ಮಹಿಳೆ ಸಬಲೀಕರಣ ನೀತಾ ಅಂಬಾನಿಯಿಂದ ಡಿಜಿಟಲ್ ವೇದಿಕೆ

ಮುಂಬೈ, ಮಾರ್ಚ್ 08: ಅಂತಾರಾಷ್ಟ್ರೀಯ ಮಹಿಳಾ ದಿನ ಪ್ರಯುಕ್ತ ಈ ವರ್ಷ ನೀತಾ ಮುಕೇಶ್ ಅಂಬಾನಿ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಅವಳ ಸರ್ಕಲ್ ಎಂಬ ಪರಿಕಲ್ಪನೆ ಯಲ್ಲಿ 'ಹರ್ ಸರ್ಕಲ್' ಎಂಬ ವಿನೋತನ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಡಿಜಿಟಲ್ ಕ್ರಾಂತಿಯ ಸಹಾಯದಿಂದ, ಮೊದಲ ಬಾರಿಗೆ ವಿಶ್ವ ಸಹೋದರಿಯ ಭಾವದಲ್ಲಿ ಮಹಿಳೆಯರಿಗೆ ಸುರಕ್ಷಿತ ತಾಣ ನೀಡುವುದು ಉದ್ದೇಶವಾಗಿದೆ. ಡಿಜಿಟಲ್ ವೇದಿಕೆಯ ಮೂಲಕ ಮಹಿಳೆಯರ ಸಬಲೀಕರಣ ಸಮನ್ವಯ, ಸಹಭಾಗಿತ್ವದ ಪಾಲ್ಗೊಳ್ಳುವಿಕೆಯನ್ನು ಸದೃಢಗೊಳಿಸುವ ಕಾರ್ಯಕ್ರಮ ಇದಾಗಿದೆ.

ಹರ್ ಸರ್ಕಲ್ ಡೆಸ್ಕ್ ಟಾಪ್ ಹಾಗೂ ಮೊಬೈಲ್ ಫೋನುಗಳಿಗೆ ಹೊಂದುವಂತಹ ಜಾಲತಾಣವಾಗಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಜಿಯೊ ಆ್ಯಪ್ ಸ್ಟೋರ್ ನಲ್ಲಿ ಲಭ್ಯ ಇರುವ ಉಚಿತ ಆ್ಯಪ್ ಆಗಿದೆ.

Womens Day 2021: Nita Mukesh Ambani launches ‘Her Circle’

ನೊಂದಣಿಯಾಗಿರುವ ಸದಸ್ಯರಿಗೆ ಪಾಲ್ಗೊಳ್ಳುವಿಕೆ ಸಂಪೂರ್ಣ ಉಚಿತವಾಗಿದೆ. ಸದ್ಯಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯ ಇದ್ದು ಕ್ರಮೇಣ ಉಳಿದ ಭಾಷೆಯಲ್ಲಿಯೂ ಆರಂಭಿಸಲಾಗುವುದು.

ಹರ್ ಸರ್ಕಲ್ ಹೆಸರೇ ಸೂಚಿಸುವಂತೆ ಇದು ಅವಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಯಾವುದೇ ಗಡಿಗಳ, ಎಲ್ಲೆಗಳ ಪರಿವೆಯೇ ಇಲ್ಲದೆ ಭಾರತೀಯ ಮಹಿಳೆಯರು ಎಲ್ಲರ ಜೊತೆಗೂಡಬಹುದಾಗಿದೆ. ಸಮಾಜದ ಎಲ್ಲ ಸ್ತರಗಳ ವರ್ಗಗಳ ಮಹಿಳೆಯರು ತಮ್ಮ ಆದ ಆಕಾಂಕ್ಷೆ, ಕನಸು, ಕನವರಿಕೆಗಳನ್ನಿಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದಾಗಿದೆ.

