ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೃದ್ಧಾಪ್ಯದೊಂದಿಗೆ ಕಾಮಾಕಾಂಕ್ಷೆಯೂ ಕುಸಿಯುವುದೇ?; ಕೆಲವು ತಪ್ಪು ಕಲ್ಪನೆಗಳು...

By ಡಾ. ಎ. ಶ್ರೀಧರ್, ಮನಶಾಸ್ತ್ರಜ್ಞ
|
Google Oneindia Kannada News

ಲೈಂಗಿಕ ಆಸಕ್ತಿ ಮತ್ತು ನಿರಾಸಕ್ತಿಗಳು ವ್ಯಕ್ತಿಯ ಜೀವನದುದ್ದಕ್ಕೂ ಒಂದೇ ರೀತಿ ಇರುವುದಿಲ್ಲ. ಲೈಂಗಿಕ ನಡೆನುಡಿಗಳ ಮೇಲೆ ಸಮಾಜದ ನೀತಿ, ನಿಯಮಗಳ ಪ್ರಭಾವ ಇರುವುದರಿಂದ ಲೈಂಗಿಕ ಸ್ವಭಾವಗಳು ವಯೋಮಾನದ ಏರಿಕೆಗೆ ಅನುಗುಣ ಎನ್ನುವ ರೀತಿ ಬದಲಾದಂತೆ ವ್ಯಕ್ತಗೊಳ್ಳುತ್ತದೆ. ವೃದ್ಧಾಪ್ಯದಲ್ಲಿಯೂ ಕಾಮಾಸಕ್ತಿಗಳು ಅಷ್ಟೇನು ಹೀನವಾಗಿರುವುದಿಲ್ಲವೆನ್ನುವುದನ್ನು ಬಲಪಡಿಸುವ ವೈಜ್ಞಾನಿಕ ಸಂಶೋಧನೆಗಳು ಇವೆ. ಆದರೆ ಹಿರಿಯತನದಲ್ಲಿ ವ್ಯಕ್ತಗೊಳ್ಳುವ ಕಾಮಾಂಕ್ಷೆಯ ರೀತಿಯನ್ನು ಪ್ರಚೋದಿಸುವಂತಹ ವರ್ತನೆಗಳಿಗೂ ವಯಸ್ಕತನದಲ್ಲಿ ಕಂಡುಬರುವ ಕಾಮಪ್ರೇರಣೆಗೂ ವ್ಯತ್ಯಾಸಗಳು ಇವೆ ಎನ್ನುತ್ತವೆ ಅಧ್ಯಯನಗಳು.

ಬಹಳ ಮುಖ್ಯವಾಗಿ ಮನೆಯ ಪರಿಸರವೂ ಹಿರಿಯರ ಲೈಂಗಿಕ ಅಭಿಲಾಷೆಗಳನ್ನು ಹತ್ತಿಕ್ಕುತ್ತವೆ. ಉದಾಹರಣೆಗೆ, ಮಧ್ಯಮ ವರ್ಗದ ವಿದ್ಯಾವಂತರ ಕುಟುಂಬಗಳಲ್ಲಿಯೂ ಹಿರಿಯರಿಗೆ ಅಗತ್ಯವಿರುವ ಏಕಾಂತವನ್ನು ಸಂಭ್ರಮಿಸುವುದಕ್ಕೆ ಅಗತ್ಯವಿರುವ ಸಮಯ, ಸ್ಥಳದ ಕೊರತೆ. ಮಕ್ಕಳ ಪಾಲನೆ, ಪೋಷಣೆಯಲ್ಲಿ ಹೆಚ್ಚು ಸಮಯ ತೊಡಗಿಸಿಕೊಂಡು ವಯಸ್ಕತನವನ್ನು ಕಳೆಯುವ ರೀತಿಯೂ ಹಿರಿಯತನದಲ್ಲಿ ಅಗತ್ಯವಿರುವ ಲೈಂಗಿಕ ಒತ್ತಡಗಳನ್ನು ಅದುಮಿರಿಸಿಕೊಳ್ಳುವಂತೆ ಮಾಡುತ್ತದೆ. ಅದರ ದುಷ್ಪರಿಣಾಮಗಳು ದೈಹಿಕ ತೊಂದರೆಗಳ ಮೂಲಕ ಹೊರಬಂದರೂ ಅದರ ನಿವಾರಣೆಯ ಪ್ರಯತ್ನಗಳು ಕಡಿಮೆ. ಮುಂದೆ ಓದಿ...

ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತುಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು

 ಶರೀರದೊಂದಿಗೆ ಮನದ ಆಸಕ್ತಿಗಳೂ ಕುಸಿಯುವುದಿಲ್ಲ

ಶರೀರದೊಂದಿಗೆ ಮನದ ಆಸಕ್ತಿಗಳೂ ಕುಸಿಯುವುದಿಲ್ಲ

ಹಿರಿಯರ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಪೂರ್ವಗ್ರಹಗಳು ಕುಟುಂಬಗಳಲ್ಲಿ ಹಾಗೆಯೇ ಮುಂದುವರೆಯುತ್ತವೆ. ಯೌವನದಲ್ಲಿ ತಮ್ಮ ಹಿರಿಯರು, ವೃದ್ಧಾಪ್ಯದ ಬಗ್ಗೆ ವ್ಯಕ್ತಪಡಿಸುತ್ತಿದ್ದ ಪೂರ್ವಗ್ರಹಗಳಿಗೆ ತಾವೇ (ಹಿರಿಯರಾದಾಗ) ಸಿಕ್ಕಿಕೊಂಡರೂ ಅದರ ನಿವಾರಣೆಯತ್ತ ಪ್ರಯತ್ನಸಿದಿರುವುದು ದುರದೃಷ್ಟಕರ. ಅವೈಜ್ಞಾನಿಕ ಮತ್ತು ತಪ್ಪು ತಿಳಿವಳಿಕೆಗಳು ವೃದ್ಧಾಪ್ಯ ಆರೋಗ್ಯಕರವಾಗಿ ಇರದಂತೆ ಮಾಡಬಲ್ಲದು. ವಯೋಮಾನ ಏರಿದಂತೆಲ್ಲ, ಕುಸಿಯುವ ಶರೀರದಂತೆ ಮನದ ಆಸಕ್ತಿಗಳೂ ಕುಸಿಯುತ್ತವೆ ಎನ್ನುವುದನ್ನು ಅಲ್ಲಗಳೆಯುತ್ತವೆ ವೈಜ್ಞಾನಿಕ ಸಮೀಕ್ಷೆಗಳು: ಮುಖ್ಯವಾಗಿ, ಆರೋಗ್ಯವಂತರ ವಯಸ್ಕತನದಲ್ಲಿ ಲೈಂಗಿಕ ನಡೆನುಡಿಗಳನ್ನು ಪ್ರೇರೇಪಿಸುವ ಗುಣಗಳೆಂದರೆ:
* ಲಿಂಗಾಂಗಗಳ ಉದ್ರೇಕದಿಂದ ಕಾಣಿಸಿಕೊಳ್ಳುವ ಬಯಕೆ, ಸಂತಾನೋತ್ಪತ್ತಿಯ ಅಗತ್ಯ
* ಕಾಮಾಕರ್ಷಣೆ, ಉದ್ರೇಕ ಬಯಸುವ ಮನಸು.
* ಕಾಮಾಕಾಂಕ್ಷಿಗಳಿಂದ ಪರಸ್ಪರ ಪ್ರಚೋದನೆ ಮತ್ತು ಯೌವನದ ಸಹಜ ಮನೋಶಾರೀರಿಕ ಲಕ್ಷಣಗಳು.

 ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಆಸಕ್ತಿಯ ರೀತಿ...

ವೃದ್ಧಾಪ್ಯದಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಆಸಕ್ತಿಯ ರೀತಿ...

