಲಿಸಬಹುದು. ಬರವಣಿಗೆ ಆಲೋಚನೆಗಳಿಗೆ ಆಕಾರ ನೀಡುವುದು ಖಂಡಿತ.

ಮೇಲಿನ ಉದಾಹರಣೆಗಳು ಬಹಳ ಸಾಮಾನ್ಯವಾದರೂ ದಿನ ನಿತ್ಯದ ಬದುಕಿನಲ್ಲಿ ನಾವು ಅನುಭವಿಸುತ್ತೇವೆ. ಯೋಚನೆಗಳು ಬಂದಾಗ ಒಂದು ಪುಸ್ತಕ ಅಥವಾ ಹಾಳೆಯಲ್ಲಿ ಬರೆದಿಡುವುದರಿಂದ ನಿತ್ಯ ಚಟುವಟಿಕೆಗಳು ಸಹಜವಾಗಿ ಒತ್ತಡವಿಲ್ಲದೆ ಸಮಯಕ್ಕೆ ಸರಿಯಾಗಿ ನಡೆಯುವಂತೆ ಮಾಡಬಹುದು. ಒತ್ತಡವೂ ಕಡಿಮೆಯಾಗುತ್ತದೆ. ಮನಸಿನ ಪುಟಗಳು ಖಾಲಿ ಇದ್ದು ಬೇರೆ ವಿಚಾರಗಳಿಗೆ ಸ್ಥಳವಿರುತ್ತದೆ.

Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?

 ದಿನಚರಿ ಬರವಣಿಗೆ ಮಾನಸಿಕ ಆರೋಗ್ಯಕ್ಕೆ ಸಹಕಾರಿ

ದಿನಚರಿ ಬರವಣಿಗೆ ಮಾನಸಿಕ ಆರೋಗ್ಯಕ್ಕೆ ಸಹಕಾರಿ

ನಮ್ಮಲ್ಲಿ ಹಲವರು ಪ್ರತಿ ದಿನ ದಿನಚರಿ ಬರೆಯುತ್ತಾರೆ. ಕೆಲವೊಮ್ಮೆ ಎರಡೇ ಸಾಲುಗಳಿರಬಹುದು. ಒಮ್ಮೊಮ್ಮೆ ಎರಡು ಪುಟಗಳು ಬರೆಯಬಹುದು. ಇದು ಅವರ ಅಂದಿನ ಆಲೋಚನೆಗಳು, ಭಾವನೆಗಳು, ಅಭಿಪ್ರಾಯಗಳು ಹಾಗು ಅನುಭವದ ಮೇಲೆ ನಿರ್ಧಾರವಾಗುತ್ತದೆ. ದಿನಚರಿಗೆ ಅದರದೇ ಆದ ವಿಶಿಷ್ಟತೆ ಇದೆ. ಮಾಹಿತಿಯಾಗಲೀ, ಸಂತೋಷವಾಗಲೀ, ದುಃಖವಾಗಲೀ ಯಾರೊಂದಿಗಾದರೂ ಹಂಚಿಕೊಂಡರೆ ಮನಸ್ಸು ಆರೋಗ್ಯವಾಗಿರುತ್ತದೆ. ಹಾಗೆಯೇ ದಿನಚರಿ ಬರವಣಿಗೆಯೂ ಕೂಡ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.