ಈ ವೇದಿಕೆಯನ್ನು ಆರಂಭಿಸುವ ಸಂದರ್ಭದಲ್ಲಿ ರಿಲಯನ್ಸ್ ಫೌಂಡೇಶನ್ ನ ಅಧ್ಯಕ್ಷೆ ನೀತಾ ಅಂಬಾನಿ ಅವರು '' ಮಹಿಳೆಯರು ‌ಮಹಿಳೆಯರೊಂದಿಗೆ ಒಗ್ಗೂಡಿ ಶ್ರಮಿಸಿದರೆ ಚಮತ್ಕಾರಿಕ, ಅತ್ಯದ್ಭುತವಾದುದನ್ನು ಸಾಧಿಸಬಹುದಾಗಿದೆ ಎಂಬುದು‌ ನನಗೆ ತಿಳಿದಿದೆ. ನಾನು ನನ್ನ ಬದುಕಿಡೀ ಇಂತಹ ಸಬಲ ಮಹಿಳೆಯರ ನಡುವೆ ಇದ್ದೆ. ಅವರಿಂದ ಅಂತಃಕರುಣೆ, ಪರಸ್ಪರ ಗೌರವ ಹಾಗೂ ಸಕಾರಾತ್ಮಕ ಗುಣಗಳನ್ನೇ ಕಲಿತೆ. ಮತ್ತುಇದಕ್ಕೆ ಪ್ರತಿಯಾಗಿ ನಾನುನಕಲಿತಿದ್ದೆಲ್ಲವನ್ನೂ ಇತರರಿಗೆ ಕಲಿಸುತ್ತ ಸಾಗಿದೆ.

Womens Day 2021: Nita Mukesh Ambani launches ‘Her Circle’

ಹನ್ನೊಂದು ಜನ‌ ಮಕ್ಕಳಿರುವ ಕುಟುಂಬದಲ್ಲಿ ಬೆಳೆದ ನಾನು, ಮಗಳಾಗಿ ಕಲಿತ‌ ಮೊದಲ‌ ಪಾಠವೆಂದರೆ ನನ್ನನ್ನು ನಾನು‌ ನಂಬಿಕೆ ಇಡಬೇಕು. ಈ ಆತ್ಮವಿಶ್ವಾಸವು ನನ್ನನ್ನು ಕಾಪಿಟ್ಟಿದೆ. ನನ್ನ ಮಗಳಿಂದ ಬೇಷರತ್ತ್ ಅದ ಪ್ರೀತಿಯನ್ನು ಪಡೆದೆ.ಅಷ್ಟೇ ಅಲ್ಲ, ನನ್ನ ಕನಸುಗಳನ್ನು ನನಸಾಗಿಸುವ ಆತ್ಮವಿಶ್ವಾಸವನ್ನೂ ಪಡೆದೆ.

ನನ್ನ ಸೊಸೆ ಶ್ಲೋಕಾ ಅವರಿಂದ ಸಹಾನುಭೂತಿ ಹಾಗೂ ಸಹನೆಯನ್ನು ಕಲಿತೆ. ರಿಲಯನ್ಸ್ ಪ್ರತಿಷ್ಠಾನದ ಮಹಿಳೆಯರಾಗಿರಲಿ ಅಥವಾ ರಾಷ್ಟ್ರೀಯ, ಅಂತರರಾಷ್ಟ್ರೀಯ ನಾಯಕಿಯರೊಂದಿಗೆ ಕೆಲಸ‌ಮಾಡುವಾಗ ಆಗಲಿ,ನಮ್ಮ ಅನುಭವಗಳನ್ನು ಹಂಚಿಕೊಂಡಿದ್ದೇವೆ. ಪ್ರತಿ ಕಥನದಲ್ಲೂ ಕೊನೆಗೊಂದು ಸಂಘರ್ಷ ಕಂಡಿದ್ದೇನೆ.

ಈಗ ಹರ್ ಸರ್ಕಲ್.ಇನ್ ಮೂಲಕ ಪ್ರತಿ‌ಮಹಿಳೆಗೂ ಅಗತ್ಯವಾದ ಬೆಂಬಲ ನೀಡುವ ವ್ಯವಸ್ಥೆಯನ್ನು ಆರಂಭಿಸಲು ಆನಂದವೆನಿಸುತ್ತಿದೆ. ಪ್ರತಿಮಹಿಳೆಯೂ ಈ ಸಮೂಹವನ್ನು ಸೇರ್ಪಡೆಯಾಗಲಿ. ಸ್ವಯಂ ನಿರ್ಮಾಣದಲ್ಲಿ ತೊಡಗಿಕೊಳ್ಳಲಿ. ಜಾಗತಿಕ ತಾಣವಾಗಿರುವ ಇದರಲ್ಲಿ ಪ್ರತಿದಿನ ಪ್ರತಿಕ್ಷಣವೂ ಹೊಸ ಯೋಚನೆಗಳನ್ನು, ಹೊಸ ಯೋಜನೆಗಳನ್ನು ಸ್ವಾಗತಿಸುತ್ತದೆ. ಪ್ರತಿ ಸಂಸ್ಕೃತಿಗಳ, ಸಮುದಾಯಗಳ, ದೇಶಗಳ ಮಹಿಳೆಯರು ಸ್ವತಂತ್ರವಾಗಿ ಪಾಲ್ಗೊಳ್ಳಲಿ. ಈ ವೇದಿಕೆಯ ಮೂಲಕ ವಿಶ್ವ ಸಹೋದರಿ ತತ್ವ ಮುಂಚೂಣಿಗೆ ಬರುತ್ತದೆ. ಎಲ್ಲರಿಗಾಗಿ ಎಲ್ಲರೂ ಬೆಂಬಲಿಸುವಂತಾಗುತ್ತದೆ.

