ಕೋವಿಡ್ 19 ಆತಂಕದ ನಡುವೆ ದಂತ ಆರೈಕೆ ಅತಿ ಮುಖ್ಯ
ಬೆಂಗಳೂರು, ಫೆಬ್ರವರಿ 5: ಕೋವಿಡ್-19 ಸಾಂಕ್ರಾಮಿಕವು ನಮ್ಮ ಹಲವಾರು ದೈನಂದಿನ ಚಟುವಟಿಕೆಗಳಿಗೆ ತಡೆಯೊಡ್ಡಿದೆ, ಅದರಲ್ಲಿ ನಿಯಮಿತ ದಂತವೈದ್ಯರ ಭೇಟಿಯೂ ಸೇರಿದೆ. ಸಾಂಕ್ರಾಮಿಕ ತೀವ್ರ ಏರಿಕೆಯಲ್ಲಿರುವಾಗ ಆರೋಗ್ಯ ಅಧಿಕಾರಿಗಳು ದಂತ ಆರೈಕೆ ಮತ್ತು ದಂತ ಚಿಕಿತ್ಸಾ ಕೇಂದ್ರಗಳ ಮೇಲೆ ತುರ್ತು ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕು ಮತ್ತು ರೋಗಿಗಳಿಗೆ ಅಗತ್ಯವಲ್ಲದ ಅಥವಾ ತುರ್ತು ಇಲ್ಲದ ಪ್ರಕ್ರಿಯೆಗಳಾದ ನಿಯಮಿತ ಪರೀಕ್ಷೆಗಳು, ಸ್ವಚ್ಛಗೊಳಿಸುವಿಕೆ, ಫಿಲ್ಲಿಂಗ್ ಇತ್ಯಾದಿಗಳಿಗೆ ಕಾಯುವಂತೆ ಸಲಹೆ ಮಾಡಿದರು. ಇದರಿಂದ ಭಾರತದಾದ್ಯಂತ ಬಾಯಿ ರೋಗಗಳಲ್ಲಿ ರೋಗತಡೆಯ ದಂತವೈದ್ಯ ಆರೈಕೆಯ ಭೇಟಿಗಳಲ್ಲಿ ಗಮನಾರ್ಹ ಕುಸಿತ ಉಂಟಾಯಿತು.
ಕ್ಲೋವ್ ಡೆಂಟಲ್‍ನ ಚೀಫ್ ಕ್ಲಿನಿಕಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಡಾ.ವಿಮಲ್ ಅರೋರ, ಹೇಳುವಂತೆ, "ಭಾರತದಲ್ಲಿ ಬಾಯಿ ಆರೋಗ್ಯ ದತ್ತಾಂಶವು 10 ಭಾರತೀಯರಲ್ಲಿ 8 ಮಂದಿಗೆ ಕೆಲವು ಅಥವಾ ಇನ್ನಾವುದೋ ಬಗೆಯ ದಂತ ರೋಗಗಳಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ ಅದು ಬಾಯಿ ಮತ್ತು ದಂತ ಆರೋಗ್ಯವು ಕೋವಿಡ್ ಪೂರ್ವ ಸಮಯದಲ್ಲೂ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು ಎನ್ನುವುದನ್ನು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಈ ಸಾಂಕ್ರಾಮಿಕದಿಂದ ಜನರು ಕಳೆದ 10 ತಿಂಗಳಿಂದ ಅವರ ದಂತವೈದ್ಯರ ಭೇಟಿಯನ್ನು ಮತ್ತಷ್ಟು ತಡ ಮಾಡಿದ್ದಾರೆ. ಇದರ ಫಲಿತಾಂಶದಿಂದ ಬಾಯಿ ಆರೋಗ್ಯದ ಪರಿಸ್ಥಿತಿಗಳನ್ನು ಸರಳವಾದ ದಂತಕುಳಿ ಭರ್ತಿಯೊಂದಿಗೆ ಮಾಡಬಹುದಾಗಿದ್ದು ಈಗ ಆರ್‍ಸಿಟಿ ಮತ್ತು ಕ್ರೌನಿಂಗ್ ಅಗತ್ಯವಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಹಲ್ಲುಗಳ ನಷ್ಟಕ್ಕೆ ಕಾರಣವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂದಾಜಿನ ಪ್ರಕಾರ ಪ್ರಸ್ತುತ(2019) ಭಾರತದ ಶೇ.60ರಷ್ಟು ವಯಸ್ಕ ಜನಸಂಖ್ಯೆ ಮತ್ತು ಶೇ.70ರಷ್ಟು ಅದರ ಶಾಲೆಗೆ ಹೋಗುವ ಮಕ್ಕಳು ದಂತಕುಳಿಗಳು ಅಥವಾ ದಂತ ಸವೆತದಿಂದ ಹಾನಿಗೊಳಗಾಗಿದ್ದಾರೆ. ಮತ್ತು ಹಲ್ಲಿನ ಸುತ್ತಲು ಜೀವಕೋಶದ ಸೋಂಕಿನ ಪೆರಿಡಾಂಟಲ್ ರೋಗವು ಶೇ.85ರಷ್ಟು ಜನಸಂಖ್ಯೆಗೆ ಬಾಧಿಸುತ್ತಿದೆ. ದೇಶವು ಬಾಯಿ ಕ್ಯಾನ್ಸರ್ ವಿಶ್ವದ ರಾಜಧಾನಿ ಎಂದು ಪರಿಗಣಿತವಾಗಿದೆ. ಒಟ್ಟು ದೇಹದ ಕ್ಯಾನ್ಸರ್ ಗಳಲ್ಲಿ ದೇಹದ ಎಲ್ಲ ಕ್ಯಾನ್ಸರ್ ಶೇ.30ಕ್ಕೂ ಹೆಚ್ಚು ಬಾಯಿ ಕ್ಯಾನ್ಸರ್ ಗಳಾಗಿವೆ".

