''ಮೌಂಟೈನ್ ಡ್ಯೂ ಐಸ್'' ಬಿಡುಗಡೆ ಮಾಡಿದ ಪೆಪ್ಸಿಕೋ ಇಂಡಿಯಾ
ನವದೆಹಲಿ, ಫೆಬ್ರವರಿ 11: ಬೇಸಿಗೆ ಋತು ಆರಂಭವಾಗುತ್ತಿದ್ದು, ಜನರಿಗೆ ಅನುಕೂಲ ಕಲ್ಪಿಸಲು ಪೆಪ್ಸಿಕೋ ಇಂಡಿಯಾ ಹೊಸದಾದ ತಾಜಾ, ನಿಂಬೆರಸ ಆಧಾರಿತ ಪಾನೀಯ ಮೌಂಟೈನ್ ಡ್ಯೂ ಐಸ್ ಅನ್ನು ಬಿಡುಗಡೆಗೊಳಿಸಿದೆ.
ಪೆಪ್ಸಿಕೋ ಇಂಡಿಯಾ ನಡೆಸಿದ ವ್ಯಾಪಕ ಗ್ರಾಹಕ ಸಂಶೋಧನೆಯಲ್ಲಿ ಭಾರತೀಯ ಗ್ರಾಹಕರು ನಿಂಬೆ ರಸದ ರುಚಿಯನ್ನು ಬಯಸುತ್ತಾರೆ. ಮತ್ತು ನಿಜವಾದ ನಿಂಬೆ ಅನುಭವಕ್ಕೆ ಹತ್ತಿರವಾದ ರುಚಿಯನ್ನು ನೀಡುವ ಪಾನೀಯಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ.
ಮೌಂಟೇನ್ ಡ್ಯೂ ಐಸ್ ಬಿಡುಗಡೆ ಕುರಿತು ಮಾತನಾಡಿದ ಮೌಂಟೇನ್ ಡ್ಯೂ & ಸ್ಟಿಂಗ್, ಪೆಪ್ಸಿಕೋ ಭಾರತೀಯ ವರ್ಗ ನಿರ್ದೇಶ ವಿನೀತ್ ಶರ್ಮಾ- ''ಮೌಂಟೇನ್ ಡ್ಯೂ ಐಸ್ ಅನ್ನು ಪ್ರಾರಂಭಿಸುವುದು ನಮ್ಮ ಮಹತ್ವದ ಮೈಲಿಗಲ್ಲು ಮತ್ತು ಪಾನೀಯ ವರ್ಗದ ನಾವೀನ್ಯತೆಯ ಬಗೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಮೌಂಟೇನ್ ಡ್ಯೂ ಐಸ್ ಗ್ರಾಹಕರಿಗೆ ನಿಂಬೆ ರಸ ಹಾಗೂ ಪಾನೀಯದ ರುಚಿಯ ಎರಡೂ ಉತ್ತಮ ಜಗತ್ತನ್ನು ಒಟ್ಟುಗೂಡಿಸುತ್ತದೆ. ಈ ಆವಿಷ್ಕಾರವು ವ್ಯಾಪಕವಾದ ಗ್ರಾಹಕ ಸಂಶೋಧನೆಯನ್ನು ಆಧರಿಸಿದೆ ಮತ್ತು ನಮ್ಮ ಗ್ರಾಹಕರಿಗೆ ಅವರ ಆಯ್ಕೆಯ ಪಾನೀಯವನ್ನು ಒದಗಿಸುವ ಮಹತ್ವಾಕಾಂಕ್ಷೆಗೆ ಅನುಗುಣವಾಗಿರುತ್ತದೆ'' ಎಂದಿದ್ದಾರೆ.

ಮೌಂಟೇನ್ ಡ್ಯೂ ಐಸ್ ಭಾರತಕ್ಕಾಗಿ ವಿಶೇಷವಾಗಿ ತಯಾರಿಸಿದ ಪಾನೀಯವಾಗಿದೆ. ಮೌಂಟೇನ್ ಡ್ಯೂ ಈಗ ದಶಕಗಳಿಂದ ಹೆಚ್ಚು ಪ್ರಿಯವಾದ ಬ್ರಾಂಡ್ ಆಗಿರುವುದರಿಂದ, ಗ್ರಾಹಕರು ಹೊಸ ಮೌಂಟೇನ್ ಡ್ಯೂ ಐಸ್ ಅನ್ನು ಸಹ ಆನಂದಿಸಲಿದ್ದಾರೆ ಎಂಬ ವಿಶ್ವಾಸವನ್ನು ಹೊಂದಿದೆ.
ಮೌಂಟೇನ್ ಡ್ಯೂ ಐಸ್ ಆಧುನಿಕ ಮತ್ತು ಸಾಂಪ್ರದಾಯಿಕ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಏಕ / ಬಹು ಸರ್ವ್ ಪ್ಯಾಕ್‌ಗಳಲ್ಲಿ ಲಭ್ಯವಿರುತ್ತದೆ.












Click it and Unblock the Notifications