ಹರ್ ಸರ್ಕಲ್ ಕಾರ್ಯ ವೈಖರಿ ಹೇಗೆ?

ನೆಟ್ ವರ್ಕಿಂಗ್ ಮತ್ತು ಗುರಿಸಾಧನೆಗೆ ಇದು ಏಕಗವಾಕ್ಷಿಯಂತೆ ಕಾರ್ಯ ನಿರ್ವಹಣೆ ಮಾಡುತ್ತದೆ. ಸಾಮಾಜಿಕ ವೇದಿಕೆಯ ಮೂಲಕ ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನಿಲ್ಲಿ ನೀಡಲಾಗುತ್ತದೆ. ಮಹಿಳೆಯರನ್ನು ಬೆಸೆದಿಡುವ, ಪರಸ್ಪರ ಚರ್ಚಿಸುವ ವೇದಿಕರಯಾಗಲಿದೆ.

ಈ ವೇದಿಕೆಯಲ್ಲಿ ಸ್ತ್ರೀ ಸಂವೇದನೆಯ ಸಕಾರಾತ್ಮಕ ಅಂಶಗಳಿರುವ ವೀಡಿಯೊ ನೋಡಬಹುದು. ಲೇಖನಗಳನ್ನು, ಬರೆಹಗಳನ್ನು ಓದಬಹುದು.

ಜೀವನತಂತ್ರಗಳನ್ನು ಹೇಳುವ, ಜೀವನಶೈಲಿ, ಸ್ವಾಸ್ಥ್ಯ, ಆರೋಗ್ಯ, ಹಣಕಾಸು, ವ್ಯಕ್ತಿತ್ವ ವಿಕಸನ, ಸಮುದಾಯ ಸೇವೆ, ಸೌಂದರ್ಯ, ಫ್ಯಾಷನ್, ಮನರಂಜನೆ, ಸೃಜನಶೀಲ ರಚನೆಗಳನ್ನು ಹಂಚಿಕೊಳ್ಳಬಹುದು. ಸಾರ್ವಜನಿಕ ಬದುಕಿನಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಲು ಅವಕಾಶ ನೀಡುತ್ತದೆ. ಇದಕ್ಕಾಗಿ‌ ಮಹಿಳೆಯರೇ ನಡೆಸುವ ಎನ್ ಜಿಒ ಹಾಗೂ ಇತರ ಸಂಸ್ಥೆಗಳೊಡನೆ ಕೈಜೋಡಿಸ ಬಹುದಾಗಿದೆ.

ಇದಷ್ಟೆ ಅಲ್ಲದೆ, ಪರಿಣತರೊಂದಿಗೆ ಸಮಾಲೋಚಿಸಬಹುದಾಗಿದೆ. ಆರೋಗ್ಯ, ಸ್ವಾಸ್ಥ್ಯ, ಹಣಕಾಸು, ನಾಯಕತ್ವಗುಣ, ಕೌಶಲಾಭಿವೃದ್ಧಿ ಮುಂತಾದ ಗುಣಗಳನ್ನು ಬೆಳೆಸಿಕೊಳ್ಳಲು ಅನುವಾಗುತ್ತದೆ. ಉದ್ಯೋಗಾವಕಾಶಗಳನ್ನು ಸಹ ತಮ್ನ ಅರ್ಹತೆಗೆ ತಕ್ಕಂತೆ ಪಡೆಯಬಹುದಾಗಿದೆ. ವೃತ್ತಿ ಕೌಶಲಗಳನ್ನು ಬೆಳೆಸಿಕೊಳ್ಳಲು ಅನುಕೂಲಕರವಾಗಿದೆ. ವಾಣಿಜ್ಯ ಕ್ಷೇತ್ರದ ಪರಿಣತರಿಂದ ತನಗಾಗಿ ಪಾಠಗಳನ್ನು ಪಡೆಯಬಹುದಾಗಿದೆ. ಈ ವೇದಿಕೆಯಲ್ಲಿ ಮಹಿಳೆಯರ ಯಶೋಗಾಥೆಯನ್ನು, ಸಂಘರ್ಷದ ಕಥನಗಳನ್ನು ಹಂಚಿಕೊಳ್ಳ ಬಹುದಾಗಿದೆ. ಇವು ಉಳಿದವರಿಗೆ ಪ್ರೇರಣೆ ನೀಡುವಂತೆ ಇರುತ್ತವೆ.

