16ರ ಬಾಲೆ ಮೇಲೆ ಸಾಮೂಹಿಕ ಅತ್ಯಾಚಾರ

ಅತ್ಯಾಚಾರಕ್ಕೊಳಗಾದ ಹುಡುಗಿಯ ಭಾವನ ಗೆಳೆಯ ರೂಪೇಶ್(26)ಎಂಬವನೇ ತನ್ನ ಗೆಳೆಯರೊಂದಿಗೆ ಸೇರಿ ಈ ಕೃತ್ಯ ಎಸೆಗಿದ್ದಾನೆ ಎಂದು ತಿಳಿದುಬಂದಿದೆ.
ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ ಹುಡುಗಿಯನ್ನು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮನೆಯೊಂದ ಕರೆದೊಯ್ಯಲಾಗಿದೆ. ನಿಮ್ಮ ಭಾವನಿಗೆ ಅಪಘಾತ ಸಂಭವಿಸಿದೆ ಬೇಗ ಬಾ ಎಂದಿದ್ದಾರೆ. ರೂಪೇಶ್ ಮಾತನ್ನು ನಂಬಿದ ಹುಡುಗಿ ಅವರೊಟ್ಟಿಗೆ ಹೋಗಿದ್ದಾಳೆ.
ನಂತರ ನಿರ್ಜನ ಪ್ರದೇಶದಲ್ಲಿ ಆಕೆ ಮೇಲೆ ರೂಪೇಶ್ ಹಾಗೂ ಇನ್ನೂ 5 ಜನ ಅಮಾನುಷವಾಗಿ ಅತ್ಯಾಚರ ಎಸೆಗಿದ್ದಾರೆ. ಸದ್ಯಕ್ಕೆ ರೂಪೇಶ್ ನನ್ನು ಹಿಡಿದಿರುವ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಉಳಿದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ, ತನಿಖೆ ಮುಂದುವರೆದಿದೆ.












Click it and Unblock the Notifications