ಲಾಭದತ್ತ ವರ್ಸೇ ಇನ್ನೋವೇಶನ್: AI ಆಧಾರಿತ ಬೆಳವಣಿ-ಕಾರ್ಯಕ್ಷಮತೆ, 30 ಕೋಟಿ ಬಳಕೆದಾರರೊಂದಿಗೆ ಪ್ರಗತಿ

ಡೈಲಿಹಂಟ್ ಹಾಗೂ ಮತ್ತು ಜೋಶ್ ಅಪ್ಲಿಕೇಶನ್‌ಗಳ ಮಾತೃ ಸಂಸ್ಥೆಯಾದ 'ವರ್ಸ್ ಇನ್ನೋವೇಶನ್' (VerSe Innovation) ಈಗ ಸ್ಥಿರ ಲಾಭದಾಯಕ ಬೆಳವಣಿಗೆಯತ್ತ ದಾಪುಗಾಲಿಟ್ಟಿದೆ. ವೆಚ್ಚವನ್ನು ಕಡಿತಗೊಳಿಸುವ ಮೂಲಕ ಕಂಪನಿಯು ಈಗ ಸುಸ್ಥಿರ ಲಾಭದ ಹಾದಿಯಲ್ಲಿದೆ. ಉತ್ತರ ಕಾರ್ಯಕ್ಷಮತೆಯೊಂದಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ನೇತೃತ್ವದಲ್ಲಿ ಬೆಳವಣಿಗೆ ಹೊಂದಿದೆ. ಎಐ ಅನ್ನು ಪ್ರಮುಖ ಶಕ್ತಿಯನ್ನಾಗಿ ಮಾಡಿಕೊಂಡಿದೆ ಎಂದು ಸಹ-ಸಂಸ್ಥಾಪಕ ಉಮಂಗ್ ಬೇಡಿ ಅವರು ಡಾ. ಅನ್ನುರಾಗ್ ಬಾತ್ರಾ ಅವರೊಂದಿಗಿನ ಸಂವಾದಲ್ಲಿ ಮಾಹಿತಿ ನೀಡಿದ್ದಾರೆ.

ಕಂಪನಿಯು ಕಳೆದ ವರ್ಷ 30 ಕೋಟಿಗೂ (300 ಮಿಲಿಯನ್‌) ಅಧಿಕ ಹೆಚ್ಚು ಮಾಸಿಕ ಸಕ್ರಿಯ ಬಳಕೆದಾರರನ್ನು ತಲುಪಿದೆ. ವರ್ಷದ ಹಿಂದೆ ನಗದು ಬಳಕೆಯನ್ನು ತೀವ್ರವಾಗಿ ಕಡಿಮೆ ಮಾಡಿತು. ಇದೀಗ ಮಾಸಿಕ ಬ್ರೇಕ್ ಹಂತವನ್ನು ತಲುಪುತ್ತಿದೆ. ಡಿಜಿಟಲ್ ಬಳಕೆಯಲ್ಲಿ ಹೆಚ್ಚಾಗಿದ್ದು, ಸಣ್ಣ ವಿಡಿಯೋಗಳ ಹೆಚ್ಚಳದ ಬಳಿಕ ತ್ವರಿತ, ಬಂಡವಾಳವು ತೀವ್ರವಾಗಿ ವಿಸ್ತರಣೆಯಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಬದಲಾವಣೆಯು ಭಾರತದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ. ವೆಚ್ಚ ತಗ್ಗಿಸುತ್ತಿದ್ದಂತೆ ಬೆಳವಣಿಯನ್ನು ಗಮನಾರ್ಹವಾಗಿ ವೃದ್ಧಿಸಿದೆ.