ದಂತ ಚಿಕಿತ್ಸೆಯಲ್ಲಿ ಕುಸಿತ
''ಭಾರತದಾದ್ಯಂತ ದಂತರೋಗಿಗಳಿಂದ ದಂತವೈದ್ಯರ ಭೇಟಿಗಳಲ್ಲಿ ಕುಸಿತವು ಗಮನಾರ್ಹವಾಗಿದ್ದು ಅದು ರೋಗಿಗಳಿಗೆ ಹೆಚ್ಚು ಹಣ ಮತ್ತು ಹೆಚ್ಚು ನೋವನ್ನುಂಟು ಮಾಡುತ್ತಿದೆ. ದೇಶಾದ್ಯಂತ ಕ್ಲೋವ್ ಕ್ಲಿನಿಕ್‍ಗಳು ಪ್ರತಿ ತಿಂಗಳು ಸರಾಸರಿ 45,000 ರೋಗಿಗಳನ್ನು ಕಾಣುತ್ತಿವೆ(ಕೋವಿಡ್ ಮುಂಚಿನ ಸಮಯದಲ್ಲಿ); 2020ರಲ್ಲಿ ಅದೇ ತಿಂಗಳುಗಳಲ್ಲಿ ಶೇ.20ಕ್ಕೆ ಕುಸಿದಿದೆ. ಭಾರತದಾದ್ಯಂತ ದತ್ತಾಂಶವು ಜೂನ್ 2020ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ ದೇಶಾದ್ಯಂತ ರೋಗಿಯ ಭೇಟಿಯು 9,549 ಇದ್ದು ಜೂನ್ 2019ರಲ್ಲಿ 45,979ಕ್ಕೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. ಅದೇ ರೀತಿ, ಜುಲೈ 2020ರಲ್ಲಿ ಅದು 13,784 ಮತ್ತು ಅಕ್ಟೋಬರ್ 2020ರಲ್ಲಿ 23,591 ಇತ್ತು. ಅಕ್ಟೋಬರ್-ಡಿಸೆಂಬರ್ 2020ರ ತ್ರೈಮಾಸಿಕವು ದೇಶಾದ್ಯಂತ ರೋಗಿಗಲ ಭೇಟಿಯ ಸಂಖ್ಯೆಯಲ್ಲಿ ಕ್ರಮೇಣ ಹೆಚ್ಚಳವನ್ನು ಕಂಡಿದೆ'' ಎಂದು ಲೆಫ್ಟಿನೆಂಟ್ ಜನರಲ್ ಅರೋರ ಹೇಳಿದ್ದಾರೆ.

ಕ್ಲೋವ್ ಡೆಂಟಲ್‍ನ ಸೌಥ್ ವೆಸ್ಟ್ ಇಂಡಿಯಾದ ಜನರಲ್ ಮ್ಯಾನೇಜರ್ ಡಾ.ಅನಿರುದ್ಧ್ ಸಿಂಗ್, ''ಸಾಂಪ್ರದಾಯಿಕವಾಗಿ ಪ್ರತಿ ಆರು ತಿಂಗಳಿಗೆ ಚೆಕಪ್‍ಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಜನರು ಇದನ್ನು ನಿರ್ಲಕ್ಷಿಸುತ್ತಾರೆ, ಇದರಿಂದ ದಂತ ಸಮಸ್ಯೆಗಳ ತೀವ್ರತೆಯು ದುಬಾರಿ ಚಿಕಿತ್ಸೆಗಳು ಮತ್ತು ಆರೈಕೆಗೆ ಕಾರಣವಾಗುತ್ತವೆ. ರಾಷ್ಟ್ರೀಯ ಬಾಯಿ ಆರೋಗ್ಯ ನೀತಿಯ ಕರಡಿನ ಪ್ರಕಾರ, ಇತರೆ ಬಾಯಿ ಸಮಸ್ಯೆಗಳಿಗಿಂತ ಶಾಶ್ವತ ಹಲ್ಲಿನ ಚಿಕಿತ್ಸೆ ನೀಡದ ದಂತಕುಳಿಗಳ ಪ್ರಮಾಣ ಮತ್ತು ತೀವ್ರವಾದ ಪೆರಿಡಾಂಟಿಟಿಸ್ ಅಪಾರವಾಗಿ ಹೆಚ್ಚಿದೆ. ಆದಾಗ್ಯೂ ಶೇ.12.4ರಷ್ಟು ವಯಸ್ಕರು ದಂತವೈದ್ಯರಿಂದ ಎಂದಿಗೂ ತಮ್ಮ ಬಾಯಿ ಪರೀಕ್ಷೆ ಮಾಡಿಸಿಕೊಂಡಿಲ್ಲ. ಚಿಕಿತ್ಸೆಗಳನ್ನು ತಪ್ಪಿಸಲು ನಿಯಮಿತ ಪರೀಕ್ಷೆಗಳು ಅಗತ್ಯ. ಆದಾಗ್ಯೂ, ಕೋವಿಡ್‍ನಿಂದಾಗಿ ರೋಗತಡೆಯ ಚಿಕಿತ್ಸೆಗಳು ಶೇ.63.7ರಷ್ಟು ಕಡಿಮೆಯಾಗಿವೆ, ಏಕೆಂದರೆ ರೋಗಿಗಳ ಭೇಟಿ ಕುಸಿದಿದೆ''ಎಂದರು.












Click it and Unblock the Notifications