ಖಾಸಗಿ, ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ, ಸುರಕ್ಷಿತ: ವಿಡಿಯೊ ಹಾಗು ಲೇಖನಗಳಿಗೆ ಸಂಬಂಧಿಸಿದಂತೆ ಸರ್ವರಿಗು‌ ಮುಕ್ತವಾಗಿರುತ್ತವೆ.ಈ ವೇದಿಕೆ ಕೇವಲ‌ ಮಹಿಳೆಯರಿಗೆ ಮಾತ್ರ ಮೀಸಲಾಗಿರುತ್ತದೆ. ಸಾಮಾಜಿಕ ಕೊಂಡಿಗಳೂ ಅವಳ ಸುರಕ್ಷೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತವೆ. ಮಹಿಳೆಯರಿಗಾಗಿ ಮಾತ್ರ ಇರುವುದರಿಂದ ಸಮಾನ ಮನಸ್ಕ ರು, ಸಮಾನವಯಸ್ಕರರು, ತಮ್ಮ ಆಸಕ್ತಿ ಅಭಿರುಚಿ ಗೆ ಅನುಗುಣವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಸ್ನೇಹವಲಯವನ್ನು ಬೆಳೆಸಿಕೊಳ್ಳಬಹುದಾಗಿದೆ. ಆರೋಗ್ಯ ಹಾಗೂ ಹಣಕಾಸಿನಂಥ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಾಸನೀಯ ಪರಿಣತರೊಂದಿಗೆ ವೈಯಕ್ತಿಕ ಚಾಟ್ ರೂಮುಗಳ ಮೂಲಕ ಸಮಾಲೋಚಿಸಬಹುದಾಗಿದೆ.

ಉತ್ತಮ ಹವ್ಯಾಸಗಳ ಆ್ಯಪ್: ಸುರಕ್ಷಿತ ಸಮಾಲೋಚನೆ, ಸಂತೋಷ‌ನೀಡುವ ಸಾಂಗತ್ಯ, ಸಮಾನ‌ಮನಸ್ಕರ‌ ಸಹಚರ್ಯ ನೀಡುವುದರೊಂದಿಗೆ ನಿಮ್ಮ ಹವ್ಯಾಸ ಹಾಗೂ ಚಟುವಟಿಕೆಗಳ ‌ನಿಗಾವಹಿಸುವ ಆ್ಯಪ್ ಸಹ ನೀಡಲಾಗುತ್ತದೆ. ಹಣಕಾಸಿನ ಬಗೆಗೆ ನಿಗಾ ವಹಿಸುವ, ಋತುಚಕ್ರದ ಸಾಧ್ಯತೆಗಳನ್ನು ತಿಳಿಸುವ, ಮುಟ್ಟಿನ ಅವಧಿಯನ್ನು ಗಮನದಲ್ಲಿರಿಸುವ, ಮುಟ್ಟಿನ ಅವಧಿಯ ಲೆಕ್ಕಾಚಾರ, ಫಲವಂತಿಕೆಯ ದಿನಗಳಿದ್ದಾಗ ಎಚ್ಚರಿಸುವ, ಗರ್ಭಾವಸ್ಥೆಯ ಮಾರ್ಗಸೂಚಿಗಳನ್ನೂ ನೀಡಲಾಗುತ್ತದೆ. (ನೀತಾ ಅಂಬಾನಿ ಕಚೇರಿಯಿಂದ ಪ್ರಕಟಿತ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+