VerSe Innovation

ಕೃತಕ ಬುದ್ಧಿಮತ್ತೆ (ಎಐ) ಸದ್ಯ ವರ್ಸೆ ಕಂಪನಿಯ ಕಾರ್ಯತಂತ್ರದ ಕೇಂದ್ರಬಿಂದುವಾಗಿದೆ. ಕಂಪನಿಯು ತನ್ನ ವಿಷಯ, ಜಾಹೀರಾತು ಮತ್ತು ಕಾರ್ಯಾಚರಣೆಯ ಸ್ಟ್ಯಾಕ್, ವಿಷಯ ಸೇವನೆ, ಮಾಡರೇಶನ್ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳಲ್ಲಿ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ಜಾಹೀರಾತುದಾರರ ಆದಾಯ ಮತ್ತು ಉತ್ಪಾದಕತೆಯಲ್ಲಿ ಜನರೇಟಿವ್ ಪರಿಹಾರಗಳ ಮೂಲಕ ಸುಧಾರಣೆ ಮಾಡುವ ಗುರಿ ಹೊಂದಿದೆ. ಜಾಹೀರಾತು-ತಂತ್ರಜ್ಞಾನ ವೇದಿಕೆ ಸೇರಿದಂತೆ ಎಐ ನೇತೃತ್ವದಲ್ಲಿ ಕಂಪನಿ ಸಾಮರ್ಥ್ಯಗಳನ್ನು ವೃದ್ಧಿಸುತ್ತದೆ. ಹೂಡಿಕೆಗಳು ದಕ್ಷತೆಯನ್ನು ಸುಧಾರಿಸುವುದಲ್ಲದೆ ಹೊಸ ಆದಾಯದ ಹರಿವಿಗೆ ಅವಕಾಶ ಸೃಷ್ಟಿಸುತ್ತದೆ. ವರ್ಸೆ ಮುಂದಿನ ಹಂತದ ಬೆಳವಣಿಗೆಗೆ ತೆರೆದುಕೊಂಡಿದೆ ಎಂದು ತಿಳಿಸಿದರು.

ಮಾರುಕಟ್ಟೆಯ ವಾಸ್ತವ ಮತ್ತು ಭವಿಷ್ಯದ ಹಾದಿ

ಭಾರತದ ಡಿಜಿಟಲ್ ಆರ್ಥಿಕತೆ, ವಾಸ್ತವ ಅಂಶಗಳ ಬಗ್ಗೆ ಮಾತನಾಡಿದ ಬೇಡಿ ಅವರು, ಭಾರತ ದೇಶವು ಬೃಹತ್ ಬಳಕೆದಾರನ್ನು ನೀಡಿದೆ. ಹಣ ಗಳಿಕೆಯು ತುಲನಾತ್ಮಕವಾಗಿ ಸಣ್ಣ ಗ್ರಾಹಕರಲ್ಲಿ ಕೇಂದ್ರೀಕೃತವಾಗಿದೆ. ಡಿಜಿಟಲ್ ಜಾಹೀರಾತು ಆದಾಯದ ಗಮನಾರ್ಹ ಪಾಲು ಜಾಗತಿಕ ತಂತ್ರಜ್ಞಾನ ವೇದಿಕೆಗಳಿಂದ ಬರುತ್ತಿದೆ. ಇದು ದೇಶೀಯ ಆಟಗಾರರಿಗೆ ಮಹತ್ವದ ವೇದಿಕೆಯಾಗಿದೆ. ಇದಕ್ಕೆ ಪ್ರತಿಯಾಗಿ ವರ್ಸೆ ಕಂಪನಿಯ ಪ್ರೀಮಿಯಂ ಗ್ರಾಹಕರು, ಚಂದಾದಾರಿಕೆ-ನೇತೃತ್ವದ ಕೊಡುಗೆಗಳು ಮತ್ತು ಕಾರ್ಯಕ್ಷಮತೆ-ಚಾಲಿತ ಜಾಹೀರಾತು ಪರಿಹಾರಗಳ ಮೇಲೆ ಆಕರ್ಷಿತರಾಗಿದ್ದು, ಅವರಿಗೆಲ್ಲ ಜಾಗತಿಕ ವೀಕ್ಷಣೆಯ ಅವಕಾಶವನ್ನು ಎಐ ನೀಡುತ್ತದೆ.