ಬರವಣಿಗೆಯ ಪ್ರಯೋಜನಗಳು

ಬರವಣಿಗೆಯ ಪ್ರಯೋಜನಗಳು

• ತಮ್ಮ ವೃತ್ತಿಯನ್ನಾಗಿಸಿಕೊಳ್ಳಬಹುದು
• ಚಿಂತನೆಯ ಪ್ರವೃತ್ತಿಯನ್ನು ಅಭಿವೃದ್ದಿಪಡಿಸುತ್ತದೆ- ವಿಶ್ಲೇಷಣಾತ್ಮಕ, ಸಮಸ್ಯೆ ಪರಿಹರಿಸುವ ಕೌಶಲ್ಗಗಳನ್ನು ಹೆಚ್ಚಿಸುತ್ತದೆ.
• ಅನಿಸಿಕೆ ಹಾಗು ಅಭಿಪ್ರಾಯಗಳನ್ನು ಸೂಕ್ತವಾಗಿ ವ್ಯಕ್ತಪಡಿಸಬಹುದು.
• ವಿಭಿನ್ನ ಶೈಲಿಯ ಬರವಣಿಗೆ , ಹೆಚ್ಚು ಹೆಚ್ಚು ಓದುವಂತೆ ಪ್ರೇರೇಪಿಸುತ್ತದೆ.
• ನಮ್ಮ ಆಲೋಚನೆಗಳು ಹಾಗು ಭಾವನೆಗಳನ್ನು ಬರೆಯುವುದರಿಂದ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
• ಬರವಣಿಗೆ ಹೆಚ್ಚಿನ ಓದಿಗೆ ಪ್ರೋತ್ಸಾಹಿಸುತ್ತದೆ. ಎಷ್ಟು ಬರೆಯುತ್ತೇವೋ ಅಷ್ಟೇ ಕಲಿಯುತ್ತೇವೆ ಕೂಡ.
• ನಮ್ಮ ಭಾವನಾತ್ಮಕ ಶಬ್ದಕೋಶವು ವಿಸ್ತರಿಸುತ್ತದೆ. ಇದು ಸಂದೇಶ ಹಾಗು ಭಾವನೆಗಳನ್ನು ಸ್ಪಷ್ಟವಾಗಿ ತಲುಪಿಸಲು ನೆರವಾಗುತ್ತದೆ.
• ಏಕಾಗ್ರತೆಯನ್ನು ಬಲಪಡಿಸುತ್ತದೆ ಹಾಗು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನೆರವಾಗುತ್ತದೆ.
• ಉತ್ಪಾದಕತೆಯನ್ನು ಹೆಚ್ಚಿಸುತ್ತದೆ: ಬರವಣಿಗೆ ಮೆದುಳಿನ ನರಕೋಶಗಳನ್ನು ಸಕ್ರಿಯಗೊಳಿಸುತ್ತದೆ ಇದು ಅಂದುಕೊಂಡ ಗುರಿಗಳನ್ನು ಸಾಧಿಸುವಲ್ಲಿ ಸಹಕಾರಿ.
• ಬರವಣಿಗೆ ಕಲ್ಪನಾಶಕ್ತಿಯನ್ನು ಹೆಚ್ಚಿಸುತ್ತದೆ‌. ಸೃಜನಶೀಲತೆ ಉತ್ತಮವಾಗುತ್ತದೆ.
• ವಿವರಣಾ ಕೌಶಲ್ಯ ಸುಧಾರಿಸುತ್ತದೆ. ಸಂತೋಷ ತೃಪ್ತಿಯ ಭಾವನೆಗಳನ್ಮು ಹೆಚ್ಚಿಸುತ್ತದೆ.
• ಸಂವಹನ ಕೌಶಲ್ಯ ಹಾಗು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
• ಬರವಣಿಗೆ ಪ್ರತೀ ಯೋಚನೆಗಳೂ ಬೇರೆ ಬೇರೆ ದೃಷ್ಟಿಕೋನದಿಂದ ಅರ್ಥೈಸಿಕೊಳ್ಳಲು ನೆರವಾಗುತ್ತದೆ.
• ಬರವಣಿಗೆಯು ಮಾನಸಿಕ ಹಾಗು ಭಾವನಾತ್ಮಕ ಸಮಸ್ಯೆಗಳನ್ನು ಗುಣಪಡಿಸುವಲ್ಲಿ "ಚಿಕಿತ್ಸೆ" ಯಾಗಿದೆ.

ಏನಿದು ಇಳಿವಯಸ್ಸಿನಲ್ಲಿ ಕಾಡುವ Empty Nest Syndrome?ಏನಿದು ಇಳಿವಯಸ್ಸಿನಲ್ಲಿ ಕಾಡುವ Empty Nest Syndrome?

 ಸಂತೋಷದ ಕ್ಷಣಗಳನ್ನು ಮೆಲುಕು ಹಾಕಬಹುದು

ಸಂತೋಷದ ಕ್ಷಣಗಳನ್ನು ಮೆಲುಕು ಹಾಕಬಹುದು

• ಬರವಣಿಗೆ ಮನರಂಜನಾಕಾರಿಯೂ ಹೌದು. ನೆನಪುಗಳನ್ನು , ಅನುಭವಗಳನ್ನು ಸಂರಕ್ಷಿಸಿ, ಸಂತೋಷದ ಕ್ಷಣಗಳನ್ನು ಮೆಲುಕು ಹಾಕಬಹುದು.
• ವ್ಯಾಯಾಮದಿಂದ ದೇಹ ಚಟುವಟಿಕೆಯಾಗಿ ಇರುವಂತೆ, ಬರವಣಿಗೆಯು "ಚಿಂತನೆಯ ವ್ಯಾಯಾಮ" ( thinking exercise) ದಿಂದ ನಾವು ಮಾನಸಿಕ ಚುರುಕಾಗಿ, ಚಟುವಟಿಕೆ ಇಂದ ಇರುವಂತೆ ಮಾಡುತ್ತದೆ.
• ಬರವಣಿಗೆಯು ಕೃತಜ್ಞತೆ ಭಾವನೆಯನ್ನು ಹೆಚ್ಚಿಸುತ್ತದೆ.
• ಬರವಣಿಗೆಯು ನಮ್ಮ ಒತ್ತಡದ "ಮಾನಸಿಕ ಟ್ಯಾಬ್" ಗಳನ್ನು ಮುಚ್ಚುತ್ತದೆ. ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.

ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!

ಬರವಣಿಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವಲ್ಲಿ ಸಹಕಾರಿ. ನಮ್ಮ ಖಾಸಗಿ ಭಯ, ಭಾವನೆಗಳು, ಆಲೋಚನೆಗಳನ್ನು ಮುಕ್ತವಾಗಿ ಹೊರಹಾಕಬಹುದು. ಆಲೋಚನೆಗಳಿಗೊಂದು ಸ್ಪಷ್ಟತೆ ಸಿಗುತ್ತಾ ಹೋಗುತ್ತದೆ. ನಮ್ಮ ಬರವಣಿಗೆಯ ಸಮಯವನ್ನು ನಮ್ಮ ವೈಯುಕ್ತಿಕ ವಿಶ್ರಾಂತಿ ಸಮಯವನ್ನಾಗಿ( me time) ನೋಡಬಹುದು. ಒಂದು ಸಣ್ಣ ಪುಸ್ತಕ ಹಾಗು ಪೆನ್ ಸದಾ ಜೊತೆಗಿರಲಿ. ಒಮ್ಮೆ ಪ್ರಯತ್ನಿಸಿ

English summary
What are the Psychological benefits of Writing, how it will enhance thinking exercise by Rekha Belvadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X