* ಉದ್ರಿಕ್ತ ಮನಸು ಇರದಿರುವುದು
* ಹುಮ್ಮಸ್ಸು, ಬಯಕೆಗಳಲ್ಲಿ ಯೌವನದ ಲಕ್ಷಣಗಳು ಗಟ್ಟಿಯಾಗಿದೆ ಎನ್ನುವ ಮನೋಭಾವ
* ಕಾಮಾಕಾಂಕ್ಷೆ ಮನಸಿನ ಉಲ್ಲಾಸ, ಉತ್ಸಾಹದ ಭಾವಗಳನ್ನು ಉತ್ತಮ ಮಟ್ಟದಲ್ಲಿ ಇರಿಸುತ್ತದೆ ಎನ್ನುವ ನಂಬಿಕೆ
* ಸಂಗಾತಿಯೊಂದಿಗೆ ಸಮಯ ಕಳೆಯುವುದರ ಮೂಲಕ ಪಕ್ವವೆನ್ನುವಂತಹ ಪ್ರೀತಿ, ವಾತ್ಸಲ್ಯ ಸಿಗುವುದು
* ಮನೋಬಲವನ್ನು ಹೆಚ್ಚಿಸಿ, ಜಿಗುಪ್ಸೆ, ನಿರಾಸಕ್ತಿ, ಅಸಹನೆ, ಅಸಮಾಧಾನ ಇರದಿರುವುದು
* ಬದುಕಿನ ಬಗ್ಗೆ, ತನ್ನ ಬಗ್ಗೆ ಮೂಡುವ ನಕಾರಾತ್ಮಕ ವರ್ತನೆಗಳಿಗೆ ಕಡಿವಾಣ
* ಅನಾರೋಗ್ಯದ ಭೀತಿ, ಸಾವಿನ ಅಂಜಿಕೆ, ಕುಸಿದ ಆತ್ಮಸ್ಥೈರ್ಯದ ಭಾವಗಳನ್ನು ದೂರ ಇರಿಸುವುದು
* ಅನ್ಯೋನ್ಯತೆ, ಗೆಳೆತನದ ಭಾವಗಳಿಂದ ಸಿಗುವ ಒಳತೃಪ್ತಿ ಮತ್ತು ಪರಿಪಕ್ವತೆಯ ಭಾವ
* ಅಂತರಂಗದಲ್ಲಿ ನೆಮ್ಮದಿ ಮತ್ತು ಪರಿಪೂರ್ಣತಾ ಭಾವ ತುಂಬಿರುವುದು
* ಕುಸಿದ ದೇಹದ ಬಗ್ಗೆ ಮೂಡುವ ಅನಾದರಣೆ ಇರದಿರುವುದು
* ಶರೀರದ ಸದೃಢತೆ ಉಳಿಸಿಕೊಳ್ಳಲು ತಪ್ಪದೇ ಮಾಡುವ ವ್ಯಾಯಾಮ, ಯೋಗಾಭ್ಯಾಸ ಮತ್ತು ಚಿಂತನೆಗಳು

ಯಾವುದೇ ಪ್ರತಿರೋಧವಿಲ್ಲದೆ ಒಬ್ಬನೇ ವ್ಯಕ್ತಿ ಅತ್ಯಾಚಾರ ಮಾಡಲು ಅಸಾಧ್ಯ: ಬಾಂಬೆ ಹೈಕೋರ್ಟ್ಯಾವುದೇ ಪ್ರತಿರೋಧವಿಲ್ಲದೆ ಒಬ್ಬನೇ ವ್ಯಕ್ತಿ ಅತ್ಯಾಚಾರ ಮಾಡಲು ಅಸಾಧ್ಯ: ಬಾಂಬೆ ಹೈಕೋರ್ಟ್

 ಹಿರಿಯರ ಕಾಮಾಕಾಂಕ್ಷೆ ವರ್ತನೆಗಳ ಬಗ್ಗೆ ಕೆಲ ತಪ್ಪು ಕಲ್ಪನೆಗಳು ಹೀಗಿವೆ...

ಹಿರಿಯರ ಕಾಮಾಕಾಂಕ್ಷೆ ವರ್ತನೆಗಳ ಬಗ್ಗೆ ಕೆಲ ತಪ್ಪು ಕಲ್ಪನೆಗಳು ಹೀಗಿವೆ...

* ವೃದ್ಧಾಪ್ಯ ಎಂದಾಕ್ಷಣ ಹಿತ-ಸುಖದ ಸ್ಥಿತಿಗಳಿಂದ ದೂರ ಸರಿಯಬೇಕು ಎನ್ನುವ ಸಾಮಾಜಿಕ ಮನೋಭಾವ
* ತಮ್ಮ ಲೈಂಗಿಕ ನಿಷ್ಕ್ರಿಯೆಯ ಬಗ್ಗೆ ಮಾತನಾಡಲು ಸಾಧ್ಯವಾಗದಿರುವುದು
* ವೃದ್ಧಾಪ್ಯದ ಮನೋಸಾಮರ್ಥ್ಯಗಳ ಬಗ್ಗೆ ಇರುವ ನಕಾರಾತ್ಮಕ ವರ್ತನೆಗಳು
* ತಜ್ಞ ಸಲಹೆಗಾರರ ಕೊರತೆ
* ಪೂರ್ವಗ್ರಹ ಪೀಡಿತರ ಮಾತು, ನೀತಿಗಳಲ್ಲಿ ನಂಬಿಕೆ
* ಕಾಮಾಕಾಂಕ್ಷೆ ಮೂಡುವ ಗೊಂದಲ ಮತ್ತು ಪಾಪಪ್ರಜ್ಞೆ
* ಲೈಂಗಿಕ ಆಸಕ್ತಿಯನ್ನು ಗಮನಿಸಿ ಗೌರವಿಸದ ಬಾಳಸಂಗಾತಿ
* ಲೈಂಗಿಕ ವಿಷಯದ ಬಗ್ಗೆ ನೇರ ಹಾಗೂ ಮುಕ್ತವಾಗಿ ಮಾತಾಡಲಾರದಂತಹ ಮನೆಯ ವಾತಾವರಣ