VerSe Innovation

IPO ಗೆ ಬರಲು ಸಿದ್ಧತೆ

ವರ್ಸೆ ಇನ್ನೋವೇಶನ್ ಕಂಪನಿಯು ಮುಂದಿನ ಹಂತದಲ್ಲಿ ಇದೇ ರೀತಿ ಲಾಭದಾಯಕ ಮತ್ತು ಸ್ಥಿರ ಕಾರ್ಯಕ್ಷಮತೆ ಮೂಲಕ ಸಾಗಲು ಆದ್ಯತೆ ನೀಡುತ್ತಿದೆ. ಮುಂದಿನ ಹಂತಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕ ಪಟ್ಟಿಯು ಕಂಪನಿಯ ದೀರ್ಘಾವಧಿಯ ಮಾರ್ಗಸೂಚಿಯ ಭಾಗವಾಗಿ ಉಳಿದಿದೆ, ಮುಂದಿನ ಕೆಲವು ವರ್ಷಗಳಲ್ಲಿ ಷೇರುಪೇಟೆಗೆ ಕಾಲಿಡಲಿದ್ದು IPO ಗೆ ಬರಲು ಸಿದ್ಧತೆ ಮಾಡಿಕೊಂಡಿದೆ.

ಡಿಜಿಟಲ್ ವ್ಯವಸ್ಥೆಯು ವಿಕಸನಗೊಳ್ಳುತ್ತಿದ್ದಂತೆ ಅದಕ್ಕೆ ತಕ್ಕಂತೆ ವರ್ಸೆ ಇನ್ನೋವೇಶನ್ ತಂತ್ರಜ್ಞಾನ ಮತ್ತು ಜಾಹೀರಾತು, ಎಐ ಮೂಲಕ ತನ್ನ ಸ್ಥಾನವನ್ನು ಭವಿಷ್ಯದಲ್ಲಿ ಭದ್ರಗೊಳಿಸಲು ಮುಂದಾಗಿದೆ.

ವರ್ಸೆ ಇನ್ನೋವೇಶನ್ ಕಂಪನಿ ಕುರಿತು

ವರ್ಸೆ ಇನ್ನೋವೇಶನ್‌ನ ತಂತ್ರಜ್ಞಾನವು ಡಿಜಿಟಲ್ ವಿಭಜನೆ ನಿವಾರಿಸಲು ಪರಿಹಾರಾತ್ಮಕ ಸೇತುವೆ ರೀತಿ ಕೆಲಸ ಮಾಡುತ್ತಿದೆ. ಆರಂಭದಿಂದಲೂ, ವರ್ಸೆ ತಂತ್ರಜ್ಞಾನವನ್ನು ಬಳಸಿಕೊಂಡು ಲಕ್ಷಾಂತರ ಗ್ರಾಹಕರಿಗೆ ವಿಷಯ ವಸ್ತು, ಅಗತ್ಯಗಳನ್ನು ಪೂರೈಸುತ್ತಿದೆ. ಇದರ ವಿಶಿಷ್ಟ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಆಳವಾದ ಕಲಿಕಾ ತಂತ್ರಜ್ಞಾನಗಳು ಲಕ್ಷಾಂತರ ಬಳಕೆದಾರರಿಗೆ ಅವರ ಇಷ್ಟದ ಆದ್ಯತೆಗಳು, ವೈಯಕ್ತಿಕಗೊಳಿಸಿದ ವಿಷಯವನ್ನು ತಲುಪಿಸುತ್ತಿದೆ. ಇಂದು ವರ್ಸೆ ಇನ್ನೋವೇಶನ್‌ನ ಸ್ವಾಮ್ಯದ ತಂತ್ರಜ್ಞಾನ ವೇದಿಕೆಯು ಭಾರತದಾದ್ಯಂತ ನೂರಾರು ಮಿಲಿಯನ್ ಬಳಕೆದಾರರು ಹೊಂದಿದ್ದು, ಡೈಲಿಹಂಟ್‌ನಲ್ಲಿ ತಮ್ಮ ಸ್ಥಳೀಯ ಭಾಷೆಯಲ್ಲಿ ವಿಷಯ/ಸುದ್ದಿಗಳನ್ನು ಒದಗಿಸುತ್ತಿದೆ.

ವರ್ಸೆ ತನ್ನ ಜೋಶ್‌ ಅಪ್ಲಿಕೇಷನ್‌ಗೆ ಶಕ್ತಿ ನೀಡುತ್ತದೆ. ಇದರೊಂದಿಗೆ ವರ್ಸೇ ಕಂಪನಿಯು NexVerse.ai, ಡೈಲಿಹಂಟ್ ಪ್ರೀಮಿಯಂ, ಜೋಶ್‌ನ ಆಡಿಯೋ ಕಾಲಿಂಗ್ ಆಂಡ್ ಆಡಿಯೋ ಸ್ಟೋರೀಸ್ ಮತ್ತು ವರ್ಸೇ ಜೊತೆಗೂಡಿ ಎಐ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳ ಸಂಯೋಜಿತ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಇವೆಲ್ಲವು ಒಟ್ಟಾಗಿ ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಗ್ರಾಹಕರು, ವಿಷಯ ಮತ್ತು ಬ್ರ್ಯಾಂಡ್‌ಗಳನ್ನು ನಿರೂಪಿಸುತ್ತವೆ.

ಭಾರತದಲ್ಲಿ ಗ್ರಾಹಕರನ್ನು ಕೇಂದ್ರೀಕರಿಸಿದ ಈ ಅಪ್ಲಿಕೇಶನ್‌ಗಳೊಂದಿಗೆ ವರ್ಸೇ ಇನ್ನೋವೇಶನ್, ಸ್ಥಳೀಯ ಭಾಷೆಗಳಿಗೆ ತಂತ್ರಜ್ಞಾನದಲ್ಲಿ ಮೊದಲ ಕೇಂದ್ರಬಿಂದುವಾಗಿದೆ. CPP ಹೂಡಿಕೆಗಳು, ಒಂಟಾರಿಯೊ ಶಿಕ್ಷಕರ ಪಿಂಚಣಿ ಯೋಜನೆ (OTPP), ಕತಾರ್ ಹೂಡಿಕೆ ಪ್ರಾಧಿಕಾರ (QIA), ಗೋಲ್ಡ್‌ಮನ್ ಸ್ಯಾಚ್ಸ್, ಗ್ಲೇಡ್‌ಬ್ರೂಕ್ಸ್, ಫಾಲ್ಕನ್ ಎಡ್ಜ್ ಕ್ಯಾಪಿಟಲ್, ಸೋಫಿನಾ, ಬಿ ಕ್ಯಾಪಿಟಲ್ ಗ್ರೂಪ್, ಆಲ್ಫಾವೇವ್, ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ, ಮ್ಯಾಟ್ರಿಕ್ಸ್ ಪಾರ್ಟ್‌ನರ್ಸ್ ಇಂಡಿಯಾ, ಗೂಗಲ್, ಮೈಕ್ರೋಸಾಫ್ಟ್, ಸಿಗುಲರ್ ಗಫ್, ಕಾರ್ಲೈಲ್ ಗ್ರೂಪ್, ಬೈಲ್ಲಿ ಗಿಫರ್ಡ್, ಲೂಪಾ ಸಿಸ್ಟಮ್ಸ್, ಲಕ್ಸರ್ ಗ್ರೂಪ್, ಐಐಎಫ್‌ಎಲ್, ಕೋಟಕ್, ಕ್ಯಾಟಮರನ್, ಬೇ ಕ್ಯಾಪಿಟಲ್, ಎಡೆಲ್‌ವೈಸ್ ಮತ್ತು ಒಮಿಡ್ಯಾರ್ ನೆಟ್‌ವರ್ಕ್ ಸೇರಿದಂತೆ ಇತರ ಕಂಪನಿಗಳ ಹೂಡಿಕೆದಾರರ ಜಾಲ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+