 ಹಿರಿಯರಿಗೂ ಪ್ರೈವಸಿ ಮುಖ್ಯ

ಹಿರಿಯರಿಗೂ ಪ್ರೈವಸಿ ಮುಖ್ಯ

* ಹಿರಿಯ ನಾಗರೀಕರಿಗೂ ಏಕಾಂತ ಮುಖ್ಯ ಎನ್ನುವುದನ್ನು ಕಡೆಗಾಣಿಸುವಂತಿಲ್ಲ.
* ವಯಸ್ಸಾದ ಮೇಲೆ ಎಲ್ಲವೂ ಮುಗಿದು ಹೋಯಿತು ಎನ್ನುವ ಹತಾಶಾ ಮನೋಭಾವಕ್ಕೆ ಶರಣಾಗುವುದು
* ಲೈಂಗಿಕತೆ ಕೇವಲ ಯೌವನ ಮತ್ತು ವಯಸ್ಕತನಕ್ಕೆ ಸೀಮಿತ ಎನ್ನುವ ತಪ್ಪುಕಲ್ಪನೆ
* ಕಾಮಾಕಾಂಕ್ಷೆಯ ಒತ್ತಡಗಳು ಇದ್ದರೂ ಅವುಗಳ ನಿವಾರಣೆಯತ್ತ ಪ್ರಯತ್ನಿಸದಿರುವುದು
* ಲಿಂಗಾಂಗಗಳ ಕಾರ್ಯ ರೀತಿಯನ್ನು ತಪ್ಪಾಗಿ ಗ್ರಹಿಸಿ ನಿಷ್ಕ್ರಿಯತೆ, ನಿರಾಸಕ್ತಿಯ ಮುಖವಾಡ ಧರಿಸುವುದು ಮತ್ತು ತಮ್ಮ ಬದುಕಿಗೆ ಅತ್ಯಗತ್ಯ ನೆಮ್ಮದಿಯನ್ನು ಕಾಮಾಂಕ್ಷೆಯ ಮೂಲಕ ಪಡೆಯಬಹುದು ಎನ್ನುವುದರ ಬಗ್ಗೆ ಇರುವ ಭಯ, ಆತಂಕ ಮತ್ತ ಅದರಿಂದಲೇ ಹುಟ್ಟಿಕೊಳ್ಳುವ ತಾತ್ಸಾರ.
ಹಾಗೆ ನೋಡಿದರೆ ನಮ್ಮ ಹಿರಿಯ ದೇವಾನುದೇವತೆಗಳ ಮೂರ್ತಿಗಳಲ್ಲಿ ದಂಪತಿಗಳು ಜೊತೆಯಲ್ಲಿರುವಂತಹದ್ದೇ ಸಾಮಾನ್ಯ. ಅಷ್ಟೇಅಲ್ಲ ಅವರನ್ನು ಅರ್ಚಿಸುವ ಶ್ಲೋಕಗಳಲ್ಲಿಯೂ ಪತಿ-ಪತ್ನಿಯರಿಬ್ಬರ ಹೆಸರನ್ನು ಸ್ಮರಿಸಲಾಗುತ್ತದೆ. ಹೀಗೆ ನಮ್ಮ ಸಂಪ್ರದಾಯದ ವಿಧಿವಿಧಾನಗಳಲ್ಲಿ (ವೃದ್ಧಾಪ್ಯದಲ್ಲಿಯೂ) ಆಪ್ತಸಾಂಗತ್ಯಕ್ಕೆ ಮಹತ್ವ ನೀಡಿರುವುದು ಸ್ಪಷ್ಟವಾಗಿ ಮತ್ತು ನಿರಂತರವಾಗಿ ಗೋಚರಿಸುತ್ತದೆ. ಆದರೆ ಜನರ ಬದುಕಿನ ಪದ್ಧತಿಗಳಲ್ಲಿ ಅನುಕರಣೆಯಾಗದೆ, ಅನಾದರಣೆಗೆ ಗುರಿಯಾಗಿರುವುದು ದೌರ್ಭಾಗ್ಯದ ಸಂಗತಿ.

English summary
There are some misconceptions about sex and old age. Psychologist Dr. A. Sridhar explains about sexual problems with age and its consequences,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X